ಪುಟ:ಅರಮನೆ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨ ಅರಮನೆ ಹೊಳೆಯಲಿಲ್ಲ. ಯಿಲ್ಲೂ ಯಿಲ್ಲ ಸಿವನೇ.. ಅಲ್ಲೂ ಯಿಲ್ಲ ಸಿವನೇ.. ಯಲ್ಲೆಲ್ಲೂ ಯಿಲ್ಲ ಸಿವನೇ... ತನ್ನ ಸರೀರಕ್ಕೆ ಸೋಡಾ ಸೀಟಿ ಕೊಟ್ಟು ಅದು ಪಲಾಯನಗಯದಯ್ತಿ ಸಿವನೇ... ಅದಿಲ್ಲದ ತನ್ನ ಸರೀರವು ನಿರಾಭರಣವಾಗಯ್ತಿ ಸಿವನೇ.. ಅದು ತನ್ನ ಪಾಲಿಗೆ ಜೀವಾತುಮ, ಪರಮಾತುಮವಾಗಿತ್ತು ಸಿವನೇ.. ಅದಿಲ್ಲದೆ ತಾನು ಹೆಂಗ ಬಾಳಲಿ ಸಿವನೇ.. ತನ್ನ ಸರೀರ ಸಿರಿಯನ್ನೇ ನಂಬಿ ಬದುಕುತ್ತಿರುವ ಚತುರಿಂಸತಿ ಸುಂದರಿಯರಿಗೆ ಮುಖಮಾರಿಯನ್ನೆಂಗೆ ತೋರಿಸಲಿ ಸಿವನೇ.. ಆ ಬಲಾಡ್ಯ ಸೇನಾಪತಿಯ ಬಾಯಿಯಿಂದುದುರುತಲಿದ್ದ ವಂದೊಂದು ಆಣಿಮುತ್ತನ್ನು ಕಿವೀಲೆತ್ತಿಕೊಂಡು ಹಾ... ಹಾ... ಹೋ ಹೋ ಯಂದುದ್ದಾರ ತೆಗೆದರು ಮನೆಮಂದಿಯು.. “ಮಕ್ಕೂ ಕಂಡಿರುವಿ.. ಮೊಮ್ಮಕ್ಕಳೂನ ಕಂಡಿರುವಿ.. ಅದು ಹೋದ್ರುಹೋಯ್ತು ಬಿಡು.. ಅದರ ರಿಣ ತೀಝಂತ ತಿಳಕೊಂಡು ತೆಪ್ಪಗಿರಬಾರೇನು.. ಕೇಳಸಿಕೊಂಡ ನಾಕುಮಂದಿ ಯೇನೆಂದುಕೊಂಡಾರು” ಯಂದು ಹೆಂಡಂದಿರು ಸಂತಯಿಸುತ್ತಿದ್ದರು ಸಿವನೇss. - ಅತ್ತ ಭಂಡಾರಿಯವರ ಮನೆಯಿಂದ ಬಂದಂಥ ವರಮಾನ ಯಿನ್ನೊಂದು ತರನಾಗಿದ್ದಿತು ಸಿವನೆ. ಭಂಡಾರಿ ಸನ್ಯಾಸಪ್ಪ ಮಾ ಸೊಗಸುಗಾರನೆಂದೇ ಪಟ್ಟಣದಾದ್ಯಂತ ಹೆಸರುವಾಸಿಯಾಗಿದ್ದ. ತಾನಾಟೊಂದು ಛಲುವನಾಗಿರದಿದ್ದರೂ ತನ್ನನ್ನು ತಾನು ಮನುಮಥನೆಂದೇ ರುಥಾ ಆರೋಪ ಮಾಡಿಕೊಂಡಿದ್ದನು. ತನ್ನ ಛಲುವನ್ನು ನೂರು ಮುಡಿಯಾಗಿಡಲೆಂದೇ ವರಮಾನದ ಭೋಪಾಲನ್ನು ಖರು ಮಾಡುತಲಿದ್ದನು.. ತಲೆಮ್ಯಾಲಿನ ಕೂದಲು, ದೊಣ್ಣೆ ಮೂಗು ಕೆಳಗಿನ ಮೀಸೆಯ ಗಾತರ ಕುರಿತು ದಿನಂಪ್ರತಿ ಜಾಗರೂಕತೆ ವಹಿಸುತಲಿದ್ದನು. ತನ್ನ ಯಿರುವಿಕೆ ಆಗಲೀ, ಆಗಮನವಾಗಲೀ ಯಿಡೀ ಮೋಣಿ ಮಂದಿಗೆ ಮುಂಗಡ ತಿಳಿಯಲಕಂತ, ಗವುರವ ಕೊಡಲಕಂತ ಘಮ್ಮೆಂದೆಣ್ಣೆ ತನ್ನ ಗಿಡ್ಡ ಸರೀರದ ತುಂಬೆಲ್ಲ ಪೂಸಿಕೊಂಡಿರುತಲಿದ್ದನು. ತನ್ನನ್ನು ಹೊಗಳುವವರನ್ನು ಸತ್ಕರಿಸುತ್ತಲೂ, ತೆಗಳುವವರನ್ನು ಸಿಕ್ಷಿಸುತ್ತಲೂ ಯಿದ್ದನು. ತನ್ನ ಬಗ್ಗೆ ಯಾರಾರು ಯೇನೇನು ಮಾತಾಡಿಕೊಳ್ಳುವರೆಂಬುದನ್ನು ಪತ್ತೆಹಚ್ಚಲಕೆಂದೇ ಖಾಸಗೀ ಗೂಢಾಚಾರರನ್ನು ನೇಮಿಸಿಟ್ಟುಕೊಂಡಿದ್ದನು. ದಿನಕ್ಕೊಂದು ಸಲವಾದರೂ ನಾಕಾರು ಮಂದಿ ಯನ್ನು ತರುಬಿ ಯದುರಿಗೆ ಕೂಡ್ರಿಸಿಕೊಂಡು ನೀವೆಲ್ಲ ನಿಮ್ಮ ನಿಮ್ಮ ಸರೀರಗಳ ಸವುಂದರದ ಕಡೆ ಹೆಚ್ಚು ಗಮನ ಕೊಡುತ್ತಿರಬೇಕೆಂದೂ, ಸುಂದರ ಪ್ರಜೆಗಳೇ ಸಾಮುರಾಜ್ಯದ ಸಂಪತ್ತೆಂದೂ ತಿಳುವಳಿಕೆ ಹೇಳುತಲಿದ್ದನು. ಯಂಥ