ಅಮ್ಮ ಶಪುಲಿನ VVV//vi-Y• '• ••••, vvy 1• • • •••••• 't Sl 1• 41°: 1, V\r\o 41, 4 dvu \r\\rshh - * - - n ಅಜಯಸಿಂಹ-ನಾನೊಬ್ಬ ಪಾದಿವಾಡಕು, ಹಾದಿ ನಡೆದು ದಣಿದು ಇಲ್ಲಿ ವಿಶ್ರಮಿಸಿಕೊಂಡೆನು. ಗಿರಿರಾಣಿ-ಸಖಿ | ಅವರು ದಣಿದಿರುವುದರಿಂದ ಬಂದು ನಮ್ಮ ಅತಿಥಿಲಾಲಿ ಯಲ್ಲಿ ವಿಶ್ರಮಿಸಿಕೊಳ್ಳಬಹುದೆಂದು ಅವರಿಗೆ ಹೇಳು .. ಅಜಯಸಿಂಹನು ಮನದಲ್ಲಿ ಮೊದಲುಮೊದಲು ಒಪ್ಪಲಾಗದೆಂದು ಹೇಳಿಕೊಂಡು ಗಿರಿರಾಣಿಯನ್ನು ಮತ್ತೊಂದುಸಲ ನೋಡಿದನು, ಲಾವಣ್ಯಮಯಿಯಾದ ರಾಜರಾಜೇಶ್ವ ರಿಯಹಾಗೆ ಸೌಂದರ್ಯ ಪೂರ್ಣವಾಗಿ ಉನ್ನತವಾದ ಸುಕುಮಾರದೇಹವನ್ನು ನೋಡಿ ದನು, ಆ ವಿಶಾಲವಾಗಿದ್ದಷ್ಟಿಗೊಬ್ಬ ಲನಯನಗಳನ್ನು ಪೂರ್ಣದೃಷ್ಟಿಯಿಂದ ನೋಡಿ ದನು. ಆ ಕಣ್ಣುಗಳು ಗೊತ್ತಿಲ್ಲದ ಶಬ್ದ ಶೂನ್ಯ ಭಾಷೆಯಲ್ಲಿ ನೀನು ನಮ್ಮ ಅಪ್ಪಣೆ ಯನ್ನು ಲಾಲಿಸುವುದಿಲ್ಲವೆ? ಎಂದು ಹೇಳುವಹಾಗೆ ತೋರಿತು, ಅಜಯನು ನಾಲ್ಕೂ ದಿಕ್ಕುಗಳನ್ನು ನೋಡಿದನು, ಒಟ್ಟು ತರಂಗಶೀಲವಾದ ವಿಶಾಲವಾದೊಡಲುಳ್ಳ ಪೂರ್ಣ ಯೌವನವನ್ನು ತಾಳಿದ್ದ ನದಿಯು ಕುಲಕುಲ ಶಬ್ದದಿಂದ ಹರಿಯುತ್ತದೆ, ಮತ್ತೊಂದು ಪಾರ್ಶ್ವದಲ್ಲಿ ಪಲ್ಲವ ಭಾರದಿಂದ ಬಗ್ಗಿ ಹೂವಿನ ಗೊಂಚಲುಗಳಿಂದ ಶೋಭಿಸುತ್ತಿದ್ದ ತರುರಾಜೆಯು ತಂಗಾಳಿಯಲ್ಲಿ ತೂಗುತ್ತದೆ. ವೆಲೆ ಆಕಾಶವು ಚಂದ್ರನನ್ನು ನಕ್ಷ ದಲ್ಲಿಟ್ಟು ಆಲಿಂಗನ ಮಾಡಿಕೊಂಡಿದೆ. ಅಜಯಸಿಂಹನು, 11 ಹೊರಡಿ, ನಿಮ್ಮ ಗಿರಿರಾಣಿ ಯವರ, ರಾಜಭವನವೆಲ್ಲಿ ? ಎಂದನು. * ಗಿರಿರಾಣಿಯು ಗೆಳತಿಯರಿಂದ ಸುತ್ತವರಿಯಲ್ಪಟ್ಟು ಅಜಯಸಿಕಹನನ್ನು ಸಂಗಡ ಕರೆದುಕೊಂಡು ಹೊರಟಳು ! ಸವಿಯೊಬ್ಬಳು 1 ರಾಣಿ ! ಈ ಸಮಯದಲ್ಲಿ ಇನ್ನೊಂದು ಸಲ ವೇಣುವಿನಲ್ಲಿ ನಿನ್ನಾ ವಸಂತರಾಗವನ್ನು ನುಡಿಸಕೂಡದೆ ?” ಎಂದಳು, ಗಿರಿರಾಣಿಯು ವೇಣುವನ್ನು ತುಟಿಗೆ ತಾಕಿಸಿ ವಸಂತರಾಗವನ್ನು ನುಡಿಸುವುದಕ್ಕೆ ತೊಡಗಿದಳು, ವೇಣುವು ಈದಿನ ಸರಿಯಾಗಿ ನುಡಿಯಲಿಟ್ಟ, ವಸಂತರಾಗವನ್ನು ನುಡಿಸಿ ದರೆ ನೀಲಾಂಬರಿಗೆ ಹೋಗುವುದು, ನೀಲಾಂಬರಿಯನ್ನು ಸರಿಮಾಡಹೋದರೆ ಕಲ್ಯಾಣಿ ಯಾಗುವುದು, ಅದುಕಾರಣ ಗಿರಿರಾಣಿಯು ವೇಣುವನ್ನು ನುಡಿಸಲಿಲ್ಲ.. --Aಸಹ - ಮೂರನೆಯ ಪರಿಚ್ಛೇದ. ಅಜಯಸಿಂಹನು ಗಿರಿರಾಣಿಯ ಜತೆಯಲ್ಲಿ ರಾಜಪ್ರಾಸಾದವನ್ನು ಪ್ರವೇಶಿಸಿದನು. ರಾಜಪ್ರಾಸಾದವು ಕಲ್ಲಿಂದ ನಿರ್ಮಿತವಾದುದಾಗಿ ಒಂದು ಅಂತಸ್ತುಳ್ಳದಾಗಿದ್ದಿತು.
ಪುಟ:ಅಮೃತಪುಲಿನ.djvu/೮೮
ಗೋಚರ