ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪರಿಚ್ಛೇದ (F, * * *# ' + ' + 111 #1 Afst n 157!

  1. \ nor< ೧೧೨೧,

4 ೧4• n hn , ದಲ್ಲಿ ಬರುತ್ತಿದ್ದಳು ! ಅವಳ ತಲೆಯಿಂದ ಕಾಲಿನವರೆಗೂ ವಜ್ರ ಖಚಿತವಾದ ಉಡು ಪುಗಳು ಮುಚ್ಚಿಕೊಂಡಿದ್ದವು. ಕಾಳಭುಜಂಗದ ಹಾಗಿದ್ದ ದೀರ್ಘವಾದ ವೇಣಿ ಯೊಂದು ಮಾತ್ರ ಕಾಣುತ್ತಿತ್ತು, ಕಟಿಬಂಧದಿಂದ ಕತ್ತಿಯೊಂದು ತೂಗಾಡುತ್ತಿತ್ತು. ಸಂಗೀತವು ಪೂರೈಸುವುದಕ್ಕೆ ಮುಂಚೆ ಓಡಿ ಹೋಗುತ್ತಿದ್ದ ಸೈನ್ಯದವರು ತಂಡತಂಡ ವಾಗಿ ಕೂಗುತ್ತ ಹಿ೦ದಿರಿಗಿ ರಣಕ್ಷೇತ್ರಕ್ಕೆ ಓಡಿಬಂದರು. ಅಜಯಸಿಂಹನು ತನ್ನ ಸೈನ್ಯದವರನ್ನು ಉತ್ಸಾಹಗೊಳಿಸಿ ಮುಂದೆ ಬಂದು ನಿಂತನು. ಆಗ ರಮಣಿಯು ವೀಣೆ ಯನ್ನು ನೆಲದಮೇಲಿಟ್ಟು ಅಜಯಸಿಂಹನ ಎದುರಿಗೆ ಬಂದು ಕತ್ತಿಯನ್ನು ಹಿಡಿದೆತ್ತಿ ಕೊಂಡು, II ಅಜಯಸಿಂಹ! ಎಂದಳು. ಅಜಯಸಿಂಹನ ಶರೀರವು ಮುಳ್ಳು ಚುಚ್ಚಿ ದಹಾಗೆ ನಡುಗಿತು. ಆಗ ಬರೀಶ್ವರನು, “ನೋಡಿಕೊ, ನಾರೀ ಸೇನಾಪತಿಯ ಭೂಭಂಗಿಯಿಂದ ಭೀತನಾಗದಿರು, ಅವಳ ಉಜ್ವಲವಾದ ಕಟಾಕ್ಷಕ್ಕೆ ಬೆರಗಾಗಬೇಡ? ಎಂದು ಹೇಳಿದ್ದ ಕಡೆಯ ಮಾತುಗಳು ಸ್ಮರಣೆಗೆ ಬಂದವು. ಅವನು ತನ್ನ ಚಿತ್ತವಿಕಾರ ವನ್ನು ತಡೆದುಕೊಂಡು ಕತ್ತಿಯನ್ನು ಎತ್ತಿ ಹಿಡಿದುಕೊಂಡನು. ರಮಣಿಯು 11 ಇನ್ನು ಅಬಲೆಯಾದ ರಮಣಿಯ ಮೇಲೆ ವ್ಯರ್ಥವಾಗಿ ಕೌಲ್ಯವನ್ನು ತೋರಿಸಿ ಪ್ರಯೋಜನ ವೇನು ? ನಿನ್ನ ಸೈನ್ಯದವರು ಯುದ್ಧರಂಗವನ್ನು ಬಿಟ್ಟು ಓಡಿಹೋಗುವುದನ್ನು ನೋಡು!” ಎಂದಳು. ಹೀಗೆಂದು ಹೇಳಿ ನಕ್ಕಳು. ಅವಳ ಆ ನಿಕಟವಾದ ನಗುವು ವಿಜಯಸಿಂಹನ ಹೃದಯವನ್ನು ತಟ್ಟಿತು. ಅವನು ಮಂತ್ರದಿಂದ ಮುಗ್ಧನಾದವನ ಹಾಗಾಗಿ ಹೆಂಗ. ಸನ್ನು ನೋಡುತ್ತಿದ್ದನು, ಹೆಂಗಸು ಮುಸು ನಕ್ಕು ಮುಖವನ್ನು ಮರೆಮಾಡಿದ್ದ ಅವಕುಂಠನವನ್ನು ತೆಗೆದುಟ್ಟಳು, ಅಜಯನು ನಡುಗಿ, 1 ಇದೇನು ? ಇವಳು ಆ ಉನ್ಮಾದಿ! ” ಎಂದನ: , ... -------.. ಹನ್ನೆರಡನೆಯ ಪರಿಚ್ಛೇದ. - ಯುದ್ಧವು ಕೆಲವು ಕಾಲ ನಡೆದು ಬಳಿಕ ಚಾಂದಸುಲತಾನೆಯು ಮೊಗಲರ ಸಂಗಡ ಸಂಧಿಯನ್ನು ಮಾಡಿಕೊಂಡಳು, ಮೊಗಲರು ಕಣಕ್ಷೇತ್ರದಲ್ಲಿ ನಾರೀಸೇನಾ ಪತಿಯ ವೀರತ್ವವನ್ನು ನೋಡಿ ಆಶ್ಚರ್ಯಗೊಂಡು ಭಗೊತ್ಸಾಹಿಗಳಾಗಿದ್ದರು. ಚಾಂದಸುಲತಾನೆಯು ವೀರಾಂಗನೆಯಾಗಿದ್ದಳಲ್ಲದೆ ಯಾವದೋ ದೇವತಾ ಉಪಾ ಸನದ ಬಲದಿಂದ ಅಸಾಧ್ಯ ಸಾಧನೆ ಮಾಡಬಲ್ಲವಳಾಗಿದ್ದಳೆಂದ, ಮಂತ್ರ ಬಲ