ಪುಟ:ಅರಮನೆ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು. ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅದ್ಧಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರಂತ ಮಾತಾಡಿ