ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೆಯ ಪರಿಚ್ಛೇದ ಓತಿ VMV/yyyyyy/Y nAr\\vvvvvvvv www , ಹಿರಣ್ಮಯಿಯು ಅಶ್ರುಜಲದಿಂದ ಶುದ್ಧವಾದ ಕಂಠದಿಂದ, “ ಕೇಳು ಅಜಯ | ನೀನು ಮಿವಾರದ ರಾಜ್ಯಕ್ಕೆ ಭರವಸೆ ಸ್ವರೂಪನು | ರಾಜಪುತಾನಕ್ಕೆ ಅಧಿಷ್ಠಾತ್ರಿ ಯಾದ ಭಗವತೀಸಿಂಹವಾಹಿನಿಗೆ ಪ್ರಿಯತಮನಾದ ವೀರನು ! ಅವಳ ಪ್ರಿಯತಮನಾದ ಮಗ ಅಜಯಸಿಂಹನಿಗೆ ನಿರ್ಭಾಗ್ಯ ಹಿರಣ್ಮಯಿಯು ಮದುವೆಯಾಗುವುದು ಅವಳಿಗೆ ಇಷ್ಟವಿಲ್ಲ, ನೀನು ಉದಯಪುರವನ್ನು ಬಿಟ್ಟು ಹೊರಡುವುದಕ್ಕೆ ಹಿಂದಿನ ದಿನ ರಾತ್ರಿ ಆ ಸಿಂಹವಾಹಿನಿಯು ನನ್ನ ಕನಸಿನಲ್ಲಿ ಬಂದು, “ ಜೋಕೆ ! ಹಿರಣ್ಮಯಿ ! ನೀನು ಅಜಯಸಿಂಹನಿಗೆ ಈಡೊಪ್ಪುವವಳಲ್ಲ ” ಎಂದು ಹೇಳಿದಳು, ಆಗ ಅದನ್ನು ಬರೀ ಸ್ವಪ್ನವೆಂದು ತಿಳಿದಿದ್ದೆನು, ಅದು ಬರೀ ಸ್ವಪ್ನ ನಲ್ಲ ! ನಿಜವಾಗಿಯೂ, ನಾನು ನಿನ್ನನ್ನು ಸ್ಪರ್ಶ ಮಾಡಿದರೆ ನಿನಗೆ ಹೆಚ್ಚಾದ ಅಮಂಗಳ ಉಂಟಾಗುವುದೆಂರು ಭಗವತಿಯ ಅಪ್ಪಣೆ ಯಾಗಿದೆ!!” ಎಂದಳು. - ಅಜಯ :-ದೇವ ! ಸುರಸುಂದರಿ | ಯವನನು ನಿನ್ನನ್ನು ಸ್ಪರ್ಶ ಮಾಡಲಾರ ದವನಾಗಿರುವಾಗ ನಿನ್ನನ್ನು ನಾನು ಮದುವೆ ಮಾಡಿಕೊಂಡರೆ ಯಾವ ರಾಜಪೂತ ವೀರನೂ ನನ್ನನ್ನು ಪತಿತನೆಂದು ತಿಳಿಯಲಾರನು, ಹೊರಡು, ಹಿರಣೆ | ನಿನ್ನನ್ನು ತಂದೆಯ ಬಳಿಗೆ ಕರೆದುಕೊಂಡು ಹೋಗಿ ಅವರ ಅಭಿಪ್ರಾಯವನ್ನು ಕೇಳುವನು. ಅಜಯನು ಹಿರಣ್ಮಯಿಯನ್ನು ಆಲಿಂಗನಮಾಡಿಕೊಳ್ಳುವುದಕ್ಕೆ ಕೈ ನೀಡಿ ದನು, ಆ ಸಮಯದಲ್ಲಿ ಹಿಂದಿನಿಂದ, 11 ಯಾವ ಕಳ್ಳನು ಭಾರತೇಶ್ವರನ ಅಂತಃಪುರ ದೊಳಗೆ ಪ್ರವೇಶಿಸಲು ಧೈರ್ಯಗೊಂಡಿರುವನೋ ಸೆಲಿಮನ ಕತ್ತಿಯು ಈ ತರ ಅಂಥ ವನ ಶಿರಚ್ಛೇದನ ಮಾಡುವುದು” ಎಂದು ಕೂಗಿ ಹೇಳುವುದರೊಂದಿಗೆ ಅಜಯಸಿಂಹನ ತಲೆಯಮೇಲೆ ದೀರ್ಘವಾದ ಕತ್ತಿಯೊಂದು ಚಂದ್ರ ಕಿರಣದಲ್ಲಿ ಥಳಥಳಗುಟ್ಟಿತು ! ಆದರೆ ಕತ್ತಿಯು ಅಜಯನ ಶಿರವನ್ನು ಸೋಂಕಲಿಲ್ಲ. ಮತ್ತಾರೋ ಆ ಸಮಯದಲ್ಲಿ ಎತ್ತಿದ್ದ ಆ ಕತ್ತಿಯನ್ನು ಮತ್ತೊಂದು ಕತ್ತಿಯಿಂದ ಪ್ರಚಂಡವಾದ ವೇಗದಿಂದ ಹೊಡಿದನು, ಸೆಲಿಮನ ಕತ್ತಿಯು ಝುನಝುನ ಎಂದು ನೆಲದ ಮೇಲೆ ಬಿದ್ದು ಹೋ ಯಿತು, ಯುವರಾಜನಾದ ಸೆಲಿಮನು ಈ ತೆರದಿ ಭಗ್ನ ಮನೋರಥನಾಗಿ, tc ಯಾವ ರಾಜ್ಯದಲ್ಲಿ ರಾಜನೇ ಸ್ವಂತವಾಗಿ ಕಳ್ಳನಿಗೆ ಆಶ್ರಯವನ್ನು ಕೊಡುವನೋ ಅಂಥಾ ರಾಜ್ಯವು ಸ್ವಲ್ಪ ಕಾಲದಲ್ಲೇ ಸುಟ್ಟು ನಾಶವಾಗಿ ಹೋಗುವುದು' ಎಂದು ಹೇಳಿ ಕೊಂಡು ಅಲ್ಲಿಂದ ಬೇಗನೆ ಹೊರಟು ಹೋದನು, ಅಜಯಸಿಂಹನು ನೋಡಲಾಗಿ ಸೆಲೆ ಮನ ಕತ್ತಿಯನ್ನು ಹೊಡೆದು ಕೆಡುಹಿದವನು ಸಮ್ರಾಟ ಅಕಬರನಾಗಿದ್ದನು | ಸಮ್ಮಾ ಜನು, “ ಅಜಯಸಿಂಹ ! ನನ್ನ ಸಂಗಡ ಬಾ” ಎಂದನು.