ಪುಟ:ಅರಮನೆ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅತ್ತ ಕೂಡ್ಲಿಗಿ ಪಟ್ಟಣದೊಳಗ ಯಡ್ಡವರಂಗೂ, ಜೆನ್ನಿಫರಳಿಗೂ ನಡೂಕೆ ಮಸ್ತ ಮನಸ್ತಾಪ ಹುಟ್ಟುತಲಿತ್ತು... ಕರಗುತಲಿತ್ತು. ನನಗಿಂತಲೂ ನಿನಗ ಮುಗಾಲಯಗಳೇ ಹೆಚ್ಚಾದವಲ್ಲಾ ಯಂದು ಗಂಡನೂ, ನನಗಿಂತಲೂ ನಿನಗೂ ಕುಂಪಣಿ ಸರಕಾರವೆ ಹೆಚ್ಚಾಗಯ್ತಲ್ಲಾ ಯಂದು ಹೆಂಡತಿಯೂ... ಅತ್ತ ಯಲ್ಲಾಪ್ರಕೊರಚರಟ್ಟಿಯೊಳಗ ಪೊಲಾರಮ್ಮನ ಜಾತುರಿ ಸಿವನೇ, ತಿರುಕಪ್ಪ ಗವುಡನ ಮಗಳಾದ ಪಾರೋತಿಯು ಮಯ್ಕೆರೆತಿರುವ ಸಂಭರಮದಲ್ಲಿ ಸೊನ್ನನೂ... ಚವುಡವ್ವ ಮುನುಸಿಕೊಂಡಿರುವ ಮಡರಳ್ಳಿಯೂ, ಮಣ್ಣಾಗಿರುವ ಮೀಸೆಯನ್ನು ತಿವುಡಿಕೊಳ್ಳುತ್ತಿರುವ ಜರಮಲಿಯೂ, ಮೀಸೆಯ ಗಲೀಜನ್ನು ಕಣ್ಣ ವುದಕದಿಂದ ತೊಳೆದು ಕೊಳ್ಳುತ್ತಿರುವ ನಿಚ್ಚಾಪುರ, ನರಭಕ್ಷಕ ಸಾಝಲದುಪಟಳದಿಂದ ತತ್ತರಿಸಿರುವ ಅರಸನಾಳೂ, ನಾರದೇವಂಗೆ ಮಯೂರಿನ ಮುದ್ದವ್ವಳನ್ನು ತಂದು ಮದುವೆ ಮಾಡಬೇಕೆಂಬ ವುತ್ಸಾಹ ದಲ್ಲಿರುವ ಚಿಗಟೇರಿಯೂ, ಅದೇ ತಾನೆ ಮಂಗಣ್ಣನನ್ನು ಹಿಡಿದು ತಂದಿರುವ ತಿಕ್ಕಡನು ಅದಕ ಅಂಜಿಣಿಯಂದು ನಾಮಕರಣ ಕಾವ್ಯವನ್ನು ಹಮ್ಮಿಕೊಂಡಿರುವ ಕಾಸರಕನಡವಿ ಯೊಳಗಿರುವ ಕಕ್ಕುಪ್ಪಿಯೂ.. ಹಿಂಗ ಕುಂತಳ ಸೀಮೆಯ ವಂದಲ್ಲಾವಂದು ಗ್ರಾಮದೊಳಗ ವಂದಲ್ಲಾವಂದು ಯಿದ್ಯಮಾನವು.. ಆಗ ಯೇಟು ಹೊತ್ತಾಗಿತ್ತೆಂದರ ಭೂವಾಯಿ ಯಿರುಳೆಂಬ ಹೆಸರಿನ ಗರಿಗಂಬಳಿಯೊಳಗೆ ನಿದ್ದೆ ಬಾರದೆ ಮಗ್ಗುಲು ಮಗ್ಗುಲು ಹೊಳ್ಳಾಡಲಕ ಹತ್ತಿದ್ದಳು.. ಅಂಥಾದ್ದೊಂದು ಹೊತ್ತು ಅತ್ತ ಯಿದ್ದ ಕುದುರೆಡವು ಪಟ್ಟಣದೊಳಗ.. ಗುಡಿ ಹಿಂದಲ ಮೂಳೆಮೋಬಯ್ಯನ ಸರೀರದ ಅಡ್ಡಾಯದ ವಜ್ಜಲೊಜ್ಜಲು ಹಾದಿ ಬೀದಿ ತುಂಬೆಲ್ಲ... ಬಾಯಿ ಕಿವಿ ಮೊಟರೆ ತುಂಬೆಲ್ಲ... ಪಾಪ ಯೇನಾಯ್ಡದೋ? ಮೂಡಲ ಮನೆಯೊಳಗಿನ ದೀಪದ ಕುಡಿಗೆ ಬೆಳಕು ತಾಕದೆ ಯಿರಲಿ ಸಿವನೆ.. ಯಂದನಕಂತ ಮಂದಿಯು ರಾಶಿರಿಯಾಗುತ್ತಲೆ ಯಚ್ಚರಾಗಲಕ ಬೆಳಕು ಕೊಟ್ಟಾತನನ್ನು, ವುಸುರಾಡಲಕ ಗಾಳಿ ಕೊಟ್ಟಾತನನ್ನು, ಬಾಯಾರಿಕೆ ತೀರುಸಿಕೊಳ್ಳಲಕ ನೀರು ನಿಡಿ ಕೊಟ್ಟಾತನನ್ನು, ವುಂಡು ಹಸುವೆ ತೀರುಸಿಕೊಳ್ಳಲಕ ವಂದು ತುತ್ತು ಬಾನ ಕೊಟ್ಟಾತನನ್ನು, ತಮ್ಮ ತಮ್ಮ ಸರೀರಗಳೊಳಗೆ ಜೀವಯಂಬುವ ಗುಬ್ಬಿಮ್ಮನನ್ನು ಯಿಟ್ಟಾತನನ್ನು ಗ್ರಾಹಕ ಮಾಡಿಕೊಂಡೋ, ಗ್ರಾಪಕ ಮಾಡಿಕೊಳ್ಳದೆಯೋ ಮಲಗಿಕೊಂಡಿದ್ದ ಸಂದರದೊಳಗ ಅಡರಿದ್ದ ನಿದ್ದೆ ನಿದ್ದೆಯಾಗಿರಲಿಲ್ಲ... ಕಂಡ ಕಣಸು