ಪುಟ:ಅರಮನೆ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಅರಮನೆ ರೂಪದಲ್ಲಿಯೇ ಗುರುಮನೆ, ಗುರುಮನೆ ರೂಪದಲ್ಲಯೇ ತಾಯಿ ತವರುಮನೆ.. ಯಿದರ ಕಡೇಕ ನಿಮನಿಮ್ಮ ವಳಗಣ್ಣು ತೆರೆದು ನೋಡಿರೆಲೋ, ಪ್ಲಾ... ಹಾ...ನೀವು ಪಟ್ಟಿಡೋದಾದರ ಯೀ ನನ್ನ ಮುದಿ ಸರೀರಕ್ಕೆ ಪೆಟ್ಟಿಡಿರೆಲೋ..” ಯಂದು ಗಡಗಡನೆ ನುಡಿದೇಟಿಗೆ ಕವಿದ ಮವುನದ ಪ್ರಾಂಗಣದಲ್ಲಿ ನೂರಾರು ಸಿಲಾ ಯಿಗ್ರಹಗಳು ಮೂಡಿದವು.. ನಾಕೆಕರೆ ಯಿದ್ದ ಯಿದ್ದ ಅರಮನೆ ಯಂಬ ಕಟ್ಟಡದ ಅಣು ಅಣುವಿನೊಳಗೆ ಅಡಗಿದ್ದ ಕುದುರೆಡವು ನಿರಾತ ಭಯವನಾಯಕನ ಆತುಮವು ಗುಂಗಾಡಿ ರೂಪಧರಿಸಿ ಹಾರುತ ಹಾರುತ ಮುದೇತನ ಮುಖದೆದುರು ಸುಳಿದಾಡಿ ಗುಮ್ ಯಂಬ ನಾದದ ದ್ವಾರಾ ಕ್ರುತಗ್ರತೆಯನ್ನು ಪ್ರಚುರಪಡಿಸಿ ಮಾಯವಾಯಿತು. ಯಿಲ್ಲದಿದ್ದರೆ ಯೇನು ಗತಿ ಸಂಭವಿಸುತ್ತಿತ್ತೋ ಸಿವನೇ.. ಅಪರೂಪಕ್ಕೆ ಹಿಂಗ ಬಂದ ಸಿಟ್ಟು ವಂದು ಛಣ ಕುದುರಡವ ಸಂಪನ್ನ ಮಂದಿಯನ್ನು ಅಝಾವಣ, ಮದ್ರಾವಣರನ್ನಾಗಿ ಮಾಡಿದ್ದೂ ತಡಾ ಆಗಲಿಲ್ಲ... ಸಂತ ಯಿಳಿದು ಹಂಗ ಹೋದದ್ದೂ ತಡಾ ಆಗಲಿಲ್ಲ.. ಸಿಟ್ಟು ಬಂದಾಗ ಮದ ನಮೂನಿ ಆಗಿದ್ದ ಮಂದಿ ಅದು ಅಳಿದ ಮ್ಯಾಲ ಯಿನ್ನೊಂದು ನಮೂನೆ ಆತು... ಸಂಚುಗಾರ ಜಡೆತಾತನನ್ನು ಸಿಟ್ಟು ಸಾಪಳಿಸುತ್ತಿರುವ ಕಾಲಕ್ಕೆ ಅನಾಥಾತಿ ಅನಾಥ ಸ್ಥಿತಿಗೆ ತಲುಪಿದ ಮಂದಿ ತನ್ನ ಬೆನ್ನು ಮಾಡಿದ್ದು ಖುದ್ದ ಕಂಡು ಅರಮನೆಯು ಅಯ್ಯೋ ತನ್ನ ಅರಮನೆತನವೇ ಯಂದು ಮಮ್ಮಲನೆ ಮರುಗಲಕ ಹತ್ತಿ ಜಲಜಲ ಬೆವತು ನೀರೊಡೆದು ಸಿಸಿರದೊಳಗ ವಯಿಶಾಖದ ಮುಖವಾಡ ತೊಟ್ಟಿದ್ದ ಸೂಯ್ಯಾಮನ ಬೆಳಕಲ್ಲಿ ಥಳ ಥಳ ಹೊಳೆಯತೊಡಗಿತು.. ಮಿರಮಿರನೆ ಮಿಂಚ ತೊಡಗಿತು ಸಿವಸಂಕರ ಮಾದೇವಾ, ಹೋಗಬ್ಯಾಡಿರೋ ಹೋಗಬ್ಯಾಡಿರಿ.. ಬಂದು ನನ್ನ ಮ್ಯಾಲ ನಿಮ ಪವುರುಷ ತೋರಿಸಿಕೊಳ್ಳಿರಪ್ಪಾ.. ನನಗೂ ಯೀ ಭೂಮಿ ಮ್ಯಾಲ ಜೀವಚ್ಛವವಾಗಿ ಬದುಕಿ ಬದುಕೀ ಸಾಕಾಗಯ್ತಿ ಮಕ್ಕಳ.. ನನ್ನ ಕುತ್ತಿಗೆ ಹಿಚುಕಿ ಸತ್ತುಗೊಂದು ಪುಣ್ಯ ಕಟ್ಟಿಕೊಳ್ಳಿರಿ ಯಂದು ತಾನು ಅರಮನೆಯೆಂಬ ಗ್ಯಾನ ಯಿಲ್ಲದ ಬಡ ಝಪಡಿ ಥರ ಕೂಗಿಕೊಂತಿರುವಾಗ್ಗೆ... ಧೂ ತಮ ಜನುಮಕ್ಕೀಟು ಬೆಂಕಿ ಹಾಕ.. ಸಿಟ್ಟಿನ ಕಯ್ಯಾಗ ಬುದ್ದಿ ಅಮರಿಸಿ ಬಂಗಾರದಂಥ ಅರಮನೆ ಮ್ಯಾಲ ಸೇಡು ತೀರಿಸಿಕೊಂತಿದ್ದೆವಲ್ಲಾ.. ಅರಮನೇನ ಕೊಂದ ಪಾಪಕ್ಕೆ ಗುರಿ ಆಗುತಲಿದ್ದೆವಲ್ಲಾ... ಪುಣ್ಯಾತುಮ ಜಡೆತಾತ ದೇವರು ಬಂದಂಗ ಬಂದು ನಾಕು ಬುದ್ದಿವಾದ ಹೇಳಿ ತಡದss ಸರಿಹೋತು..