ಪುಟ:ಅರಮನೆ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅಂಗಯೊಳಗೆ ಅಡಗುವಂಥಾ ಭೂಮಂತರಗಾಳಿ ಗೊಂಬಿಗಳು ಆಕೆಯ ವುಡುಲಲ್ಲಿ ಯಿಲ್ಲದೆ ಯಿರಲಿಲ್ಲ. ಗಂಡನ ವುಡುದಾರಕ್ಕೆ ತಾಯಿತವನ್ನು ತಾನು ಮೊಣಿಸಲಿಕ್ಕಾದೀತೇನು? ಆತನನ್ನು ಹುಟ್ಟು ಮಾರಗದೆಸೀಲೆ ನಿಲ್ಲಿಸಿ ತಾನು ಲೋಬಾನದ ಹೊಗೆಯಾಡಿಸಲಿಕಾದೀತೇನು? ತಾನು ಆ ಮನೆಯ ತಲಬಾಕಲ ಯಡಕ ಬಲಕ ಭೂಮಂತರಗಾಳಿ ಗೊಂಬಿಗಳನು ಕಟ್ಟಲಿಕ್ಕಾದೀತೇನು? ತಾನು ಆತನ ಕಿವಿಗಳಲ್ಲಿ ಪ್ರಾಣ ಕ್ರೀಂ ಹೂಂ ಮಂತರ ಗಳನ್ನು ವುದುರಿಸಲಿಕ್ಕಾದೀತೇನು? ಯವೇ ಮೊದಲಾದ ಚಿಂತೆಗಳ ಕಾಲಡಿ ಕಸವಾಗಿ ದಿನಗಳ ಸಮಸ್ತತೆಯನ್ನು ಕಳದಿದ್ದಳು. ಸುನಕ ರೂಪೀ ಸಿವಸರಣೆಯರಾದ ಚೆನ್ನಮ್ಮ ಧರುಮದೇವತೇರು ವಳಗೊಳಗೆ ಮರುಗುತ ವುಸುರು ಬಿಡುತಲಿದ್ದರು. ಸುತ್ತಮುತ್ತಲ ಯಿದ್ಯಾಮಾನಗಳು ವಂದಾಗಿರಲಿಲ್ಲ... ಯರಡಾಗಿರಲಿಲ್ಲ... ವಂದರೊಳ ಗಿನ್ನೊದರಂತೆ ಹುಟುಹುಟ್ಟಿಕೊಳ್ಳುತ್ತಲೇಯಿದ್ದವು. ಆಕೆಯನ್ನು ಆ ಜಾಗದಿಂದ ಕದಲಿಸಲಕ, ಕದಲಿಸಿ ತವರುಮನೆಯಿರುವ ಮಿಚೇರಿಗೆ ಕಳುವಲಕ, ವರಮಾನದ ಬೇಗುದಿ ಸಂಕಟಗಳಿಂದ ಪಾರುಮಾಡಲಕಯಂದು ಥಳಗೇರಿಯ ಹಿರೀಕರಾದ ವುದ್ದಾನಜ್ಜ, ಅಗಲಾನಜ್ಜ ಗಿಡ್ಡಾ ನಜ್ಜಂದಿರೇ ಮೊದಲಾದವರು ತಮ್ಮ ತಮ್ಮ ನಾಲಿಗೆ ತುಂಬುವ ತಳಿಗೆಯಿಂದ ಸಾಂತುವನದ ಮಾತುಗಳನ್ನುದಿರುಸುತಲಿದ್ದರು. ಮಗಳಾss... ನೀನಿಲ್ಲಿ ಸಂಕಟ ಅನುಭೋಸುತ ಯಿದ್ದರ ನಾವೆಂಗ ಬೂದುಕಲಾದೀತೇ ಯವ್ವಾ.. ನಿನ ಗಂಡನ ಸರೀರದೊಳಗ ನಿನ್ನ ಗಂಡಯಿಲ್ಲ ಕನವ್ಯಾ. ನೀನಂದರ ಬಲೂ ಜೀವ ಮಾಡುತಲಿದ್ದಾತನು ಯೇಸು ದಿವಸ ಸುಮ್ಮಕ ಯಿರುತ ಲಿದ್ದನೇನು? ಯೇಗಾತ ಗಾಳ್ಯಾಗ ಅದಾನಭೇ... ನಿನ್ನ ಮುತ್ತಯಿದೇತನ ಯಾವತ್ತೋ ಮುಗುದು ಹೋಗಯ್ಯೋ.. ತಾಳಿ ಕುಂಕುಮ ಧರುಸಿಕೊಂಡು ನಿನ್ನನ್ನು ನೀನೇ ಮೋಸ ಮಾಡಿಕೋಬ್ಯಾಡ.. ತಗದಾಕಿ ಯಿಲ್ಲಾರ ಯರು.. ತವರೂರಿಗಾರ ಹೋಗಿಬಿಡು.. ಅದಕ ನಾವು ಸಾಯ ಮಾಡತೀವಿ..” ಯಂದು ಮುಂತಾಗಿ ಗಿಣೀಗ ಹೇಳಿದಂಗ ಹೇಳದೆಯಿರಲಿಲ್ಲ.. ಅದಕುತ್ತರವಾಗಿ ಆಕೆ “ಮುದ್ಯೋರಾಗಿ ಯಂಥಾ ಮಾತಾಡುತೀರಪ್ಪಾ ನೀವು.. ನನ ಗಂಡನ ಸರೀರ ನನ್ನೆದುರೀಗಯ್ತಿ.. ನನ ಗಂಡ ನಷ್ಟ ಆಗಿದ್ದ ಪಕ್ಷದಲ್ಲಿ ಅದು ಮಣ್ಣು ಕಾಣಬೇಕಿತ್ತಲ್ಲ.. ತಾಳಿ ಕುಂಕುಮ ತಗದು ನಾನು ರಂಡಮುಂಡೆ ಪಟ್ಟಕ್ಕೇರಲಕ ಯೇಟೊತ್ತು ಬೇಕು..? ತಗದ ಮ್ಯಾಲ ನನ ಗಂಡ ನಿಸೂರಾಗಿ ರಂಡಿ ಆಗಿದ್ದೀ ಯಾಕ ಅಂತ ಕೇಳಿದರ ಯೇನು ಮಾಡಲೀ..? ನಿಮಗೆ ತಿಳೀವಲ್ಲು ಅಲ್ಲೋರಾ.. ನನ ಗಂಡನ ಸರೀರದೊಳಗೆಂಥದೋ ಕರಾಮತ್ತು ನಡೀತ್ತಿದ್ದಂಗಯ್ತಿ. ಈ