ಪುಟ:ಅರಮನೆ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

noes ಅರಮನೆ ನಗೆವಂಚಿತರನ್ನು ನಗಿಸಲೋಸುಗ ಅಕ್ಕಪಕ್ಕದ ಗ್ರಾಮಗಳಿಂದ ಹಗಲು ಯೇಸಗಾರರು, ದೊಂಬರರು ನಾ ಮುಂದು, ತಾ ಮುಂದು ಅಂತ ಬಂದು ಚಿತ್ರಚಿತ್ರವಾಗಿ ವರನೆ ಮಾಡುತಲಿದ್ದರು. ಅಗೋಚರ ಸ್ಥಿತೀಲಿದ್ದ ಸಾಂಬವಿಯ ರುದಯ ಕರಗಿಸಲಕೆಂದು ಅಕ್ಕಪಕ್ಕದ ಗ್ರಾಮಗಳಿಂದ ಆಗಮನ ಮಾಡುತಲಿದ್ದ ಭಜನೆ ತಂಡಗಳಂತೂ ಲೆಕ್ಕಯಿರಲಿಲ್ಲ.. ದುರುಗಾ ಮುರುಗೋರಂತೂ ತಮ ತಮ್ಮ ಹೆಗಲ ಮಾಲ ಪಕ್ಕಾ ಹೆಣ್‌ದೇವತೆಗಳನ್ನು ಹೊತ್ತುಕೊಂಡು ಬಂದು ಜಗದಂಬೆಯ ನಾಮಾವಳಿಗಳನ್ನು ಬೀದಿಗುಂಟೆಲ್ಲ ಬಿತ್ತಿ ಬೆಳೆಯಲಾರಂಭಿ ಸಿದ್ದರು. ಲೆಕ್ಕವಿರದಷ್ಟು ಮಂದಿ ಮಂತ್ರವಾದಿಗಳು ತಮ್ಮ ತವರು ನೆಲೆಯಾದ ಹಾರಕ ಬಾವಿಯಿಂದ ನಾ ಮುಂದು, ತಾ ಮುಂದು ಅಂತ ಸದರಿ ಪಟ್ಟಣದೊಳಗ ಬೀಡು ಬಿಟ್ಟು ಕಾನ್ನೋನ್ಮುಖರಾಗಿದ್ದರು.. ಅಂಥವರೆದುರು ವಂದಕ್ಕೆ ನಾಕರಷ್ಟು ದಕ್ಷಿಣೆಯಿಟ್ಟು ತಾಯಂದಿರು, ಹೆಂಡಂದಿರು ತಾಯಿತ, ಅಂತರ, ಮಂತ್ರಿಸಿದ ಲೋಬಾನ ಖರೀದಿಸದೆ ಯಿರಲಿಲ್ಲ... ಖರೀದಿಸಿ ಅವರು ಹೇಳಿದಂಗೆ ಮಾಡದೆ ಯಿರಲಿಲ್ಲ... ಯಲ್ಲಿ ನೋಡಿದರೂ ಪ್ರಾಂ ಕ್ರೀಂ ಹೂಂ ಮಂತ್ರಗಳೇ ಸಿವಸಿವಾ.. ಯಾರ ಸರೀರದ ಮ್ಯಾಲ ನೋಡಿದರೂ ತಾಯಿತ, ಅಂತರಗಳೇ ಸಿವಸಿವಾ.. ಯಾರ ಮನೇಲಿ ನೋಡಿದರೂ ಲೋಬಾನದ ಘಾಟು ಹೊಗೆ ತುಂಬಿ ಚೆಲ್ಲಾಡಲಕ ಹತ್ತಿತ್ತು ಸಿವನೇ.. ಯೇನು ಮಾಡಿದರೂ ಎಂದು ಯೇರಿಕೆ ಆಗದ ಪರಿಣಾಮವಾಗಿ, ವಂದು ಯಿಳಿಕೆಯಾಗದ ಪರಿಣಾಮವಾಗಿ ಪಟ್ಟಣದೊಳಗ ತಾಯಂದಿರು ತಮ್ಮ ತಮ್ಮ ಮೊಲೆಗಳನ್ನು ಹೀನಾಯ ರೀತಿಯಲ್ಲಿ ಗುದ್ದಿಕೊಳ್ಳತೊಡಗಿದರು ಸಿವನೇ, ತಮ್ಮ ತಮ್ಮ ತಲೆಗೂದಲುಗಳನ್ನು ಕಿತಕಿತ ಕಿತ್ತಿಕೊಳ್ಳತೊಡಗಿದರು ಸಿವನೆ.. ನಗಲೋ, ನಗಲೋ ಯಂದು ತಮ್ಮ ತಮ್ಮ ಗಂಡಂದಿರನು ಅವರವ ಹೆಂಡಂದಿರು ಪಿಡಪಿಡನೆ ಪೀಡಿಸತೊಡಗಿದರು ಸಿವನೇ.. ಯೀ ಅಟಾಟೋಪಕ್ಕೆ ಅರಮನೆಯೇ ಕಾರಣವೆಂದು ಬಗೆದು ತಮ ತಮ್ಮ ಕೂಸು ಕುನ್ನಿಗಳ ಸಮೇತ, ಕುವಾಡಕ್ಕೆ ಹೆಸರಾದ ತಮ್ಮ ತಮ್ಮ ಗಂಡಂದಿರ ಸಮೇತ ಅರಮನೆಯ ಬಾಗಿಲು, ಕಿಟಕಿ, ಜಾಲಂದರಗಳ ಹಿಡಿದು ಜಗ್ಗಾಡತೊಡಗಿದರು ಸಿವನೇ... ಗೋಡೆಗಳನ್ನು ಗುದಗುದನೆ ಗುದ್ದಿ ಹಣ್ಣುಗಾಯಿ, ನೀರುಗಾಯಿ ಮಾಡತೊಡಗಿದರು ಸಿವನೇ.. ಪಟ್ಟಣದ ತರಾವರಿ ಹಾಹಾಕಾರಗಳ ಚಂಡಮಾರುತಕ್ಕೆ ಸಿಲುಕಿ ತತ್ತರಿಸತೊಡಗಿದ್ದ ಅರಮನೆಯೊಳಗೆ ರಾಜಪರಿವಾರದ ಮಂದಿ ತಮ್ಮ ತಮ್ಮ ಜೀವಗಳನು ಕಯ್ಯ ಮುಟುಗಿಯೊಳಗೆ ಹಿಡಕೊಂಡು ಜೀವಭಯದಿಂದ ಗಡಗಡಾಂತ ನಡುಗಲಕ ಹತ್ತಿದ್ದರು ಸಿವ ಸಂಕರ