ಪುಟ:ಅರಮನೆ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಚಿಗಿತುಕೊಳ್ಳುತ್ತಿದ್ದವು. ಅಂಥ ಸಂಘ, ಸಂಘಟನೆಗಳ ಮುಖಂಡರನ್ನು ಬಹಿರಂಗವಾಗಿ ಯದುರಿಸುವ, ಯಿಚಾರಿಸುವ ಯದೆಗಾರಿಕೆ ಯಿರದಿದ್ದ ರಾಜರುಗಳು ಸಿಪಾಯಿಗಳ ಸಾಯದಿಂದ ರಾತಿರೋರಾತಿರಿ ಅಪಹರಿಸಿ ದೂರ ಕರೆದೊಯ್ದು ಕೊಲೆ ಮಾಡಿಸಲಾರಂಭಿಸಿ ದ್ದರು. ಯಿದಕ್ಕೆಂದೇ ಕೆಲವು ಪಾಳೆಗಾರರು ನಿರಯ ಕೊಲೆಗಡುಕರನ್ನು ಬಾಡಿಗೆ ಪಡೆದಿಟ್ಟುಕೊಂಡಿದ್ದರು. ಯಿನ್ನೂ ಕೆಲವು ರಾಜರು ತಮ್ಮ ಆರಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಲಕೆಂದೇ ಕಳ್ಳಕಾಕರನ್ನು ಸಾಕಲಾರಂಭಿಸಿದ್ದರು. ಪ್ರತಿಯೊಂದು ಮರುಗಳೊಳಗೆ ಅಂಥ ಜೋರಾಗ್ರೇಸರರು ಹಗಲು ಹೊತ್ತಿನಲ್ಲಿ ಸಾಮಾಜಿಕರ ನಡುವೆ ಮಹಾ ಧರುಮಭೀರುಗಳಂತೆಯೂ ಮುಖವಾಡ ಧರಿಸಿ ಜೀವನ ಮಾಡುತಲಿದ್ದುದು ಸಾಮಾನ್ಯ ದ್ರುಶ್ಯವಾಗಿತ್ತು. ಯೀ ಪ್ರಾಂತದ ಕಳ್ಳರು ಆ ಪ್ರಾಂತದಲ್ಲೂ, ಆ ಪ್ರಾಂತದ ಕಳ್ಳರು ಯಿ ಪ್ರಾಂತದಲ್ಲೂ ಕಾರತತ್ಪರರಾಗಿರುತ್ತಿದ್ದರು. ವುಗಾದಿ, ಮಾನವಮಿ, ದೀಪಾವಳಿಯಂಥ ಹಬ್ಬಹರಿದಿನಗಳಲ್ಲಿ ಕಳ್ಳಕಾಕರನ್ನು, ಕೊಲೆಗಡುಕರನ್ನು ಸಾರುವಜನಿಕವಾಗಿ ವುಚಿತಾಸನಗಳಲ್ಲಿ ಕುಂಡ್ರಿಸಿ ಬಿರುದು ಬಾವಲಿ, ನಗದು ಬಹುಮಾನ ಕೊಟ್ಟು ಸತ್ಕಾರ ಮಾಡುವ ರಾಜರುಗಳು ಮರಿಗೊಬ್ಬೊಬ್ಬ ರಂತಿದ್ದರು. ಹಿಂಗಾಗಿ ಸೂಕ್ತ ರಕ್ಷಣೆಯಿಂದ ವಂಚಿತರಾಗಿದ್ದ ಪ್ರಜೆಗಳ ಬದುಕು ಅತ್ತ ದರಿ, ಯಿತ್ತ ಪುಲಿ ಯಂಬಂತಾಗಿತ್ತು. ವಂದು ವುದಾಹರಣೆ ಕೊಡಲಕಂದರೆ ಜರುಮಲಿಯ ರಾಜನು ಅಪರಿಮಿತ ಆಸೆ ಆಮಿಷವಡ್ಡಿ ನಿಚ್ಚಾಪುರ ರಾಜ್ಯದ ಚೋರರನ್ನು, ಕೊಲೆಗಡುಕರನ್ನು ಬರಮಾಡಿಕೊಂಡು ಅವರಿಗೆ ರಾಜಾಸ್ತಯ ನೀಡುತಲಿದ್ದರೆ, ನಿಚ್ಚಾಪುರದ ರಾಜನೂ ಅದೇ ಕಾರ ಮಾಡುತಲಿದ್ದನು.. ಯಿಂಥ ತಮ ತಮ್ಮ ರಾಜರುಗಳ ದುರಾಡಳಿತಕ್ಕೆ ರೋಸಿ ಪ್ರಜೆಗಳು ಮನೆಮಟ, ಆಸ್ತಿಪಾಸ್ತಿ ಬಿಟ್ಟುಕೊಟ್ಟು ಹೆಂಡಿರು ಮಕ್ಕಳನ್ನು ಕಟ್ಟಿಕೊಂಡು ದಾವಣಗೆರೆಗೋ, ಹೊಸಪೇಟೆಗೋ ವಲಸೆ ಹೋಗಿ ಕೂಲಿನಾಲಿ ಮಾಡಿ ಬದುಕತಲಿದ್ದರು (ಅದೂ ತಮ್ಮ ಮೂರುಪಾರು ಹೆಸರುಗಿಸರುಗಳನ್ನು ಮರೆಮಾಚಿಕೊಂಡು).. ಯಂಥ ಪ್ರಜೆಗಳು ತಂಡೋಪತಂಡವಾಗಿ ಕೂಡ್ಲಿಗಿ ಪಟ್ಟಣವನ್ನೂ ತುಂಬಿಕೊಳ್ಳದಿರಲಿಲ್ಲ.. ತಮ್ಮ ಸವಲತ್ತುಗಳನ್ನು ಯಿವರೂ ಹಂಚಿಕೊಳ್ಳುವರೆಂಬ ಕಾರಣದಿಂದ ಸ್ಥಳೀಕರಿಗೂ, ಸಂತರಸ್ತರಿಗೂ ನಡುವೆ ವಾದೋಪವಾದ, ಜಗಳ ಗಲಾಟೆ ಹೊಡೆದಾಟ ನಡೆಯದೆ ಯಿರಲಿಲ್ಲ... ಸಂತರಸ್ತರು ಗುಂಪುಗುಂಪಾಗಿ ಕುಂಪಣಿ ಅಧಿಕಾರಿ ಯಡ್ಡವರನನ್ನು ಕಂಡು ತಮ್ಮ ಅತಂತರ ಸ್ಥಿತಿಯನ್ನು ಯಿವರಿಸದೆ