ಪುಟ:ಅರಮನೆ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೩ ಹೋತತೆಂದೇ ಹುಲುಕುಂಟೆಪ್ಪ ಕಾಲುಮರಿ ಸವೆಯೋ ಹಂಗ ಕುದುರೆಡವಿಗೂ, ಸಿಡೇಗಲ್ಲಿಗೂ ಅಡ್ಡಾಡಿ ಬುಸ್ಸಪ್ಪನ ಮನ ವಲಿಸಿ ಲಗ್ಗುನ ಮಾಡಿಸಿಕೊಂಡು ಮನೆ ತುಂಬಿಸಿ ಕೊಂಡಿದ್ದ. ಮನೆ ತುಂಬಿದ್ದೇ ತುಂಬಿದ್ದು ಪಿಳ್ಳೆ ವಂದಿನಾರ ಮಯ್ಯ ಸಾಬರಿಕೆಯಿಂದ ಮನೇಲಿ ಕುಂತಿದ್ದಿರಲಿಲ್ಲ. ಯಂಟಾಳಿನ ವದಕನಾನ ತಾನೊಬ್ಬಳೆ ಮಾಡುತ ಸಯ್ಯ ಅನ್ನಿಸಿಕೊಂಡಿದ್ದಳು. ನೋಡು ನೋಡುತ್ತಿದ್ದಂಗ ಬಸುರಾಗಿದ್ದಳು. ಮುದೇಕಿ ತಿಂದವ್ವ ಸತ್ತ ಸೂತಕ ಯಿದ್ದುದರಿಂದ ಬುಸ್ಸಪ್ಪ ಚೊಚ್ಚುಲು ಬಾಣಂತನ ಕುದುರೆಡವಲ್ಲಾಗಲಿ ಯಂದಿದ್ದ. ಆನೆಯಂಥಾ ಸೊಸ ಯಂದು ಮಾವನೂ, ಹುಲಿಯಂಥಾ ಹೆಣತಿ ಯಂದು ಗಂಡನೂ, ಮೇಟಿ ಗೂಟದಂಥಾ ಸೊಸೆ ಮುದ್ದೆ ಯಂದು ಅತ್ತೆಯೂ ಅಂಗಳದೊಳಗ ಕಮ್ಮ ಬಾಯಿಗೆ ತಂದುಕೊಂಡು ದುಕ್ಕ ಮಾಡುವವರೆ ಸಿವನೇ SS .. ತುಂಬು ಬೊಸುರಿ ಬೂವವ್ವ ನೋವು ತಿಂಬಲಾಗದೆ ಕೆಳಗಣ್ಣು, ಮ್ಯಾಲಗಣ್ಣು ಮಾಡುತವಳೇ, ತಿಣುತಿಣುಕಿ ವುಸುರು ಯಳಕಂತವಳೆ, ವುಸುರು ಬಿಡುತವಳೇ.. ಆಕೆ ಬಸುರೊಳಗ ಕೂಸು ಅಡ್ಡಾಗಿ ಮಲಕ್ಕಂಡಯ್ಕೆ.. ಸೂಲಗಿತ್ತೇರು ಮಾಡೀ ಮಾಡಿ ರೋಸಿ ಹೋಗಿ ಮುಗುಲ ಕಡೆ ಮಾರಿ ಮಾಡಿದರು. ಆಗವರೆಲ್ಲರಿಗೆ ಗ್ರಾನೊದರು ಆತು. ಸೂಲಗಿತ್ತೇರಿಗೆಲ್ಲ ಚಕ್ರವರಿಣಿಯಂತಿರುವ ಜಗಲೂರೆವ್ವನ ಹೆಸರು ಅವರೆಲ್ಲರ ನಾಲಗೆ ಮ್ಯಾಲ ಸುಳುದಾಡಲಕ ಹತ್ತಿತು. ಆ ಮಾತಾಯಿನ ಕರಕಂಡು ಬನ್ನೆಪ್ಪಾ.. ಯಂದು ಯಾರೋ ಕೂಗಿದರು ಸಿವನೆ.. ಅರೆ ಅವುದಲ್ಲ ಯಂದರು ಸಿವನೆ, ಮೂರಲ್ಲಿದ್ದುಕೊಂಡು ವನವಾಸ ಅನುಭೋಸ್ತಿರೋ ಆಕೇನ ಹೆಂಗ ಕರೆವುದು ಸಿವನೇ, ಜನರ ನಡುವೆ ಯಿದ್ದುಕೊಂಡು ಅmಾತವಾಸ ಅನುಭೋಸ್ತಿರೋ ಆಕೇನ ಹೆಂಗ ಕರೆವುದು ಸಿವನೇ, ಕಣ್ಣು ಕೆರೇನ ಮಾಡಿಕೊಂಡಿರೋ, ಗಂಟಲೊಳಗೆ ದುಕ್ಕ ವಸ್ತಿ ಮಾಡಿರೋ ಆಕೇನ ಹೆಂಗ ಕರೆವುದು ಸಿವನೇ ಯಂದವರೆಲ್ಲ ಕಮ್ಮ ಕಮ್ಮ ಹಿಚುಗಿಕೊಂಡರು, ತಲಾಕೊಂದುದು ನಮೂನಿ ಪೇಚಾಡಿಕೊಂಡರು. ಆಟೊತ್ತಿಗೆ ತಳವೂರಿದ್ದ ಅಗಲಯ್ಯನು “ಅಯವ್ವಗ ಕರಗೋ ಕಳು ಅಯ್ಯಪ್ಪಾ.. ಕರದರ ಬರಾಕಿಲ್ಲ ಅಂಬುವಾಕೆಯಲ್ಲ.. ಸಡನ್ನ ಹೋಗಿ ಕರದರ ಲಟಕ್ಕನ ಹೊಂಟು ಬರುವಾಕೆಂಯಪ್ಪಾ..” ಯಂದು ಹೇಳಲು ಹುಲುಕುಂಟಪ್ಪನು ತನ ಮಯಿ ತುಂಬ ಕಾಲುಮುಡಕೊಂಡು ಕೂಗಳತೆ