ಪುಟ:ಅರಮನೆ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬೋಳಾಗಿರುವ ರಾಜನನ್ನು ನೋಡಿ ಆನಂದಿಸಬೇಕೆಂಬ ಆನಂದೇಶ್ಲೇವುಳ್ಳವರಾಗಿ, ಅಯ್ಯೋ ಪಾಪ ಯಂಬ ಅನುಕಂಪವುಳ್ಳವರಾಗಿ, ಸಾಮುರಾಜ್ಯದ ಗತಿಯೇನು ಯಂಬ ಕಳಕಳಿವುಳ್ಳವರಾಗಿ ಪ್ರಜೆಗಳು ತಂಡೋಪತಂಡವಾಗಿ ಅರಮನೆಯನ್ನು ತಮ್ಮ ಗಂಟಲೊಳಗೆ ತುಂಬಿಕೊಂಡು... ತಂಬೂರೋರು ಆ ಕಡೇಲಿಂದ, ಯೀ ಕಡೇಲಿಂದ ಚವುಡಿಕ್ಕೋರು... ಯ್ಯೋಳುಕೊಳ್ಳ ದೆಲ್ಲಮ್ಮಾ ಹುಲಿಗಿಯ ಹುಲಿಗೆಮೋ... ಮತ್ತೇರಿ ಮಾರಮೋs. ಯೋಳೂರು ಯ್ಯೋಳು ಮುಖದಮೋs ದರೂರು ದುರುಗಮ್ಮೇ, ಮಳೂರು ವುಡುಸಲೆಮೋs ತಾಳೂರು ತಾಂಯಯ್ಯೋ.. ತಮ ತಮ್ಮ ನಾಲಗೆಯಿಂದ ಸತ ಸಹಸತಾಯಂದಿರ ನಾಮಸ್ಮರಣೆ ಮಾಡೂತ ತೂರಾಡಿ ಮುಗುಲ ಬಯಲೊಳಗೆ ಕುಂಕುಮ ಭಂಡಾರ ಯಿಬತ್ತಿಗಳ ಸಮಿಸಸರಕಾರ ರಚನೆ ಮಾಡೂತ ಆರೋಹಣದಲ್ಲಿ ಮುಂದಕ ಜಿಗಿಯೂತ, ಅವರೋಹಣದಲ್ಲಿ ಹಿಂದಕ್ಕೆ ಪುಟಿಯೂತ, ಅಗೋ ಅಲ್ಲಿ ಧಗಧಗನೆ ವುರಿವುತಾಳ ದ್ಯಾವಿ ದ್ಯಾವಮ್ಮಾ ಯಿಗೋ ಯಲ್ಲಿ ಕೆಂಡದುಂಡೆಗಳ ತೂರಾಡುತಾಳೆ ಮಾತಾಯಿ ಮಾಳಮ್ಮ, ಭೂದೇವಿಗೆ ಸಗುತಿ ಸೊರೂಪಿಣಿಗೆ ಜಯ್, ಆದಿಸಗುತಿಯ ಪಾದಾರಯಿಂದಕ್ಕೆ ಜಯ್, ಸಿವನಾಮ ಪಾರೋತಿ ಪತಿಹರ ಹರ ಮಾದೇವೂss.. ಲಚುಮೀ ರಮಣ ಗೋಯಿಂದಾ ಗೋಯಿಂದಾ.. ಯಂದು ಮುಂತಾಗಿ ಜಯಕಾರ ಹಾಕೂತ.. ಗುಂಪು ಗುಂಪಿಗೆ ಬೆರೆತು, ಪರಿಶ ಜಾತುರಿಗೆ ಬೆರೆತು ನಿರುಮಾಣಗೊಂಡ ಜನ ಸಾಗರವು ದಿವಿನಾದ ರೂಪದಲ್ಲಿ ಅಂಬೆಗಾಲಿಡುತಾ.. ಅಂಬೆಗಾಲಿಡುತಾ ಸದರಿ ಪಟ್ಟಣದ ರುದಯ ಭಾಗವಾದ ಚವುರಸ್ತಾ ತಲುಪಲದಕ ಅಲ್ಲೊಂದು ಯಿಚಿತ್ರವು ಅದಕ್ಕಾಗಿ ಅಲ್ಲಿ ಕಾದಿತ್ತು. ಬಡೇಲಡಕು, ಕುಮತಿ, ಕಾನಾಮಡುಗು ಗುಂಡುಮುಳುಗು ಯಂಬಭಿಧಾನ ಹೊತ್ತಿದಂಥಾ ನಾಕು ಗ್ರಾಮಗಳಿಂದ ಸುಮಾರು ನಾಕುನೂರು ಮಂದಿ ವುಧೋ ವುದೋ ಯಾಕ್ಕುಲ್ಲೇ ವುದೋ ವುಧೋ ಯಂದು ಕೂಗುತ್ತ ಸಜ್ಜಾಗಿ ನಿಂತಿತ್ತು. ಎಂದು ಕಾಲಕ್ಕೆ ಆ ನಾಕೂ ಮೂರುಗಳು ಕುದುರೆಡಮೊಳಗೆ ವಡಹುಟ್ಟಿದವುಗಳಂತಿದ್ದವು.. ದಾಯಾದಿಗಳಂತೆ ಸಿಡಿದು ಹೋಗಿ ಕೂಗಳತೆ ದೂರದಲ್ಲಿ ತಳವೂರಿದ್ದವು. ಮದೇ ಯರಕ ವುಯ್ದು ಮಾಡಲ್ಪಟ್ಟವುಗಳಂತೆ ಅವು ಯಿದ್ದವಷ್ಟೆ. ಕುದುರೆಡವಿಗೆ ಹೊಟ್ಟೆನೋವು ಬಂದಲ್ಲವು ಕಷಾಯ ಕುಡಿಯುತ್ತಿದ್ದವಷ್ಟೆ. ಕುದುರೆಡವಿನತ್ತ ಸದಾ ತಮ್ಮ ಪಂಚೇಂದ್ರಿಯಂಗಳನು ಹರಿಬಿಟ್ಟಿರುವುತ್ತಿದ್ದವಷ್ಟೆ. * ಭಜಣೆ ಮಾಡುತ ಮೂಡಣ ದಿಕ್ಕಿನಿಂದ ಬಡೇಲಡಕಿನೋರೂ, ಡೊಳ್ಳು