ಪುಟ:ಅರಮನೆ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ಬಲೆಗೆ ಕೆಡವಿಕೊಂಡಿದ್ದನು. ಆ ರಾತ್ರಿಕೂಡ ಅವರಿಬ್ಬರೂ... ಆ ಕಡೆಯಿಂದವನೂ ಯೀ ಕಡೇಲಿಂದೀತನೂ ರಿಕ್ತ ಹಸ್ತಂಬುಲತೋ ಬಂದು ಕರವ್ವನ ಬಾವಿ ಕಟ್ಟೆಯ ಮ್ಯಾಲ ಕೂತು ತಮ್ಮ ತಮ್ಮ ಅನುಭವ ಗಳನ್ನು ಹಂಚಿಕೊಳ್ಳತೊಡಗಿದರು. ಯಷ್ಟೋ ಹೊತ್ತಿನ ತನಕ ಅಗೋ ಅಲ್ಲಿ ಮೂಡಣದ ತಲಬಾಲಕ ಮ್ಯಾಲ ಬೆಳ್ಳಿ ಚುಕ್ಕಿ... ಯಗೋ ಯಿಲ್ಲಿ ಅಂರ್ಜಿಣಿ ಬತೇರಿಯಂಥ ಮೋಟುಗೋಡೆ ಮ್ಯಾಲೇರಿ ಕೊಕ್ಕೋಕೋss ಯಂದು ಗಂಟಲ ಶಹನಾಯಿ ನುಡಿಸಿತು. ಕ್ರಮೇಣ ಬೆಳಕು ಮಿಸುಕಾಡುತಾ.. ಅಗಲವಾಗುತ್ತಾ ಹೋಯಿತು. ಮರ ಕಡೇಲಿಂದ ಪಕ್ಕವಾದ್ಯಗಳೋಪಾದಿಯಲ್ಲಿ ಆಕಳಿಕೆ ಸದ್ದು, ದನಕರುಗಳ ಅಂಬಾ ಸದ್ದು, ಕೂಸು ಕಂದಮ್ಮಗಳ ಟಿಟಾರನೆ ಚೀರಿಕೊಳ್ಳುತ್ತಿರುವ ಸದ್ದು, ವಂದರ ಹಿಂದೊಂದರಂತೆ ಕೇಳಿಬರಲಕ ಹತ್ತಿದವು. ಮರೋಳಗ ಅಡ್ಡಾಡಲಕಂತ ಹೋಗಿದ್ದ ವಂದೆರಡು ಗೂಗೆಗಳು ಲಗುಬಗೆಯಿಂದ ಹಾರುತ ಬಂದು ಬಾವಿಂದ ಪೊಟರೆಯೊಳಗೆ ತೂರಿಕೊಂಡವು. ಯಿನ್ನೇನು ಪುಟ್ಟಂದೂರುತಿ ಬೆಳಗಾಗಲಕ ತಡೆ ಹಿಡಿಯದು. ಕಡುದಮ್ಮನ ಹಳ್ಳದ ಕಡೇಕ ಹೋಗಿ ಯಲ್ದಾಕಾದರೂ ಕುಂತದ್ದು ಬರೋಣಾಂತ ಅವರಿಬ್ಬರ ಅಗಸೆ ಬಾಕಲಿಂದೊಡಮೂಡಿದ್ದ ಹಾದಿಗುಂಟ ನಡೆಯುವಷ್ಟರಲ್ಲಿ.. ಅಗೋ ಅಲ್ಲೊಂದು ಗುರುತು, ಯಗೋ ಯಿಲ್ಲೊಂದು ಗುರುತು.. ಮತ್ತಲ್ಲೊಂದು ಗುರುತು ಮಗುದಿಲ್ಲೊಂದು ಗುರುತು.. ವಂದೊಂದು ಗುರುತನ್ನು ಪರದಕ್ಷಿಣೆ ಹಾಕಿದರಂತೆ.. ಬಗ್ಗಿ ನೋಡಿದರಂತೆ. ಅದರೊಳಗಿಳಿಯಲು ಪ್ರಯತ್ನಿಸಿದರಂತೆ.. ಅವು ಯೇನೆಂಬುದನ್ನು ಅರ ಮಾಡಿಕೊಳ್ಳಲಕೆಂದು ದೂರದ ಪಹರೆ ಗೋಡೆಯನ್ನೇರಿ ನೋಡಿದರಂತೆ.. ಅವು ಪಾದದಾಕಾರದ ಹೆಜ್ಜೆ ಗುರುತುಗಳಾಗಿದ್ದವಂತೆ. ಹೆಜ್ಜೆ ಗುರುತುಗಳೇ ಹಿಂಗಿರಬೇಕಾದರ ಅಡ್ಡಾಡಿದೋರು ಹೆಂಗಿರಬ್ಯಾಡ? ಆ ಆಕಾರವನ್ನು ಕಲ್ಪನ ಮಾಡಿಕೊಳ್ಳುತಾ, ಮಾಡಿಕೊಳ್ಳುತ್ತಾ ಹೊಟ್ಟೆ ರುಮ್ಮಂದಗಾತಂತೆ.. ಬುಳ್ಳಂತ ದೋತರದೊಳಗ ವಂದಾನೆ ಮಾಡಿಕೊಂಡರಂತೆ. ಬವಳಿ ಬಂದಂತಾಗಿ ಬಿಟ್ಟಿದ್ದರಂತೆ. ಬಿದ್ದೆದ್ದವರೆ ತಡಕೊಳ್ಳಲಾರದೆ ಲಬೋ ಲಬೋ ಬಾಯಿ ಬಡ ಕೊಂಡರು. ಆ ಸಬುಧಕ್ಕೆ ಮಂದಿ ತಮ್ಮ ತಮ್ಮ ಮನೆಯೊಳಗಿಂದ ಹೊರಗುದುರುತ ಬಂದು 'ಯಾಕರಪ್ಪಾ. ಯೇನಾತರಪ್ಪಾ” ಯಂದು ಕೇಳಿದರು.. ವಬ್ಬೊಬ್ಬರಿಗೂ ಬೊಟ್ಟು ಮಾಡಿ