ಪುಟ:ಅರಮನೆ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮುಕ್ಕಳಿಸುತ್ತಿದ್ದುದುಂಟಾ.. ಯಿವನ ಮಯ್ಯ ಕಿಮುಟು ವಾಸನೆಗೆ ಯಿಡೀ ಪಟ್ಟಣವೆ ಮೂಗು ಮುಚ್ಚಿಕೊಳ್ಳುತ್ತಿದ್ದುದುಂಟು.. ಕಜ್ಜಿ ಹತ್ತಿ ನಾರುತ್ತಿರುವ ಯಿವನ ಮಯ್ಯೋಳಗ ಸಾಂಬವಿ ಬೀಡು ಬಿಟ್ಟಿರುವಳಂದರ ನಂಬಲಕ ನಾವೇನು ದಡ್ಡರಂದುಕೊಂಡೀಯಾ..” ಯಂದು ಆಮಾತ್ಯನು ಗೊಳ್ಳನೆ ನಗಾಡಲು ಅದು ಸಾಂಕ್ರಾಮಿಕವಾಗಿ ತಗುಲಿ ಸೇರಿದ್ದ ಮುಕ್ಕಾಲು ವಾಸಿ ಮಂದಿ ಪಕಪಕನೆ ನಗಾಡಿದರು. ಹುಚ್ಚುಕಥಿ. ಕಾಗಕ್ಕ ಗುಬ್ಬಕ್ಕನ ಕಥಿ ಯಂದು ಕೆಲವರು ಬಹಿರಂಗವಾಗಿಯೇ ಗೊಣಗಾಡಿದರು. ಅದರಿಂದ ಹುರುಪುಗೊಂಡ ತಾಪತ್ರಯರು ತಮ್ಮ ತಮ್ಮ ಕಯ್ಯಗಳಿಂದ ವಸ್ತಿಯನ್ನು ತಿವಿದಾಡಿ ಯಿಸ್ಸಿ ಯಿ ಅಂತ ದೋತರಕೊರೆಸಿ ಕೊಂಡರು. ಕೊನೀಕಿದ್ದು ಸನ್ಯಾಸಪ್ಪನು “ನಿಮ್ಮ ಸಾಂಬವಿ ಯೀ ಯವನ ನಿಕ್ಕುಸ್ವ ಸರೀರದೊಳಗ ಯಿರುವುದೇ ಖರೆವಾದಲ್ಲಿ ವಂದಲ್ಲಾ ವಂದು ಖನ ಗುರುತಾ ತೋರಿಸಬೇಕು, ಯೇನಂತಿಯಾ ಮುದ್ಯಾ” ಯಂದು ಜಗ್ಗಿಸಿ ಕೇಳಿದ್ದಕ್ಕೆ ಜಡೆತಾತನು “ನಿಮಗೇನು ಕೇಡುಗಾಲ ಬಂದಯಿತೋ... ಯೀಗ ನೀವು ಯಲ್ಲು ಕಯ್ಲಿಂದ ವುಂಬುತಿರೋದು ಮರೆತಿರೇನು? ಹಿಂಗೆಲ್ಲ ಬಾಯಿಗೆ ಬಂದಂಗ ಮಾತಾಡಿ ರವುರವ ನರಕಕ್ಕೆ ಹೋಗಬ್ಯಾಡೂರಿ. ನೀವು ಹೇಳಿದ್ದನ್ನೆಲ್ಲ ಮಾಡಲಕೇನು ಸಾಂಬವಿ ಬುಡುಬುಡುಕ್ಯೋಳು ಅಂದುಕೊಂಡಿರಾ, ಮೋಡಿಗಾರಿ ಅಂದುಕೊಂಡೀರಾ, ಕುವ್ವಾಡ ಮಾಡಿ ಕೇಡು ತಂದುಕೋ ಬ್ಯಾಡೂರಿ.. ದಯವವನ್ನು ಯದುರು ಹಾಕ್ಕೊಂಡು ಅರಮನೆಗೆ ಮುಳ್ಳು ಬಡಿಯ ಬ್ಯಾಡೂರಿ.. ನಂಬಿದರೆ ನಂಬಬೇಕು.. ಯಿಲ್ಲಾಂದರ ತೆಪ್ಪಗ ಮುಕುಳಿ ಬಾಯಿ ಮುಚ್ಚುಕೊಂಡಿರಬೇಕರಪ್ಪಾ.” ಯಂದು ರವುಸದಿಂದ ಮಾತಾಡಿದನು. ಅದಕೂ ತಮಣಿಗೊಳ್ಳದ ತಾಪತ್ರಯರು ಲೇ ಮುದ್ಯಾ.. ಮೋಬಯ್ಯನೂ, ನೀನೂ ಸೇರಿಕೊಂಡು ರಾಜ್ಯಕ್ಕೆ ದ್ರೋಹ ಬಗಿತಾ ಅದೀರ.. ಯಿದಕ ಶಿಕ್ಷೆ ಮರಣದಂಡನೆ ಅಂಬುದನು ಮರೀಬ್ಯಾಡಾ.. ಲೀಗ್ಯಾಕ ಅದೆಲ್ಲ.. ಸಾಂಬವಿ ಅದಾಳಂಬುದಕ ಹೊತ್ತು ಮುಳುಗಿ ಹೊತ್ತು ಹುಟ್ಟುವುದರೊಳಗಾಗಿ ಖನ ಗುರುತು ತೋರಿಸಬೇಕು.. ಯಿಲ್ಲಾಂದರ ಅರಮನೆಯ ಅಂಗಳದ ಕಂಭಕ್ಕೆ ಕಟ್ಟಿ ಚರುಮ ಸುಲಸತೀವಿ.. ವುಸಾರ್..” ಯಂದು ರಾಜಾರೋಷವಾಗಿ ಯಚ್ಚರಿಸಿ ಅಲ್ಲಿಂದ ಹೊರಟು ಹೋದರೆಂಬಲ್ಲಿಗೆ ಸಿವ ಸಂಕರ ಮಾದೇವಾss ಅತ್ತ ಕರನೂಲು ಹತ್ತಿಕೊಂಡದ ನಡೂಕೆ ಕೋಡಮೂರು ಯಂಬ ಹೋಬುಳಿ ಗ್ರಾಮ ವಂದಿತ್ತು. ಅದನ್ನು ವಮಸ ಪಾರಂಪರವಾಗಿ