ಪುಟ:ಅರಮನೆ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೮

ಅರಮನೆ

ತಮ್ಮ ರಾಜರು ನಿಯುಕ್ತ ಮಾಡಿರುವರೆಂಬ ಸಂಗತಿಯನ್ನು ಬದಿಗೊತ್ತಿ ಕಾಟಯ್ಯನು ಯೀಡಿಗರ ಪಾಲಾಗಿರುವನಲ್ಲಾ, ರಾಜ ಮರ್ಯಾದೆಯನ್ನು ಗಾಳಿಗೆ ತೂರಿರುವನಲ್ಲಾ.. ಯಂದು ರುದ್ದ ರಾಜಮಾತೆಯು ಸೊಗತದಲ್ಲಿ ಅಂದುಕೊಂಡು ಬಹಿರಂಗವಾಗಿ ರಾಜಕುವರನನ್ನು ಯೀಗಿಂದೀಗಲೇ ಕರೆತರುವಂತೆ ಆಗ್ನಾಪಿಸಲು ವುರಗಯ್ಯನು ತಲೆಬಾಗಿಲಿಂದಾಚೆ ತಾನು ಬಿಟ್ಟಿರುವ ಕಾಲ್ಮರಿಗಳು ಸವಕಂಡು ಹೋಗಿರುವುದನ್ನು ಗ್ನಪ್ತಿಮಾಡಿ ಕೊಂಡನು. “ಯವ್ವಾ ತಾಯೀ..” ಅಂದನು. “ಯೇನಲೋ” ಅಂದಳು ರಾಜಮಾತೆ. "ಅರಮನೆ ಯಿಂದ ಸಂಬಳವಗಯ್ರೆಚುಕ್ತಾ ಆಗದೆ ನಾಕು ತಿಂಗಳ ಮ್ಯಾಲಾಗಿರುವುದು. ಪುಗಸಟ್ಟೆ ಚಾಕರಿ ಮಾಡುತಲಿದ್ದರ ಹೆಂಡರುಮಕ್ಕಳು ವುಂಬಲಕ ತಿಂಬಲಕ ಜೋಡಿಸುವುದೆಂಗೆ? ಅರಮನೇನೂ ಬ್ಯಾಡ.. ಅರಮನೆಯ ಮೂಳಿಗಮಾಬ್ಯಾಡ.. ಬಿಡುಗಡೆ ಮಾಡಿರಿ. ಹೊಂಟೋಯ್ತೀನಿ. ಕೂಲಿನಾಲಿ ಮಾಡಿ ಬದುಕುತೀನಿ” ಯಂಬಂಥ ಖಾರದ ಮಾತುಗಳನ್ನು ಆಡೇ ಬಿಡಲಕಂತ ಗಂಟಲವರೆಗೆ ತಂದುಕೊಂಡನು. ಆದರ ಹಂಗಾಡಲಕ ಮನಸ್ಸು ಬರಲಿಲ್ಲ. ವುಪುEಳಿ, ಡೋಮ, ಕರೆಲ್ಲಯ್ಯರಂತೆ ಅರಮನೆಯ ಮಳಿಗವನ್ನು ಬಿಟ್ಟರೆ ದಯವ ಮುನಿದುಕೊಳ್ಳುವುದೆಂಬ ಪಾಪ ಪ್ರಶ್ನೆ ಕಾಡಿತು. ಅರಮನೆಯ ವಳ ಹೊರಗೆ ಅಡ್ಡಾಡಿದರ ತನ್ನ ಮಯ್ಗೆ ಯೇನೋ ಎಂದು ನಮೂನಿ ಕಸುವು. ಅದಕಿದ್ದು ವುರಗಯ್ಯನು "ಯೇನಿಲ್ಲ ತಾಯಿ.. ಕರಕಂಡು ಬರುತೀನಿ ತಾಯಿ.. ಬಂದ ಕೂಡಲ ಯಲ್ಡು ಗಿದ್ದುನ ಕಾಳುಕಡಿ ಅಳದರ ಹೆಂಡರು ಮಕ್ಕಳು ಬದುಕುತಾ ರವ್ವಾ..” ಯಂದು ಅರಕೆ ಮಾಡಿಕೊಂಡು ಕಡುದಮ್ಮನಹಳ್ಳದ ಕಡೆ ಮುಖ ಮಾಡಿ ತಲುಪಿದನು.

ಅಲ್ಲಿ ಕಾಟಯ್ಯನು ಅಳತೆಗೆ ಮೀರಿ ಸೇವನೆ ಮಾಡಿದ್ದಕ್ಕಿದ್ದ ಕಾರಣಗಳು ವಂದಾ ಯರಡಾ, ಅವುಗಳ ಪಯ್ಕಿ ಮುಖ್ಯವಾದುದೆಂದರೆ ಹೋದ ವಾರಾನೆ ಕೂಡ್ಲಿಗಿಯಿಂದ ಮುಕುದಂ ಯಂಬ ಕುದುರೆ ಸವಾರನೋರ್ವ ಬಂದು ಫಲಾನ ದಿವಸದಂದು ಯಡ್ಡುವರ್ಡು ಸಾಹೇಬರ ಹುಟ್ಟುಹಬ್ಬ ಯಿರುವುದೆಂದೂ, ಆಗಮಿಸಿ ತಕ್ಕ ಕಾಣಿಕೆ ವುಡುಗೊರೆಗಳನ್ನರುಪಿಸಿ ಸಾಹೇಬರ ಕ್ರುಪೆಗೆ ಪಾತ್ರರಾಗತಕ್ಕದೆಂದು ಹೇಳಿ ಹೋಗಿದ್ದನು. ಆ ಸಮಾರಂಭಕ ರಾಜ ಪೋಷಾಕು ಧರಿಸಿ ತಾನೂ ಹೋಗುವುದಾಗಿಯೂ, ಸಾರೋಟೂ, ಆಳುಕಾಳೂ ರೊಕ್ಕ ಯಿತ್ಯಾದಿ ಯವಸ್ಥೆ ಮಾಡಬೇಕೆಂದೂ ಕಾಟಯ್ಯ ಯಿನಂತಿಮಾಡಿಕೊಂಡಿದ್ದಕ್ಕೆ ರಾಜಮಾತೆಯು ವಂದಲ್ಲಾ ನೂರು ಮಾತು ಅಂದಾಡಿದ್ದಳು. ಸವತಿಯ ಮಗನಾದ ಕಾಟಯ್ಯನು ರಾಜಪೋಷಾಕು ಧರಿಸುವುದು ಆಕೆಗೆ ಸುತಾರಾಂ ಯಿಷ್ಟಯಿರಲಿಲ್ಲ. ತಮ್ಮ