ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CL ಅಮೃತಪುಲಿನ ANAAAAAAAAAAAAAAAAAAAAAAAAnnahnny AvWNVI/w•W vik,.? ಪಾರಿಜಾತವು ನರಕದಲ್ಲಿ ಬಿದ್ದ ಬಳಿಕ, ದೇವರ ಆರಾಧನೆಗೆ ಅಯೋಗ್ಯವಾಗಿ ಹೋಗು ವುದು, ಪ್ರತಾಪಸಿಂಹನ ಪಾಷಾಣಮಯವಾದ ಪ್ರಾಣವು ಅಂಥಾದುದನ್ನು ಸಹಿಸಿ ಕಂಡಿತು, ತಾವು ಕಾಂತರಾಗಬೇಕು, ಮೃತವಾಗಿರುವ, ದೇಹವನ್ನು ಖಡ್ಡದಿಂದ ಭಿನಃ ಘಾಶಮಾಡಲೇಕೆ? ಅಕಬರ:-ತಾವು ತಾಳ್ಮೆಯನ್ನು ಬಿಡಕೂಡದು, ಸ್ಥಿರಚಿತ್ತದಿಂದ ತವೇಚನೆ ಯನ್ನು ಮಾಡಿ ನೋಡೋಣಾಗಲಿ, ಕೇವಲ ಅವಶ್ಯಕತೆಯಿಲ್ಲದಿದ್ದರೆ ತಮ್ಮಲ್ಲಿ ಬಾರಿ ಬಾರಿಗೂ ಈ ಪ್ರಸ್ತಾಪವನ್ನು ಮಾಡುತ್ತಿರಲಿಲ್ಲ, ದೃಷ್ಟಾಂತಕ್ಕೆ ಸಲವಾಗಿ ಹೇಳು ತೇನೆ: ಒಂದು ವೇಳೆ ಮಿವಾರದ ರಾಜವಂಶದ ಒಬ್ಬ ಯೌವನ ಪುರುಷನಿಗೂ ಆ ರಮಣಿಗೂ ಪರಸ್ಪರ ಪ್ರೀತಿ ಅನುರಾಗಗಳು ಅತಿಯಾಗಿದ್ದು ಅವರವರಿಗೆ ವಿವಾಹವಾ ಗದೆ ಹೋದರೆ ಅವರ ಭವಿಷ್ಯ ಸುಖಕ್ಕೆ ಹಾನಿಯುಂಟಾಗುವ ಸಂಭವದಲ್ಲಿ ತಾವು ಹೇಳುವ ಸಾಮಾನ್ಯವಾದ ಆಕ್ಷೇಪಣೆಯಿಲ್ಟರೂ ಅವರವರು ಮದುವೆಯಾಗುವುದು .ಅಪೇಕ್ಷಣೀಯವಾದುದಲ್ಲವೆ? - ಪ್ರತಾಪ:-ಮಿವಾರದ ರಾಜವಂಶರಲ್ಲಿ ಅಂಥಾ ಭಾಗ್ಯಶಾಲಿಯಾದವನಾರು! ಹೇಳಬಹುದು. ಭಯವೇನೂ ಇಲ್ಲ-ಸಂಕೋಚವೇಕೆ ? - ಅಕಬರ :-ಆ ಯುವಕನು ರಾಜಸ್ಥಾನದಲ್ಲಿ ಸರ್ವ ಶ್ರೇಷ್ಠ ವೀರನಾದ ಕುಮಾರ ಅಜಯಸಿಂಹ ನಿರ್ಭಾಗ್ಯನಾದ ಆ ಹುಡುಗನು ಈ ವಿವಾಹದಲ್ಲಿ ನಿರಾಶನಾ ದರೆ ಉನ್ಮತ್ತನಾಗಿ ಹೋಗುವನು! ಒಮ್ಮಿಂದೊಮ್ಮ ವೃದ್ದ ರಾಣಾನ ಮುಖಮಂಡಲವು ರಣೋನ್ಮತ್ತನಾದ ಯೋವೃಪತಿಯ ಹಾಗೆ ಕಾಲಾಂತಕ ಮೂರ್ತಿಯನ್ನು ತಾಳಿತು ! ಅವನ ಅಂಬಾದ ಕಣ್ಣುಗಳೆರಡೂ ಜವಾಕುಸುಮದ ಹಾಗೆ ರಕ್ತದ ಬಣ್ಣವಾಗಿ ತಿರುಗಲಾರಂಭಿಸಿದವು| ಕೆಂಡಗೊಂಡಿದ್ದ ಲಲಾಟದಲ್ಲಿ ನರಗಳು ಹುರಿಗೊಂಡ ಕರೇ ಹಂಬಿನಹಾಗೆ ಉಬ್ಬಿದವು | ತಿರದಿಂದ ಉಷ್ಠಿಷವು ಕಳಚಿ ನೆಲದಮೇಲೆ ಬಿದ್ದಿತು ! ಅವನೆದ್ದು ನಿಂತು ಒರೆಯಲ್ಲಿದ್ದ ಕತ್ತಿಯನ್ನು ಹಿಡಿದೆಳೆದು ವಜ್ರಮುಷ್ಟಿಯಿಂದ ಹಿಡಿದು ಸಮಾಜನನ್ನು ಗಂಟು ಹುಬ್ಬಿ .ನಿಂದ ಕುಟಿಲವಾದ ಕಟಾಕ್ಷದಿಂದ ನೋಡುತ್ತ, 11 ಯವನರಾಜನೆ ! ಮಲಗಿದ್ದ ಸಿಂಹನನ್ನು ಬಾರಿಬಾರಿಗೂ ಕಾಲೊದೆಯಿಂದ ಎಬ್ಬರಿಸೋಣಾಗುತ್ತದೆ, ಈಗ ಒಮ್ಮ. ಅವನ ಪರಾಕ್ರಮವನ್ನು ಪರೀಕ್ಷೆ ಮಾಡೋಣಾಗಲಿ | ” ಎಂದನು,