ಪುಟ:ಅರಮನೆ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೦೫ ಮೊಬಯ್ಯನೇ, ಪಟ್ಟಣದಿಂದ ನಗೆ, ಸುಖ ಸಂತೋಷವನ್ನಪಹರಣ ಮಾಡಿಬುಟ್ಟು ಮಂಗಮಾಯವಾಗಿಬಿಟ್ಟಿರುವಿಯಲ್ಲಾ, ವುಂಡ ಮನೆಗೆ ಯರಡು ಬಗೆದಿರುವ ನೀನೆಲ್ಲೋ, ಬೆಳೆದ ಪಟ್ಟಣವನ್ನು ಕಣ್ಣೀರೊಳಗ ಕಯ್ಯಬುಟ್ಟು ನೀನೋದಿಯಲ್ಲೋ, ನಗಿ ಯಲ್ಲಮ್ಮೆ ತಾ.. ಸುಖ ಸಂತೋಷ ಯಲ್ಲಮ್ಮೆ ತತ್ತಾರೋ.. ನರಮನುಶೋರೆಂದ ಮ್ಯಾಲ ಕುವ್ವಾಡ ಮಾಡದಂಗಿರುತಾರಾ.. ವಂದು ಚಾಸ್ಪಿ ಮಾಡದಂಗಿರುತಾರಾ.. ಅದಕ ಯಿಷ್ಟು ಘನ ಘೋರ ಶಿಕ್ಷೆ ಕೊಡಲಕ ನಿನಗ್ಯಾರು ಅಧಿಕಾರ ಕೊಟ್ಟರಿ.. ನಿನ್ನ ನೀನು ರಾಜನಂದುಕೊಂಡ್ಯಾ... ಗುಡಿ ಒಂದಲ ಮನೇನ ಅರಮನೆ ಅಂದುಕೊಂಡ್ಯಾ... ಯಂದು ಮುಂತಾಗಿ ತನಪಾಡಿಗೆ ತಾನು ವಟವಟಗುಟ್ಟೂತ, ಕಯ್ಯಲ್ಲಿದ್ದ ರಾಜದಂಡವನ್ನು ಹೆಜ್ಜೆಹೆಜ್ಜೆಗೆ ಕುಟ್ಟೂತ. ಸಾರಾಸಗಟ ಅರಮನೇನೇ ತನ್ನಂಥ ರುದ್ದೆಯಾತೀ ರುದ್ದ ರೂಪದಲ್ಲಿ ಬೀದಿ ತುಂಬೆಲ್ಲ ನಡೆದಾಡಲಕ ಹತ್ತಯಿತೆ ಯಂಬುದನ್ನು ಸಾಬೀತು ಪಡಿಸೂತ, ಕಣ್ಣೀರು ವರೆಸುವ ನೆಪದಲ್ಲಿ ಕಯ್ಯಗಳನು ಚಾಚೂತ, ಚಾಚಿ ತನ್ನ ಮುಂಗಯ್ಯಗಿದ್ದ ಕಡಗಗಳು ನಕಲಿಯವಲ್ಲ ಯಂದು ಜಗಜ್ಜಾಹೀರು ಮಾಡುತ ನಸುಗುನ್ನಿಕಾಯಿ ವಡೆದು ಸಾವುರು ರೂಪ ಧಾರಣ ಮಾಡಿರುವಂತೆ ಹಾದಿ ಬೀದಿ ತುಂಬೆಲ್ಲ ಹರಿದಾಡಲು ತೊಡಗಿದ್ದಳು. ತಾನು ಯೇಸು ಮಾಡುತಲಿದ್ದರೂ ತನ್ನ ಹೆಸರು ನೊಂದವರ ಬಾಯೊಳಗ ಸಬುಧಧಾರಣ ಮಾಡುತಾ ಯಿಲ್ಲಲ್ಲಾ.. ಪ್ರತಿಯೊಬ್ಬರ ಬಾಯೊಳಗ ಸಾಂಬವಿ ಯಂಬ ಮೂರಕ್ಕರದ ಕಮಲ ಅರಳುತಲಿರುವುದಲ್ಲಾ... ಅಯ್ಯೋ ತನ್ನ ನತದ್ರುಸ್ಟವೇ.. ಅಯ್ಯೋ ತನ್ನ ಕರುಮವೇ.. ರಾಜಸತ್ತೆಯ ಡುಬ್ಬದ ಮ್ಯಾಲ ಬರೆ ಹಾಕಿದಂತ ಸಂತರಸ್ತ ತಾಯಂದಿರು ರಾಜಮಾತೆ ಯಂಬ ದೂರುವ ಕಾಲದ ಮುದೇಕಿ ಅಗಾ ಅಲ್ಲಿ ಬರುತಾಳಂದರ ಯಿಗಾ ಯಿಲ್ಲಿ ಎಂದು ಜಾಮು ತುಂಬ ಕಣೋಳಗಿಂದ ನೀರನ್ನು ಬಸಿದಿಟ್ಟುಕೊಂಬುಲಿದ್ದರು, ಹತ್ತಿರ ಬಂದೊಡನೆ ಆಕೆ ಯದುರು ಜಿಗಿದು “ನಡದೂ ನಡದೂ ನೀರಡಕೆ ಆಗಯೇನವ್ವಾ.. ಯಿಕಾ ಕುಡುದು ದಾಹ ಪರಾರ ಮಾಡಿಕೊಳ್ಳವ್ವಾ” ಯಂದು ಬ್ರುತಿಮಾಲ್ಯಾಡುತಲಿದ್ದರು. ಪ್ಲಾ..ಬ್ಲಾ...ತನ್ನ ಪ್ರಜೆಗಳಿಗೆ ತನ್ನ ಮ್ಯಾಲ ಯೇಟೊಂದು ಗವುರವ, ಕನುಕರ ಅಯಿತೆಂದು ಭಾವಿಸಿ ಮುದೇಕಿ ಗಟಗಟಾಂತ ಕುಡುದು.. ವುಪುಪ್ಪಯಿತೆ, ವಗರೊಗರಯಿತೆ ಯಂದು ತನ್ನ ಮುಖವನ್ನೊಂದು ನಮೂನಿ ಮಾಡಿಕೊಳ್ಳುತ ಮುಂದ ಮುಂದಕ ಹೆಜ್ಜೆ ಹಾಕುತಲಿದ್ದಿತು.. ಮತ ಮತ ಮುಂದಕ ಹೋದರೆ ತಾಯಂದಿರು ಸಕುಟುಂಬ