ಪುಟ:ಅರಮನೆ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಅರಮನೆ ತಾಯಿಯ ಅವಕ್ರುಪ ತಾಕಿ ಬಡಕಲಾಗುತ್ತಿರುವ ಬೇಯಿನ ಮರದವ್ವನ ಸನೀಕ ಹೋಗುತ್ತಿದ್ದುದೇನು? ಆಕೆಯ ಬೊಡ್ಡಮುಟ್ಟಿ ಸಣುಮಾಡುತ್ತಿದ್ದುದೇನು? ಅಲ್ಲಿಯೇ ಹರಕು ಬರಕು ನೆಳ್ಳ ತಡಿಮ್ಯಾಲ ನೆಲವನ್ನು ಮುಗುಲೆಂದು, ಮುಗುಲನ್ನು ನೆಲ ಯಂದು ಭಾವಿಸಿ ಕೂಕಂಡಿರುತ್ತಿದ್ದ ಸಂತರಸ್ತೆ ಜಗಲೂರೆವ್ವನ ಸುತ್ತಮುತ್ತ ಗುಂಪು ಸೇರುತ್ತಿದ್ದುದೇನು ಸಿವಸಿವಾ.. ಗುಸುಗುಸು ಮಾತಾಡುತ್ತಿದ್ದುದೇನು ಸಿವನೇ... - ಥಳಗೇರಿಗಳ ತಂಟೆಗೆ ಹೋಗಿಲ್ಲದ ತಾಯಿ, ಹೊಲಗೇರಿ ತಂಟೆಗೆ ಹೋಗಿಲ್ಲದ ತಾಯಿ, ದುಡಿದುಂಬೋರ ತಂಟೆಗೆ ಹೋಗಿಲ್ಲದ ತಾಯಿಯು ತಂಟೆಗೆ ಹೋಗಿರುವುದು ತನ್ನನ್ನಂಬಾಡಿದ ಮಾಗಳಗೇರಿಗಳಿಗೇಯಾ, ತಡವಿರೋದು ತನ್ನನ್ನು ಕುವ್ವಾಡ ಮಾಡಿದೋರನ್ನೇಯಾ.. ಆಕೆಯ ಸಾಪ ತಗುಲಿಕೊಂಡಿರೋದು ತಿಂದ ಕೂಳು ಅರಗಿಸಿಕೊಳ್ಳುಲಕ ಕುವ್ವಾಡ ಮಾಡಿ ದೋರನ್ನೇಯಾ... ಅವರವರು ಯಲ್ಲಲ್ಲಿರುವರೆಂದರೆ ಅಲ್ಲಲ್ಲೆ ಯಿರುವರು. ಅಗೋ ಅಲ್ಲಿರುವವರ ಕಡೇಕ, ಯಿಗೋ ಯಲ್ಲಿರುವವರ ಕಡೇಕ ಮಂದಿಯು ಕವುತುಕದ ಕಂಬಳಿ ಹೊದ್ದುಕೊಂಡು ದಟ್ಟಂಡಿ ದಾರಂಡಿ ಯಿಟ್ಟಿರುವುದು, ಸಿವಸಂಕರ ಮಾದೇವಾss.. ಪರಸ್ಥಳದ ಮಂದಿ, ಪರದೇಸದ ಮಂದಿ ವುಸುರು ಬಿಗಿ ಹಿಡಿದು ನೋಡುತಲಿದ್ದ ದ್ರುಸ್ಯಗಳು ವಂದಾ ಯರಡಾ... ತಾಯಿಯ ತಂಟೆಗೆ ಹೋಗಿ ಕೇರು ಬಡಿಸಿಕೊಂಡಿರೋರು ಅಗೋ ಅಲ್ಲಿ, ಯಗೋ ಯಿಲ್ಲಿ.. ಪ್ರಾಕಾರವಾಗಿ ವಬ್ಬೊಬ್ಬರನ್ನು ನೋಡುತಾ ನೋಡುತಾ ಅಳಬೇಕೋ ನಗಬೇಕೋ ಎಂದು ತಿಳಿವಲ್ಲದಂಗಾತಿತ್ತು ಅಳುಅಳುತಲೇ ನಗಾಡುವಂತಾತಿತ್ತು. ನಗುನಗುತ್ತಲೇ ಅಳುವಂಗಾತಿತ್ತು ಲವುಕಿಕದಿಂದ ಅಲವುಕಿಕಕ್ಕ ಯೇರಿದಂಗಾತಿತ್ತು. ಅಲವುಕಿಕದಿಂದ ನಮ್ಮೆಗೆ ಲವುಕಿಕಕ್ಕೆ ಸರಂತ ಯಿಳಿಧಂಗಾತಿತ್ತು. ಯಂಥವರ ಕಲ್ಲೆದೆಯ ಕರಗಿ ಮುದಕವಾಗಿ ಹರಿದು ಸರೀರದ ವಳಾಗೆಲ್ಲ ವಜಿಜುಲಾದಂಗಾತಿತ್ತು. ತಲಾ ವಬೊಬರಿಗೂ ವಂದೇರಿಕೆಯಾಗಲೀ, ವಂದಿಳಿಕೆಯಾಗಲೀ ಯಿರದಿದ್ದ ಅರಮನೆಯ ಯಲ್ಲಾ ದ್ರುಶ್ಯಾವಳಿ ನೋಡುತ ಕನ್ನ ಕಟ್ಟಿ ಕುಂತಗಂಡಿರಲಿಲ್ಲ. ತನ್ನ ಆಳುಕಾಳುಗಳನ್ನು ಹಿಂದೆ ಮುಂದ ಯಿಟ್ಟುಕೊಂಡು ಖುದ್ದ ರಾಜಮಾತೆ ಭಮ್ರಮಾಂಬೆಯು ಹರೇದ ಹುಡುಗಿಯಂತೆ ವಂದು ಹಾದಿಯನ್ನದೆ, ವಂದು ಬೀದಿಯನ್ನದೆ ಅಡ್ಡಾಡುತಲಿದ್ದುದು ಸಾಮಾನ್ಯ ದುಸ್ಯವಾಗಿತ್ತು. ಅಯ್ಯೋ ಮೋಡಿಕಾರ ಮೋಬಯ್ಯನೇ, ಅಯ್ಯೋ ಮಾಯಕಾರ