ಪುಟ:ಅರಮನೆ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೦೯ ಮಾದೇವಾ.. ಅರಮನೇನ ದಾಟಿದರೆಂಗೊ? ವುಳಾಗೆ ವುಳಕೊಂಡರೆಂಗೊ? ಅಂಬ ಕಾರಣಕ್ಕೆ ಹೊರ ಪರಪಂಚದ ಸರುವ ಸಂಪರಕ ಕಡಿದುಕೊಂಡಿದ್ದ ಅರಮನೆ ವಳಾಗ ರಾಜಪರಿವಾರದ ಮಂದಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡೋದು, ಅವರನ್ನಿವರು ನಿಂದಿಸೋದು, ಯವರನ್ನವರು ನಿಂದಿಸೋದು ನಿಲುಕಡೀರಿಲ್ಲದೆ ಮುಂದುವರೆದಿತ್ತು ಸಿವನೇ.. ಅಸಂಖ್ಯಾತ ಸಂಖೆಯಲ್ಲಿ ಅರಮನೆಯೊಳಗೆ ಯಿವೆ ಯನ್ನಲಾದ ಸುರಂಗ ಮಾರಗಗಳ ಹುಡುಕಾಟ ನಿರುವಿರಾಮವಾಗಿ ನಡೆದೇಯಿತ್ತು ಮುರಹರನೇ, ಸಮಸ್ತ ಪಟ್ಟಣದ ದುಕ್ಕ ವಂದು ತೂಕವಾಗಿದ್ದರೆ ಅರಮನೆಯೊಳಗಿದ್ದ ದುಕ್ಕವೇ ಯಿನ್ನೊಂದು ತೂಕವಾಗಿತ್ತು.. ಸಾಂತುವನ ಮಾತುಗಳ ಘೋರ ಬರ ಅನುಭವಿಕೆ ಮಾಡುತಲಿದ್ದ, ಸಮಾಧಾನಕರ ವಂದೇ ವಂದು ಮಾತಿಗಾಗಿ ಪರದಾಡುತಲಿದ್ದ, ಘೋರ ಪರಾಭವದ ಛಣಗಳನ್ನು ಯಣಿಕೆ ಮಾಡುತಲಿದ್ದ ನಿಂದಾಪನಿಂದನೆಯ ಮಾತುಗಳ ಬರಸಿಡಿಲ ಪ್ರಹಾರಕ್ಕೆ ತತ್ತರಿಸುತಲಿದ್ದ, ನಿಟ್ಟುಸಿರ ಝಂಝಾನಿಲಕ್ಕೆ ಸಿಲುಕಿ ತರಗೆಲೆಯ ರೂಪ ಪಡೆಯುತಲಿದ್ದ ಅರಮನೇನ ಅಂದಾಡಿದರ ಯೇನು ಪ್ರಯೋಜನ...? ಅದೊಂದು ಅರಮನೇನಾ? ಅದರೊಳಗ ವಸ್ತಿಯಿರೋದು ರಾಜ ಪರಿವಾರವೇನಾ? ಕಾಲದ ಹೊಡೆತಕ್ಕೆ ಸಿಲುಕಿ ಸಾಂಬವಿಯ ಸಾಪಕ್ಕೆ ಸಿಲುಕಿ ಅದು ಯೀಗ ಹೆಂಗಯಿತೆಂದರ ವಂದು ನಾಕುಮಂದಿ ಸೇರಿಕೊಂಡು ವುವೊಂದು ಮೂಡಿದಲ್ಲಿ ಕಡಕೊಂಡು ಬೀಳೋಮಗಯಿತ.. ಅದರೊಳಗಿನ ಮಂದಿ ಭೂತಕಾಲದ ನೆನಪುಗಳನುಂಡೂ ವುಂಡು ನರಪೇತಲಾಗವರೆ.. ಜೇಡೊಳಗೆ ತಲೆ ಮರೆಯಿಸಿಕೊಂಡಿರುವ ಸಿಮ್ಮಾಸನಕ್ಕೆ ಡೊಣ್ಣೆಕಾಟದ ಮಯ್ಯ ಭಾರವನ್ನು ತಡಕೊಳ್ಳೋ ತಾಕತ್ತಿಲ್ಲ.. ಬೊಟ್ಟು ದವಡಿಗೆ ಕೊಡತೀವಂದರೂ ಅರಮನೆಯೊಳಗಿನ ಸಸ್ತರಾಸ್ತರಗಳನ್ನು ತಗೊಳ್ಳುವವರು ಯಾರೂ ಯಿಲ್ಲ.. ಅದಕ ಯಿದಕ್ಯಾಕ ಅಂಬುವಿರಿ.. ಯದಕ ಅದಕ್ಯಾಕ ಅಂಬುವಿರಿ.. ಯಂದು ಮುಂತಾಗಿ ಬುದ್ದಿವಾದ ಹೇಳೂತ ಹಿರೀಕರು ಸಂತರಸ್ತರನ್ನು ಅಲ್ಲಿಂದ ಕರಕೊಂಡೊಯ್ದು ಅವರನ್ನು ಮೂಲನೆಲೆಗೆ ಸೇರಿಸುವ ಪ್ರಯತ್ನ ಮಾಡಿರದೇ ಯಿದ್ದಲ್ಲಿ..... - ಹಿರೀಕರss ನೀವು ಯೇನೇ ಹೇಳಿರಿ ತಂದೆಗೋಳಾ.. ಸುಮ್ಮಕ ಯಿದ್ದ ಮೋಬಯ್ಯನ ತಡವಿ ಯಿಡೀ ಪಟ್ಟಣದ ಬೆನ್ನಿಗೆ ಕೇರು ಬಡಿದಿರೋದು ಯಿದೇ ಅರಮನೆಯಾ.. ತನ್ನ ಪಾಡಿಗೆ ತಾನು ಆಡಿಕೋತಯಿದ್ದ ಪಟ್ಟಣದ ಕುಂಡಿ ಚಿವುಟಿ ಅಳೋಹಂಗ ಮಾಡಿ ಯೀಗ ಟೊಳ್ಳಾಳಾಯಿ ಹಾಡ್ತಿರೋದು ಯಿದೇ