ಪುಟ:ಅರಮನೆ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೦೩ ಕಾಲಂದಿಗೆ ಸಪ್ಪಳಕಾಗಿ ಕಿವಿಯ ಹರ ಬಿಟ್ಟಯಿತೆ, ತಾಯಿಯಿಂಥಲ್ಲಿ ಅದಾಳೆಂದರೆ ಅಂಥಲ್ಲಿ ದುಡುದುಡನೆ ಮೋಡಲಿಕ್ಕಾಗಿ ಕಾಲುಗಳನ್ನು ಸಜ್ಜು ಮಾಡಿಕೊಂಡಯಿತೆ, ತಾಯಿ ರೂಪ ಗೋಚರವಾದೊಡನೆ ಮುಗಿಯಲಿಕ್ಕಾಗಿ ತಮ್ಮ ತಮ್ಮ ಕಯ್ಯಗಳನು ಸಜ್ಜು ಮಾಡಿಟ್ಟುಕೊಂಡಯಿತೆ, ಬೆವರಿನಲ್ಲಿ ಮಜ್ಜಣಗಯ್ತು ಮಡಿವುಡಿ ಆಗಯ್ತಿ.. ತಾಯಿಗೆ ಬೆಳಗಲಿಕ್ಕೆಂದು ತಮ್ಮ ತಮ್ಮ ಕಣ್ಣಗಳೊಳಗೆ ಮಂಗಳಾರತಿ ಸಜ್ಜು ಮಾಡಿಟ್ಟುಕೊಂಡಯ್ಕೆ. ತಾಯಿಯ ನಲುಮೆ ಪಡೆಯಲಿಕ್ಕೆಂದು, ಆಕೆಯ ಕೋಪ ತಮಣಿ ಮಾಡಲಕೆಂದು ತಮ್ಮ ತಮ್ಮ ಯದಗಳೊಳಗೆ ಹಾಡುಗಳನು ತರುಬಿಟ್ಟುಕೊಂಡಯಿತ ಮಂದಿ.. ಕುದುರೆಡಮೊಳಗೆ ಮಾಯವಾಗಿರುವ ಸುದ್ದಿ, ಹುಬ್ಬುಗಳು ನೆತ್ತಿಮಾಲ ಅಂತಸ್ಥಾನವಾಗಿರುವ ಸುದ್ದಿ, ಹಾಲು ನೀರಾಗುತ್ತಿರುವ ಸುದ್ದಿ, ಆ ಸುದ್ದಿ, ಯೀ ಸುದ್ದಿ ಮುಂತಾದ ಛಪ್ಪನ್ನಾರು ಸುದ್ದಿಗಳು ಗಾಳಿಗುಂಟ ಸವಾರಿ ಹೊಂಟ ಪರಿಣಾಮವಾಗಿ, ಪಕ್ಷಿಗಳ ಗಂಟಲೊಳಗೆ ಅಡಗಿ ಪಯಣ ಹೊಂಟ ಪರಿಣಾಮವಾಗಿ, ಕಣಸೂಳಗ ಮೂಡಿ ಕಯಿಫಿಯತ್‌ಗಳನ್ನೋದಿದ ಪರಿಣಾಮವಾಗಿ ಸುತ್ತನ್ನಾ ಕಡಲಕಿದ್ದ ಗುಂಡುಮುಳುಗು, ಕಾನಾಮಡುಗು, ಕುಮತಿ, ಕಮತಿಯೇ ಮೊದಲಾದ ದೇಸ ಯಿದೇಸಗಳಿಂದ ಮಂದಿ ಯಂಭೋ ಮಂದಿಯು ತಮ್ಮ ತಮ್ಮ ಯದೆಗೂಡು ಗಳಲ್ಲಿ ಕವುತುಕದ ಮೊಟ್ಟೆಗಳನ್ನು ಯಿಟ್ಟುಕೊಂಡು ಸದರಿ ಪಟ್ಟಣದತ್ತ ಸಾಲಿಟ್ಟಿತು ಸಿವನೇ, ಬರೋರನ್ನು ಯಾಕ ಬಂದಿರಿ ಯಂದು ಕೇಳುವವರಿರಲಿಲ್ಲ.. ಹೆಸರು ಖನ ಕೇಳಿ ಬರಕೊಳ್ಳುವ ವರಿರಲಿಲ್ಲ.. ಯಾರಾರ ಬಂದುಕೊಳ್ಳಲಿ, ಯದಕಾರ ಬಂದುಕೊಳ್ಳಲಿ ಯಂದು ನಾಕಾಬಂದಿ ಸಯೀಕರು ಪಟ್ಟಣದ ಸಮಸ್ತ ದಿಡ್ಡಿ ಬಾಕುಲುಗಳನು ಹಾರೊಡೆದಿದ್ದರು ಸಿವನೇ.. ಬರೋರ ಕಡೇಕ ಬೆನ್ನುಮಾಡಿಬಿಟ್ಟಿದ್ದರು ಸಿವನೇ.. ಹಿಂಗಾಗಿ ಸದರಿ ಪಟ್ಟಣಕ್ಕೆ ಪರಸ್ಥಳದ ಮಂದಿ ಬರುತ್ತಿದ್ದುದೇನು? ತಾಯಿಯ ಪಾದ ಗುರುತುಗಳ ದರಸನ ಪಡೆಯುತ್ತಿದ್ದುದೇನು? ಕಿವಿ ಕಣ್ಣುಮುಚ್ಚಿ ತಮತಮ್ಮೆದೆಯೊಳಗೆ ತಾಯಿಯ ಅಗಾಧ ರೂಪವ ತಲುಪಿಸಿಕೊಳ್ಳುತ್ತಿದ್ದುದೇನು? ಸಿವಸಂಕರ ಮಾದೇವಾ...... ತಾಯಿಗೆ ತನ್ನ ಸರೀರವನ್ನು ಭೋಗ್ಯ ನೀಡಿದ ಭಾಗ್ಯಶಾಲಿ ಮೂಳೆ ಮೋಬಯ್ಯನ ಮನಿಯಿದ್ದ ಥಳಗೇರಿಯ ಗುಡಿ ಹಿಂದಲಕ ಹೋಗುತ್ತಿದ್ದುದೇನು? ಆತನು ಕುಂದುರುತ್ತಿದ್ದಂಥ, ನಿಂದಿರುತ್ತಿದ್ದಂಥ ಮಲಿಕ್ಕಂಬುತ್ತಿದ್ದಂಥ, ಜಳಕ ಮಾಡುತ್ತಿದ್ದಂಥ ಜಗೋವುಗಳನ್ನು ನೋಡುತ್ತಿದ್ದುದೇನು ಸಿವ ಸಿವಾ.. ಸಣುಮಾಡುತ್ತಿದ್ದುದೇನು ಸಿವ ಸಿವಾ.. ಅಗೋ ಅಲ್ಲಿ ಮರದವ್ವ