ಪುಟ:ಅರಮನೆ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೯೭ ಬಡಿಯೂತ ಪಡುವಲ ಹಾದಿಗುಂಟ ಕುಮತಿಯೊರೂ, ತಾಳ ನುಡಿಸೂತ ತೆಂಕಣ ಹಾದಿಗುಂಟ ಗುಂಡು ಮುಳುಗಿನೋರೂ, ಬಡಿಯೂತ ಬಡಗಣ ಹಾದಿಗುಂಟ ಕಾನಾ ಮಡುಗಿನೋರೂ, ಯೇಕ ಕಾಲಕ್ಕೆ ತಮ್ಮ ತಮ್ಮ ಮೂರುಬಿಟ್ಟು ಯೇಕ ಕಾಲಕ್ಕೆ ಚವುರಸ್ತಾ ಸೇರಿಬಿಟ್ಟಿದ್ದರು. ಅವರು ಹೇಳಿದ್ದನ್ನಿವರು, ಯಿವರು ಹೇಳಿದ್ದನ್ನವರು ಹೇಳಿಕೊಂಡರು, ಕೇಳಿಕೊಂಡರು. ಬೂದಿಮುಚ್ಚಿದ ಕೆಂಡದಂಥ ಮೋಬಯ್ಯನೆಲ್ಲಿ? ಭೂಲೋಕದ ವುದ್ದಂಡಪ್ಪೆಯನ್ನು ರುದಯದಲ್ಲಿ ಯಿಟುಕೊಂಡಿರುವ ಮೋಬಯ್ಯನೆಲ್ಲಿ..? ಸಪ್ತ ಸಾಗರಗಳನ್ನು ವಡಲೊಳಗಿಟ್ಟುಕೊಂಡಿರುವ ಮೋಬಯ್ಯನೆಂಬ ಬಿಂದುವೆಲ್ಲಿ? ಯಂದು ಮುಂತಾಗಿ ಹುಲುಬೂತ ಜನಸಾಗರವು ಪ್ರವೇಶಿಸಿದ ಥಳಗೇರಿಯು ಥಳಗೇರಿ ಆಗಿರಲಿಲ್ಲ... ದಾರಿ ಸಾಗವಲ್ಲದು, ಮೋಬಯ್ಯನ ಸರೀರವು ಗೋಚರ ಆಗವಲ್ಲದು. ಅದು ಮುಂದ ಮುಂದಕ ಹೋದಂಗ ಆಗತಯ್ಕೆ. ತಾವು ಹಿಂದ ಹಿಂದಕ ವುಳುದಂಗ ಆಗತಯ್ಕೆ ಬಿಸಿಲು ವಯಿಶಾಖದ ಮುಖವಾಡ ಧರಿಸಿಧಂಗಯ್ಯ, ನೆಲ ಕಾದ ಕಾವಲಿ ಆದಂಗಯ್ಯ, ತಾವು ವಂದೆಂಬುವ ಹೆಜ್ಜೆಯನಿಡಲದು ಎಂದು ಯೋಜನ ದೂರಕ, ತಾವು ಯರಡು ಯಂಬುವ ಹೆಜ್ಜೆಯ ನಿಡಲದು ಯರಡು ಯೋಜನ ದೂರಕ ಸರಕಂತಯ್ಕೆ.. ಅವ್ವನ ಅರಮನೆಯಾಗಿದ್ದ ಮೋಬಯ್ಯನ ಸರೀರ ಯಂಬುವ ಮನೆಯು... ಅಂತೂ ಮೆರವಣಿಗೆಯು ಕಷ್ಟಗಳ ಸೋಸೀ ಸೋಸೀ ಮೋಬಯ್ಯನ ಮನೆಯನ್ನೇನೋ... ತಲುಪಿ ನೋಡುತಯ್ಕೆ ಮನೆ ಹೊರಗೆ ಮನೆಯೊಡೆಯನಿಲ್ಲ... ವಳಗೆ ಮನೆ ವಡೆಯನಿಲ್ಲ... ಯಲ್ಲವನೆ ಮೋಬಯ್ಯ? ಯಲ್ಲವಳೆ ತಾಯಿ ಸಾಂಬವಿ.. ತಬ್ಬಲಿಯಂತೆ ಹಂಬಲಿಸಿತು ಜನಸಾಗರವು, ಬೇರು ಸಯ್ತು ಕಿತ್ತೆಸೆದ ಯಳೆ ಬಳ್ಳಿಯಂತೆ ಬಾಡಿ ಮುದುಡಿತು ಜನಸಾಗರವು, ಅವನು ಕುಂತೇಳುತಲಿದ್ದಂಥ ಜೆಗೇವುಗಳನ್ನೆಲ್ಲ ಜಾಲಾಡಿತು. ಅವರ ಪಯ್ಕೆ ಯಿದ್ದಂಥ ಬಡಕಲೂರು ನರಸಿಂಗನು ತನ್ನ ಬಾಯೊಳಗೆ ತುಳುಕಿ ಬಂದ ಕಾರಣಿಕವನ್ನು ಆ ಕಡೇಲಿರೋ ಕುರುಗುಡ್ಡದ ತಪ್ಪಲಲೊಂದು ಟಗರು ಮೇಯುತಯ್ಕೆ ಯೀಚೆ ಕಡೇಲಿರೋ ಬೂದಿಗುಡ್ಡದ ತಪ್ಪಲಲೊಂದು ತೋಳ ಮೇಯುತಯ್ಕೆ, ಅದು ಯಿದನು ದುರುಗುಟ್ಟಿ ನೋಡುತಯ್ಕೆ.. ಯಿದು ಅದನ್ನು ದುರುಗುಟ್ಟಿ ನೋಡುತಯ್ಕೆ,