ಅನ್ನುತಶಿಕ AAAAAArhnny\ANAANIAAANAnwh/AANNAAAAAJNAAAAAAAAAAMWWWWYWWWy ಅವನ ಕಣ್ಣುಗಳಲ್ಲಿ ನೀರು ತುಂಬಿದುದನ್ನು ಯಾವಾಗಲೂ ಕಂಡಿರಲಿಲ್ಲ, ಅವಳು ಆಗ ಎದ ಕದಲಿದವಳ ಹಾಗಾಗಿ ಬೇಗನೆ ಮುಂದುವರಿದು ಹೋಗಿ ಎರಡು ಬಾಹುಗಳಿಲ್ಲ ದಲೂ ಅಚಯನ ಕುತ್ತಿಗೆಯನ್ನು ಕಟ್ಟಿಕೊಂಡು, “ ಯಾರಿಗೆ ಫಲವಾಗಿ ಅಳುತ್ತಿ? ನನಗೆ ಸಲವಾಗಿಯೆ ? ನಿನಗೆ ನಾನು ತೃಣಕ್ಕಿಂತ ತುಚ್ಛವಾದ ಪದಾರ್ಥ | ನಿನ್ನ ಕಣ್ಣುಗಳಲ್ಲಿ ನೀರು ತುಂಬಿರುವುದನ್ನು ಕಂಡು ನನ್ನ ಎದೆಯು ಒಡೆಯುತ್ತದೆ!” ಎಂದಳು, • ಅಜಯ-ನಿನ್ನ ಮಾತು ಯಾವುದೂ ನನಗೆ ಗೊತ್ತಾಗುವುದಿಲ್ಲ. ಹಿರಣ್ಮಯಿಯು ಪುನಃ ಹಿಂದಕ್ಕೆ ಸರಿದು, 11 ಕೇಳು, ಅಜಯ | ನೀನು ಕ್ಷತ್ರಿಯ ವೀರಗೌರವ ಸ್ವರೂಪನಾದ ಪ್ರತಾಪಸಿಂಹನಿಗೆ ಮಗ) ನೀನು ಒಬ್ಬ ನಿರ್ಭಾಗ್ಯ ಹೆಂಗಸಿಗೆ ಸಲುವಾಗಿ ಮಿವಾರದ ಪವಿತ್ರವಾದ ಹೆಸರಿಗೆ ಕಳಂಕವನ್ನು ಆರೋಪಿಸುವೆಯಾ ! ನಿನ್ನ ವೃದ್ಧನಾದ ತಂದೆಯ ಆಶೆಯನ್ನು ನಿರ್ಮೂಲಮಾತು ವಿಯಾಗಿ ಪ್ರಾಣವಿರುವವರೆಗೂ ಹಿರಣ್ಮಯಿಯನ್ನು ಯವನನು ಸ್ಪರ್ಶಮಾಡಲಾರನೆಂ ಬುದು ನಿಜ, ಆದರೆ ನಾನು ಈಗ ಬಾದಷಹನ ಅಂತಃಪುರದಲ್ಲಿ ವಾಸಮಾಡುತ್ತೇನೆ. ಲೌಕಿಕ ಆಚಾರಪ್ರಕಾರ ನಾನು ಈಗ ಯವನನಿಗೆ ಪರಿಣೀತೆಯಾರವಳು, ನಿನಗೆ ನಾನು ಮುಂದೆ ಮದುವೆಯಾಗುವುದು ಅಸಂಭವ ಅದು ಕಾರಣ ನೀನು ನನ್ನನ್ನು ಮರೆತು ಬಿಡೆಂದು ಬೇಡಿಕೊಳ್ಳುತ್ತೇನೆ, ನಿನ್ನ ಹಿರಣೆಯು ಭೂಮಿಯಲ್ಲಿ ಇಲ್ಲ ಎಂದು ತಿಳಿ ! ನನ್ನ ಗತಿಯೇನೆಂರು ಕೇಳುವಿಯೊ ? ಇಮೋ, ನೋಡು !” ಹೀಗೆಂದು ಹೇಳಿ ಹಿರಣ್ಯ ಯಿಯು ತನ್ನ ಉಡಿಯಿಂದ ಕತ್ತಿಯನ್ನು ತೆಗೆದು, 1 ಭಾಗ್ಯವಶದಿಂದ ಈ ಘೋರ ವಿಪತ್ತಿನಲ್ಲಿ ದೇವರು ಒಂದು ಸಂಗಾತಿಯನ್ನು ಒದಹಿಸಿಕೆಟ್ಟನು” ಎಂದು ಹೇಳಿದಳು. - ಅಜಯ :-ಹಾ, ಹಿರಣ್ಮಯಿ ! ನಿನ್ನನ್ನು ಮರೆತು ನಾನು ಬದುಕಿರುವೆನೆಂದು ತಿಳಿಕೊ೦ಡಿಯಾ ? ಪ್ರಾಣವು ಪುಡಿಚೂರ್ಣವಾದರೂ, ಹೃದಯವು ಶತಧಾ ಸೀಳಿಹೋ ದರೂ ಪ್ರಾಣಸಂಗಿನಿಯಾದ ಹಿರಣ್ಮಯಿಯ ಸ್ಮರಣೆಯು ಪ್ರಾಣದ ಪ್ರಾಣದೊಳಗೆ ವಿರಾಜಿಸುತ್ತಿರುವುದು / ನೀನು ಬಾದಷಹನ ಅಂತಃಪುರದಲ್ಲಿ ಇರುತ್ತಿಯೆಂದು ಕೇಳಿದ. ಮೊದಲ್ಗೊಂಡು ಸಹಿಸಲಸದಳವಾದ ಯಾತನೆಯನ್ನು ಸಹಿಸಿಕೊಂಡಿರುವುದನ್ನು ನೀನು ಹೇಗೆ ತಾನೇ ತಿಳಿಯಬಲ್ಲೆ ? ಆತ್ಮರಕ್ತದಲ್ಲಿ ಅಂತರವೆಲ್ಲಾ ನೆರೆದುಹೋಗಿದೆ ಹೃದ ಯವು ಕ್ಷತವಿಕ್ಷತವಾಗಿದೆ ಹೃದಯವನ್ನು ಬಿಚ್ಚಿ ತೋರಿಸಬಹುದಾದೆ, ಈ ಹದ ಮದಲ್ಲಿ ಎಂಥಾ ರಕ್ತದ ಪ್ರವಾಹವು ಹರಿಯುತ್ತಿದೆ ಎಂದು ತೋರುತ್ತಿದ್ದೆನು ||
ಪುಟ:ಅಮೃತಪುಲಿನ.djvu/೭೨
ಗೋಚರ