ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WV ಅಮ್ಮತವಲನ • y 14 ll 11 11 y1 \r 1+ 4 y YV ++ Y 1411 1/22/1/1) filf, tv, rld's೧.

  1. rovshttshirtsAr\\heshnar USA

ಡುವುದೆಂದು ಕಿವಿಯಲ್ಲಿ ಯಾರೋ ಹೇಳಿದಹಾಗೆ ತೋರುತ್ತದೆ. ಸಮಸ್ತ ವಾದ ಆರ್ಯಾವರ್ತವೂ ನಿನ್ನ ನಖದರ್ಪಣದಲ್ಲಿ ಅಂಕಿತವಾಗಿದೆ. ಹಿಮಾಲಯಶಿಖರದಿಂದ ಪಂಗೋಪಸಾಗರದ ತೀರದವರೆಗೂ ಇರುವ ಪ್ರತಿಒಂದು ಪರ್ಣಕುಟೀರವೂ ಪ್ರತಿ ಒಂದು ರಾಜಪ್ರಾಸಾದವೂ ಕರತಲಾಮಲಕವಾಗಿದೆ ದಿಲ್ಲಿಯ ಸಾಮಾಜನು ಇಂದು ರತ್ನ ಸಿಂಹಾಸನದಲ್ಲಿ ಕುಳಿತಿರುವನು, ನಾಳೆ ಅಕಬರಷಹನು ಗೋದಾವರಿ ಪುಳಿನದಲ್ಲಿ ಕುವ ಸನ್ಯಾಸಿಯ ತಪೋವನದಲ್ಲಿ ಛದ್ಮವೇಷದಲ್ಲಿ ನಿಂತಿರುವನು. ಆದುದರಿಂದ ನಾಳೆ ಆ ಹುಡುಗಿಯು ನಿನ್ನ ದೃಷ್ಟಿಗೆ ಸಂಬಂಧವುಂಟಾದರೂ ಆಗಬಹುದು, ನಾನು ಹನ್ನೆರ ತುವರ್ಷಕಾಲದಿಂದ ಹುಡುಗಿಗೆ ಸಲವಾಗಿ ಉನ್ಮಾದಿನಿಯ ವೇಷದಲ್ಲಿ ಗಿರಿ ಗುಹೆಗಳ ಳಿಯೂ ಗಹನಕಾನನಗಳಲ್ಲಿಯ ಅಲಿಯುತ್ತಿದ್ದೆನು, ಸನ್ಯಾಸಿಯವೇಷವನ್ನು ತಾಳೆ ವಿಂಧ್ಯಗಿರಿಯ ತುಷಾರಮಯವಾದ ಪಾಷಾಣಗಳ ಮೇಲೆ ಅನೇಕ ರಾತ್ರಿಗಳನ್ನು ಕಳ ದಿರುವೆನು. ಆದರೂ ನನ್ನ ಆಶೆಯು ಕೈಗೂಡಲಿಲ್ಲ, ಭಾರತೇಶ್ವರ! ನೀನು ನನ್ನ ಆಶೆ ಯನ್ನು ಕೈಗೂಡಿಸಬಲ್ಲೆಯಾ? ಈ ಅಭಾಗಿನಿಯಾಗಿ ಕಾತರಪ್ರಾಣವುಳ್ಳ ಹುಚ್ಚು ಹಂಗಸಿನ ರುಃಖವೃತ್ತಾಂತವನ್ನು ಕೇಳಿ ನಗುವಿಯೋ ಅಥವಾ ಕೋಪಗೊಳ್ಳುವಿಯೋ ಅದನ್ನು ನೀನೇ ಬಲ್ಲೆ. ಮುಮತಾಜಬೇಗಂ” ಅಕಬರಷಹನು ಕಾಗದವನ್ನೋದಿ ಅದರಲ್ಲಿದ್ದ ಚಿತ್ರಪಟವನ್ನು ನೋಡಿ, 11 ಮುಮತಾಜಬೇಗo! ಆಶ್ಚರ್ಯಪ್ರಸ್ತಾಪ!” ಎಂದೆಂದು ಕೊಂಡನು, ಆ ಸಮಯ ರಲ್ಲಿ ದ್ವಾರಪಾಲಕನು ಬಂದು 11 ಸೇನಾಪತಿ ಅಜಯಸಿಂಹನು ಪ್ರಭುಗಳ ಅಪ್ಪಣೆಯ ನ್ನೆದುರುನೋಡುತ್ತ ಬಾಗಿಲಲ್ಲಿ ನಿಂತಿದ್ದಾನೆ ” ಎಂದು ಅರುಹಿದನು. ದ್ವಾರಪಾಲಕನ ಬಿನ್ನಹ ಪೂರೈಸುವದರೊಳಗೆ ಅಜಯಸಿಂಹನು ಕೊಠಡಿಯೊಳಗೆ ಪ್ರವೇಶ ಮಾಡಿದ್ದನು. ಅವನ ಮುಖಮಂಡಲವು ಹೆಚ್ಚು ಪಾಂಡುವರ್ಣವುಳ್ಳುದುದಾಗಿ ಮೈಯೆಲ್ಲಾ ಹೆಚ್ಚು ಬೆವತು ನಡುಗುತ್ತಿತ್ತು, ಅಕಬರನು ನೋಡಿ, ವತ್ಸ, ಅಜಯ! ಮಾರ್ಗಾಯಾಸದಿಂದ ಬಹಳ ಬಳಲಿರುವ ಹಾಗಿದೆ, ಈಗ ವಿಶ್ರಮಿಸಿಕೊಂಡಿರು, ನಿನ್ನ ಸಂಗಡ ಮಾತಾಡು ವುದು ಬಹಳ ಉಂಟು, ಕಡೆಗೆ ಎಲ್ಲವನ್ನೂ ಹೇಳುವೆನು, ನೀನು ಅಹಮದ್‌ನಗರದ ಯುದ್ಧದಲ್ಲಿ ವೀರಸೇನಾಪತಿಯ ಹಾಗೆ ಕಾರವನ್ನು ನಿರ್ವಹಿಸಿರು, ಅದಕ್ಕೆ ಪುರಸ್ಕಾರವಾಗಿ' ಮಾತುಪೂರೈಸುವದರೊಳಗೆ ಅಜಯಸಿಂಹನು ಕಂಪಿತ ಕಂಸದ, 11 ಅದಕ್ಕೆ ಪುರಸ್ಕಾರವಾಗಿ ಸುರಸುಂದರಿಯಾದ ಹಿರಣ್ಮಯಿಯು ಮೊಗಲಯ ಅಂಕದಲ್ಲಿ