ಪುಟ:ಅರಮನೆ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕಣಸಾಗಿರಲಿಲ್ಲ..ಕನವರಿಕೆ ಕನವರಿಕೆ ಆಗಿರಲಿಲ್ಲ. ಬೆಬ್ಬಳಿಕೆ ಬೆಬ್ಬಳಿಕೆಯಾಗಿರಲಿಲ್ಲ ಸಿವನೇ.. ಸಕಲ ಮಂದಿಯು ಗಾಳಿ ತುಂಬಿದ ವುಸಾಬುಲ್ಲಿಗಳಂತೆ ಕವುದಿ ಮ್ಯಾಲ ವುರುಳಾಡಲಕ ಹತ್ತಿದ್ದರು... ವಂದೊಂದು ಮನೆಯೊಳಗೆ ವಂದೊಂದು ಯಿಧದ ಅಲವುಕಿಕ ಸಪ್ಪಳ.. ಯಡಬಿಡದ ತ್ರಿಲೋಕ ಸಂಚಾರ ಮಾಡಿರುವಂಥ ದಣುವು. ಯಚ್ಚರದ ಬೆನ್ನ ಮ್ಯಾಲ ಮಚ್ಚರವೋ, ಮಚ್ಚರದ ಬೆನ್ನ ಮ್ಯಾಲ ಯಚ್ಚರಮೋ.. ಹೊತ್ತು ಮುಳುಗಿದೊಡನೆ ವುದಯಕ್ಕಾಗಿ ಹಂಬಲಿಸುವ ಜಾಯಮಾನದ ಕಾವಲಿ ಹನುಮಕ್ಕನ ಅಂಜಣಿ ಯಾವತ್ತಾದರು ಕಣ್ಣು ಮುಚ್ಚಿ ಗಪ್ಪಂತ ನಿದ್ದೆ ಮಾಡಿದ್ದುಂಟಾ, ಅರಮನೆಯ ಪಹರೆ ಮಂದಿ ವಂದು ತೂಕಯಿದ್ದರೆ ಅಂಜಣಿಯದ್ದು ಯಿನ್ನೊಂದು ತೂಕ. ಅದರ ಯಸನವೆ ಯಸನ ಕಣ ಸಿವನೇ.. ಕಳುವಿಗೆ ಹೆಸರಾಗಿದ್ದ ಮುಳುಗುರುಕುಲದಿಗೆ, ತುಡುಗಿಗೆ ಹೆಸರಾಗಿದ್ದ ದಳವಾಯಿ ಕೆಂಜೆಡೆಯ ಅವರಿರುವರೂ ತಕ್ಕಮಟ್ಟಿಗೆ ನಿಶಾಚರರಾಗಿದ್ದರು. ಅವರಿಗೆ ಮನೆಮಠ, ಹೆಂಡತಿ ಮಕ್ಕಳು, ನನ್ನೂರು ತನ್ನೂರು ಯಂಬುವವರಿರಲಿಲ್ಲ.. ಸದರಿ ಪಟ್ಟಣದ ಮಂದಿ ಮಾ ಸೋಂಬೇರಿಗಳೂ, ನಿದುರಾಪ್ರಣರೂ ನಂಬುದನ್ನು ಯಾದೊ ಮೂಲದಿಂದ ತಿಳಿದುಕೊಂಡೋ, ಮೊಹಿಸಿಯೋ ಜರುಮಲಿ ವಳಿತದೊಳಗಿರುವ ಕಣಕುಪ್ಪಿಗ್ರಾಮದಿಂದ ವಲಸೆ ಬಂದವರಾಗಿದ್ದರು. ವಂದೇ ಹೊಟ್ಟೆಯಲ್ಲಿ ಹುಟ್ಟಿ ಬಂದವರಂತಿದ್ದರು. ಆದರವರಿಬ್ಬರ ಜಾಯಮಾನ ವಂದೇ ತೆರನದ್ದಾಗಿರಲಿಲ್ಲ. ವಂದು ಕಾಲಕ್ಕೆ ಯಲ್ಲಾಪ್ರಕೊರಚರಟ್ಟಿಯ ಆಕಾಸರಾಮಣ್ಣನ ಶಿಷ್ಯರಲ್ಲಿ ಅಗ್ರಗಣ್ಯನೂ, ಪ್ರಾಣಿ ಪಕ್ಷಿಗಳ ಕೂಗನ್ನು ಅನುಕರಿಸುವಂಥವನೂ ಆಗಿದ್ದ ವುರುಕಂದಿಯು ಮರ ವಳ ಹೊರಗೆ ಸಣಪುಟ್ಟ ಕಳ್ಳತನ ಮಾಡುತಲಿದ್ದರೆ, ಕೆಂಜೆಡೆಯನು ವಬ್ಬಂಟಿ ಹೆಂಗಸರ ಗಂಡಂದಿರಂತೆ ನಟಿಸ ಬರಬಲ್ಲವನಾಗಿದ್ದನು. ಯಿಂಥ ಕುಕ್ಕುತ್ಯಗಳಲ್ಲಿ ಸದಾ ಪುರುಸೊತ್ತಿಲ್ಲದಂತೆ ದುಡಿಯುತಲಿದ್ದ ಅವರಿಗೆ ಮೂರಿನ ಯಿದ್ಯಾಮಾನಗಳ ಕಡೆ ಅನ್ನದ ಅಗುಳಿನಷ್ಟಾದರೂ ಗಮನ ಯಿರಲಿಲ್ಲ. ಅರಮನೆಯೊಳಗೋ, ತಿರುಪಾಲಯ್ಯ ಸ್ರಷ್ಟಿ ಮನೆಯೊಳಗೋ ಯಿದೆ ಯನ್ನಲಾದ ನಿಧಿಯನ್ನು ದೋಚುವ ಕಾರಣಕ್ಕಾಗಿ ಪಟ್ಟಣದೊಳಗೆ ಬೀಡು ಬಿಟ್ಟಿದ್ದರು. ಆ ಕಾರಣಕ್ಕಾಗಿ ಕೆಂಜೆಡೆಯನು ಜೋಗಿ ಜಂಗಮ ರೂಪದಲ್ಲಿ ತಿರುಗಾಡುತ ಆ ಯರಡು ಮನೆಗಳ ಲಯಿಂಗಿಕ ಅತ್ರುಪ್ತ ಹೆಂಗಸರ ಬಹುದೊಡ್ಡ ಯಾದಿಯನ್ನೇ ತಯಾರಿಸಿಕೊಂಡಿದ್ದನು. ಅವರ ಪಯ್ಕ ವಂದಿಬ್ಬರನ್ನು ತನ್ನ