ಪುಟ:ಅರಮನೆ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೯೧ ಮೀರದ ಅಕ್ಷಯ ಪಾತ್ರೆಯೇ ತನ್ನ ಕಿಬ್ಬೊಟ್ಟೆ ಕೆಳಗಿರುವುದೆಂದೂ ಅನ್ಯಥಾ ಭಾವಿಸಿಕೊಂಡಿರುತ್ತಿದ್ದುದೇ ಅದಕ್ಕೆ ಕಾರಣ. ನಿದ್ದೆಗಣ್ಣಲ್ಲಿ ತಾನೂ ಯಚ್ಚರಗೊಂಡೆನು ಯಂದು ಸಾರಲಿಕ್ಕೆ ಹೋ ಯಂದಾ ಕಳಿಸುವುದು ಮಾಮೂಲು. ಅದರಂತೆ ಕಯ್ಯಗಳನ್ನಾಡಿಸಿ ನೋಡಿಕೊಂಡ. ಕಯ್ದೆ ಅದು ತಗಲಲಿಲ್ಲ.. ಮಲಗಿಕೊಳ್ಳೋ ಮುಂದುಗಡೆ ಇದ್ದಂಥ, ರಾತರಿ ಪಲ್ಯಂತರ ಜಾಗರಗೊಂಡಿದ್ದಂಥ ಅದು ಯಲ್ಲೋಯ್ತು? ಅದು ತನ್ನ ಸರೀರದ ಮ್ಯಾಲಿಲ್ಲ ಯಂದು ಅವರಿವರಿಗೆ ಹೇಳಲಕ, ಕೇಳಲಕ ನಾಚಿಕೊಂಡು ಆ ಪುರುಷಪುಂಗವನು ಹಾಸಿಗೆ ಯಲ್ಲೇನಾದರೂ ವುದುರಯಾಗಿದರಯ್ತಾ ಯಂದು ಕವುದಿ ಕಂಬಳಿ ಕೊಡಕೊಡವಿ ನೋಡಿದ, ಯಲ್ಲೂ ಕೋರೈಯಿಸಲಿಲ್ಲ. ಅಲ್ಲೇನಾದರಯ್ಯಾ, ಯಿಲ್ಲೇನಾದರಂಝಾ ಯಂದು ಮಲಿಕ್ಕೆಂಭೋ ಕೋಣೆಯ ಮೂಲೆ ಮುರುಕಟ್ಟುಗಳನ್ನು ಬೆದಕಾಡಿದ, ಗೋಚರಾಗಲಿಲ್ಲ. ಬುಟ್ಟ ದೋತರ ದೊಳಗೇನಾದರು ಸಿಕ್ಕಂಡಿರಬೌದಾ ಯಂದು ಕೊಡವಿದ, ವುದುರಲಿಲ್ಲ. ರಾತ್ರಿ ತನ್ನ ಕೂಡೆ ಯಾರು ಮಲಿಕ್ಕಂಡಿದ್ದರೆಂಬುದನ್ನು ನೆಟ್ಟು ಮಾಡಿಕೊಂಡ. ಮೂರನೆಯಾಕೆಯಾದ ಗಂಗೀ ಯಂದು ಕೂಗಿದ. ಅಡುಗೆ ಮನೆಯಿಂದ ಬಂದ ಆಕೆ 'ಯೋನು' ಯಂದು ಕೇಳಿದಳು. 'ನಂದೇನಾದರೂ ನಿನ್ನತ್ರಅಯ್ತಾ' ಯಂದು ಕೇಳಿದ. “ಯಾವುದು? ಯೇನು ಕಥೆಯು?”” ಆಕೆ ಹೇಳದೆ ಕೇಳದೆ ಆಕೆಯ ಸೀರೆಯನ್ನು ಜಾಲಾಡಿದ, ವುದುರಲಿಲ್ಲ. ತಾನು ಗಾಢ ನಿದ್ದೆಯಲ್ಲಿದ್ದಾಗೇನಾದರೂ ಅದು ರೋಸಿ ವಾಯು ಯಿಹಾರಕ್ಕೇನಾದರೂ ಹೋಗಿರಬೌದಾ ಯಂದು ಅನುಮಾನಿಸಿದ. ಅದು ಹಾಂಗ ಯಾವತ್ತೂ ಹೋದುದಿಲ್ಲ.. ಆದರೂ.. ಮನೆಯ ಮೂಲೆ ಮೂಲೆಯಲ್ಲಿ.. ಅಡಕಲ ಗಡಿಗೆಗಳಲ್ಲಿ.. ಬಟ್ಟೆ ಗಂಟುಗಳಲ್ಲಿ.. ದವಸ ಧಾನ್ಯ ತುಂಬುವ ವಾಡೇವುಗಳಲ್ಲಿ.. ಹಿತ್ತಲಲ್ಲಿ.. ಅಂಗಳದಲ್ಲಿ.. ಮರಗಿಡಗಳ ಪೊಟರೆಗಳಲ್ಲಿ ಹುಡುಕಾಡೇ ಹುಡುಕಾಡಿದ. ಮನೆ ಯಜಮಾನನಾದ ಆತನ ಹಾರಾಟ ಹುಡುಕಾಟ ಕಂಡು ಮನೆಮಂದಿಯು ಕಳಕೊಂಡಿರುವುದಾದರೂ ಯೇನು? ಬಂಗಾರದ್ದಾ? ಬೆಳೀದ್ದಾ. ಯಲ್ಲಿಟ್ಟಿದ್ದಿ? ಹೆಂಗಿಟ್ಟಿದ್ದಿ ಯಂದು ಕೇಳಿದರು. ಅದಕ್ಕಾತ ವುತ್ತರವನ್ನು ಲಗೂನ ಕೊಡಲಿಲ್ಲ.. ತಡವರಿಸಿದ. “ಸಂದೂಕದಲ್ಲೇನಾದರೂ ಯಿಟ್ಟು ಮರತುಬಿಟ್ಟಿರುವಿಯೇನೋ ನೋಡು ನೀನು ಮೊದಲೇ ವುರುವುಗೇಡಿ” ಯಂದು ಹಿರಿಯ ಹೆಂಡತಿ ಸಲಹೆ ನೀಡಿದಳು. ತಲತಲಾಂತರದಿಂದ ಬಂದಿದ್ದಂಥ ಸಂದೂಕದ ಬಾಯಿ ತೆರೆದು ಬೆದಕಾಡಿದ. ಆದರದು ಥಳಥಳ