ಪುಟ:ಅರಮನೆ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ಅರಮನೆ ಹರಕೋತ ಹೋದರು, ಕಬ್ಬಿಣ ಪೆಟಾರಿ ತೆರೆದು ಕಿಲುಬಿ ನಾತ ಯಿಟ್ಟಿದ್ದ ತಮ್ಮ ತಮ್ಮ ದರ್ಜೆಯ ಪೋಷಾಕುಗಳನ್ನು ಹೊರ ತೆಗೆದು ಕೊಡವಿದರು. ಹಬ್ಬಿದ ವುಜ್ಜೆ ಚಿಂಗು ವಾಸನೆಯೊಳ ಗಿಂದುದಿಸಿದ ಅವರವರ ಹೆಂಡರು ಮಕ್ಕಳು “ಅವನ್ನು ಧರಿಸಬ್ಯಾಡೀರಿ.. ಧರಿಸಿ ಥಳಗೇರಾಗ ಹೋಗಬ್ಯಾಡೂರಿ, ಹೋಗಿ ಸಾಂಬವಿಯ ಕಣ್ಣು ಕೆಸರು ಮಾಡಬ್ಯಾಡೀರಿ.. ದಯವದ ಅವಕ್ರುಪೆಗೆ ಪಾತ್ರರಾಗಬ್ಯಾಡೀರಿ” ಯಂದು ತರುಬಲುಪಕ್ರಮಿಸಿದರು. ಅದನ್ನೆಲ್ಲ ಲೆಕ್ಕಿಸದೆ ಅವರು ಹೆಂಡರನ್ನು ಯಡಕ ತಳ್ಳಿ ಮಕ್ಕಳನ್ನು ಬಲಕ ತಳ್ಳಿ ದಾರಿ ಮಾಡಿಕೊಂಡು.. ಮುಂದಕ ಯಿಬ್ಬರಂತೆ, ಹಿಂದಕ ಯಿಬ್ಬರಂತೆ ಅರೆಕಾಲಿಕ ಭಟರನ್ನು ಬಂದೋಬಸ್ತಿಗಂತ ಯಿಟುಗೊಂಡು.. ಮುಖ ಯದ್ದು ಕಾಣಲಕಂತ ತಂಬುಲದುಂಡೆಯನ್ನು ದವಡೆಂರೊಳಗಾಸರೆಂರಾಗಿ ಯಿಟುಗೊಂಡು ಮದೊಂದು ಹೆಜ್ಜೆಯನ್ನು ಅವುರೀಕೀಲೆ ಹಾಕುತ್ತ.. ಮೀಸೆ ತಿರುವುತ್ತ... ತಮ್ಮೊಳಗೆ ತಮ್ಮನ್ನು ಕಲ್ಪಿಸಿಕೊಳ್ಳುತ್ತ.. ಮೂರು ದಾರಿ ಕಲೆವಲ್ಲಿ ಸೇರಿ ವಟ್ಟಾದರು ಸಿವನೇ... ದುಷ್ಟತ್ರಯವನ್ನು ನೋಡಲಕ ವಳಗಿದ್ದವರು ಹೊರ ಬಂದರು, ಹೊರ ಬಂದವರು ಅಂಗಳಕ ಬಂದರು.. ದುಸ್ಸಿ ಮದ್ಯಯಿದ್ದವರು ಹುಬ್ಬಿಗೆ ಕಯ್ಯ ಹಚ್ಚಿದರು.. ಮುವ್ವರ ಪಯ್ಕೆ ಯಾರು ಯಾರಾಗಿದ್ದಿರಬೌದೆಂದು ಪರಪಾಟಿಗೆ ಬಿದ್ದರು. ಥಳಗೇರಿಯಂಬುವ ಅಗ್ನಿಕುಂಡದತ್ತ ಗುಳೇ ಹೊಂಟಿರೋ ಮಿಡತೆಗಳೋ.. ಮೋಬಯ್ಯನೆಂಬುವ ಸೂರಗೋಳ ವನ್ನಪ್ಪಿಕೊಳ್ಳಲೆಂದು ಹೊಂಟಿರುವ ತರಗೆಲೆಗಳೋ ಯಂಬಂತೆ ಭಾಸವಾದರಾ ಮುವ್ವರು ಮಂದಿ ಕಣ್ಣಿಗೆ.. ಕಡ್ಡಿಪುಡಿ, ಯಲಡಕೆಯಾದರು ಮಂದಿ ಬಾಯಿಗೆ, - “ಯಿವಕೇನು ಬಂದಂತ್ತಪ್ಪಾ.. ಮಾತಾಯಿನ ತಡುವಿ ಕೇರು ಬಿಡಿಸಿಕೊಳ್ಳಲಕ ಹೊಂಟಿರು ವವಲ್ಲಾ.. ಕೂಳು ಹೆಚ್ಚಾದರ ಕುವ್ವಾಡ ಹೆಚ್ಚಾಯ್ತದಮುತಾರಲ್ಲ.... ಯಿದಕ ನೋಡು..” ಯಂದೊಬ್ಬ ಗೊಣಗುವುದಕ್ಕೂ ಅವರು ಥಳಗೇರಿ ಪ್ರವೇಶ ಮಾಡುವುದಕ್ಕೂ ಸರಿಹೋಯಿತು. ಅವರು ತಲುಪಿದ ಗುಡಿ ಹಿ೦ದಲ ಮನಿ ಮುಂದಲಕಿದ್ದ ಪಳುಗಟ್ಟೆಯ ಮಾಲ ಮೋಬಯ್ಯನ ಸರೀರವು ಯಿರಾಜಮಾನ ವಾಗಿತ್ತು. ಅದೇ ಅವರನ್ನು ಹತ್ತಿರಕ ಬಿಟ್ಟುಕೊಂಡಿತು. ಮಾನವರೂಪಿ ಸೊನ್ನೆಗಳಂತೆ ನೋಡಿತು. ಅತ್ತ ಧರಿ, ಯಿತ್ತ ಪುಲಿ ಯೆಂಬಂತಾದ ಅವರು ತುಸು ಹೊತ್ತು ಅಲ್ಲಲ್ಲಿ ನಿಂತುಕೊಂಡರು. ತದನಂತರ ಅಲ್ಲಲ್ಲಿ ಅಂಡೂರಿ ಮಿಕುಮಿಕಿ ದಿಟ್ಟಿಸಿದರು. ತಮ್ಮನ್ನು ನೋಡಿ ಯದ್ದು ಸೀಮಂತರಾ ಯೀಟು ದೂರ ಯಾಕ ದಯಮಾಡಿಸಿ ನಿಮ್ಮ ನಿಮ್ಮ ಪಾದಗಳಿ