ಆ ಅಮ್ಮನನ Wynnyvvvvvvvvvvv, GN A N444 AMAAAAff honnAAAAAA ಗಿರಿರಾಣಿಯ ಕೆನ್ನೆಯು ನಾಚಿಕೆಯಿಂದ ಕೆಂಪಾತು, ಗೆಳತಿಯರೆಲ್ಲರೂ ಘಟ್ಟಿಯಾಗಿ ನಕ್ಕರು, ಸನ್ಯಾಸಿಯು ಹೇಳತೊಡಗಿದನು:- ಆದರೆ ತಮ್ಮಲ್ಲಿ ನನ್ನ ದೊಂದು ಬಿಕ್ಷೆಯುಂಟು, ತಮಗದು ದೊಡ್ಡದಲ್ಲ, 'ತಾವು ದಯವಿಟ್ಟು ಮನಸ್ಸು ಮಾಡಿದರೆ ಅನಾಯಾಸವಾಗಿ ಆ ಭಿಕ್ಷೆಯನ್ನು ನೀಡಬಹುದು, ನಾನು ಬಹಳ ದೇಶಗಳನ್ನು ತಿರುಗಿ ಸವಿದು ಹೋಗಿದ್ದೇನೆ, ಶಕ್ತಿಯು ಉಡಿಗಿ ಹೋಗಿದೆ. ಈ ರಾಜ್ಯವನ್ನು ಬಿಟ್ಟು ಹೋಗಲಾರದವನಾಗಿದ್ದೇನೆ, ತಮಗೂ ಅಜಯಸಿಂಹನಿಗೂ ಸಂಬಂಧವಾಗಿ ವಿವಾಹ ವಾದ ಬಳಿಕ ಈ ರಾಜ್ಯದಲ್ಲಿ ಪ್ರಾಸಾದದೆದುರಿಗೆ ಈ ಏಕಾಂತ ಕಾನನವಲ್ಲೊಂದು ಕುಟೀರವನ್ನು ಕಟ್ಟಿಕೊಂಡು ಆಜೀವನವೂ ಅದರಲ್ಲಿರುವುದಕ್ಕೆ ತಮ್ಮ ಅಪ್ಪಣೆಯಾಗ ಬೇಕು, ನಾನು ದೂರದಿಂದ ತಮ್ಮಿಬ್ಬರು ದಂಪತಿಯರ ಪ್ರೀತಿಯಿಂದರಳಿದ ಮುಖ ಮಂಡಲವನ್ನು ನೋಡುತ್ತಿರುವೆನು, ಅಮೃತವನ್ನು ಕರೆಯುವ ತಮ್ಮ ವೇಣುನಾದವನ್ನು ಕೇಳುತ್ತಿರುವನು. ದೂರದಿಂದ ಪ್ರೇಮಲಯದಲ್ಲಿ ನಿಮ್ಮಿಬ್ಬರ ಸುಖಪರಂಪರೆಯನ್ನು ನೋಡಿ ಕರೆಗೊರಲನ ಚರಣವನ್ನು ಆನಂದಾಶ್ರು ಜಲದಿಂದ ತೊಳೆಯುತ್ತಿರುವೆನು.” ತಾಪಸಕುಮಾರನು ನೆಲಕ್ಕೆ ಮಂಡಿಯನ್ನರಿ ನಿಂತು ಕೈಮುಗಿದುಕೊಂಡು, ಕಾತರಸ್ವರದಿಂದ, ಪುನಃ : ದೇವಿ, ಗಿರಿರಾಣಿ ! ನನಗೀ ಭಿಕ್ಷೆಯನ್ನು ಕೊಡಲಾರಿರಾ?' ಎಂದು ಹೇಳುತ್ತಿದ್ದ ಹಾಗೆ ಅವನ ಕಂಠವು ಶುದ್ಧವಾಯಿತು. ಎರಡು ಕಣ್ಣುಗಳನ್ನೂ ಭೇದಿಸಿಕೊಂಡು ನೀರಿನ ಪ್ರವಾಹವು ಹರಿಯಿತು. ಅವನೆದ್ದು ನಿಂತು, ರುದ್ಧ ಕಂಠದಿಂದ ಮತ್ತೊಂದುತಡವೆ ತಮ್ಮನ್ನು ನೋಡುವೆನು” ಎಂದು ಹೇಳಿ ಪ್ರತ್ಯುತ್ತರವನ್ನು ಕೇಳಲು ನಿಲ್ಲದೆ ಅಲ್ಲಿಂದ ಹೊರಟು ಹೋದನು. ಗೆಳತಿಯೊಬ್ಬಳು :-ಈ ಸನ್ಯಾಸಿಯು ನಿಜವಾಗಿಯೂ ಹುಚ್ಚನು, ಅವನಿ ಷ್ಟೊಂದು ಹೊತ್ತು ಹೇಳಿದುದರಲ್ಲೊ೦ದಕ್ಕೂ ಅರ್ಥವಾಗಲಿಲ್ಲ. ಮತ್ತೊಬ್ಬಳು :-ಹುಚ್ಚನೆಂದು ಹೇಳುವುದಕ್ಕೆ ಸಂದೇಹವೆ ? ಹುಚ್ಚನಾಗ ದಿದ್ದರೆ ಅಂಥಾ ಸುಂದರವಾದ ಮುಖಕ್ಕೆ ಬೂದಿಯನ್ನು ಬಳಿದುಕೊಂಡು ಜಟೆಯನ್ನು ಹೊತ್ತು ವಾಲ್ಮೀಕಮುನಿಯ ತಪೋವನವಾಗಿ ಮಾಡಿಕೊಂಡು ಅಲೆಯುತ್ತಿದ್ದನೆ?
- ಹುಚ್ಚನಾದರೂ ಕಣ್ಣುಗಳೂ ತುಟಿಗಳೆರಡೂ ಅತಿಸುಂದರವಾಗಿದ್ದವು !” - ಚಪಲೆ :-ಅವನೆಂದಿಗೂ ಗಂಡಾಗಿರನು, ಅಂಥಾ ಕುಂದಿಲ್ಲದ ಅಂದವಾದ ಮುಖವು ಗಂಡಿಗಿರುವುದೆಲ್ಲಾದರೂ ಉಂಟೆ ? ಮತ್ತೊಂದು ತಡೆವೆ ಅವನನ್ನು ಕಂಡರೆ, ಮೊದಲು ಹೋಗಿ ಅವನಾಜಟೆಯನ್ನು ಕಿತ್ತುಹಾಕಿ ನೋಡುವೆನು.