ಪುಟ:ಅರಮನೆ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೧೫, ಯಲರು ಬೆಕ್ಕಸ ಬೆರಗಾಗಿರುವುದನ್ನು ಗಮನಿಸಿದ ತಾನು ಬರೆವ್ವಾ.. ಬರಿ.. ನನಗೂಡೆ. ಮಂದಿ ಸುಖ ದುಕ್ಕ ಯಿಚಾರಿಸೋಣ” ಯಂದಾಮಂತ್ರಿಸಿದ್ದು ತಡ ಆಗಲಿಲ್ಲ.. ಮತ್ತ ತಾನೇ ಯಿದ್ದು ನೀನೆಂಗ ಬಂದಿ? ಯಾಕ ಬಂದಿ? ಅಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಾಗ ಯಿರಬೌದೆವ್ವಾ. ಯೀ ಅರಮನೆಯವ್ವನೇ ಕನಸಿನಾಗ ಬಂದು ಕರದ್ದು.. ಬಂದೆ ಕನರವ್ಯಾ. ರಾಗ ಯೇನಾಗತ್ತೋ? ಯೇನು ಬುಟ್ಟೋ.. ನಾನು ಬರತೀನರವ್ವಾ.. ನೀವು ಮೊದಲೇ ರಾಜವಮುಸಸ್ಥರು.. ನಮ್ಮಂಗ ಮಾಮೂಲು ಮನಶ್ಲೋರು ಅಲ್ಲ.. ನಿಧಾನಕೀಲೆ ಬನ್ನಿ” ಯಂದು ಮಾತಾಡೋದು ಮಾತಾಡಿ ಸರಸರಾಂತ ತಲಬಾಕಲು ದಾಟಿ, (ಅರಮನೆಯವ್ವಾ.. ನೀನು ರಾಜಪರಿವಾರದ ಮಂದೀನ ಕಾಪಾಡು.. ಪಾಪ ಹೆದಲ್ಗೊಂಡು ಕೂಕಂಡಾವೆ” ಯಂದು ಕಯ್ಕ ಮುಗುದು ಸರಸರಾಂತ ಕಟ್ಟೆಯಿಳಿದು ಯೀಚೆ ಬಂದಂಥವಳಾದ ಜಗಲೂರೆವ್ವ.. ಹೋದ ವಾರಾನೇ ಬೆಳಗುಪ್ಪದಿಂದ ಹೊರಟ ಥಾಮಸು ಮನೋ ಸಾಹೇಬನು ವಯಾ ಸೋಮಾಪ, ಜಾಬಾಲ, ಮುಷ«ರ ಯಂಬಿವೇ ಮೊದಲಾದ ತ್ರಯೋದಸ ದೂರುಗಳನ್ನು ದಾಟತ್ತಾ.. ದಾಟುತ್ತಾ ಪತ್ತಿಕೊಂಡ ತಲುಪಿದ್ದನು. ದಾರೀಲಿ ಅವಯ್ಯನನ್ನು ತರುಬುತ್ತಿದ್ದ ವರೆಷ್ಟೋ? ನೀವಳಿಸಿ ಆರತಿ ಯತ್ತುತ್ತಿದ್ದವರೆಷ್ಟೋ? ಕಷ್ಟ ಸುಖ ಹೇಳಿಕೊಳ್ಳುತ್ತಿದ್ದವರೆಷ್ಟೋ ? ಹಾಡಿ ಕೊಂಡಾಡುತ್ತಿದ್ದವರೆಷ್ಟೋ? ಹೆದರಿ ಮೋಟಕಿತ್ತುತ್ತಿದ್ದವರೆಷ್ಟೋ?.. ಹಿಂಗಾಗಿ ಅವಯ್ಯನು ಯೇಳೆಂಟು ಹರದಾರಿ ದೂರ ಯಿದ್ದ ಫಲಾನ ಮೂರು ತಲುಪಲಕ ವಾರ ದಿನಮಾನ ಹಿಡಿಯಿತು. ಅವಯ್ಯನ ಪಾಸಲೆಯೊಳಗೆ ಅಂಡಲೆಯುತಲಿದ್ದ ಕಥೆಗಳು ವಂದೇ ಯರಡೇ ಸಿವನೇ.. ಸ್ತ್ರೀ ಯಿಷ್ಣುಪರಮಾತುಮನು ಮೋಹಿನಿ ಅವತಾರ ಯತ್ನಿ ಸುಟ್ಟು ಭಸುಮ ಮಾಡಿದ್ದಂಥ ಭಸುಮಾಸುರನೇ ಥಾಮಸು ಮನೋ ಯಂಬಭಿದಾನ ಧರಿಸಿರುವನೆಂಬ ಕಥೆಯೂ, ಪರಮೇಶ್ವರನು ರುಷಭಾರೂಢನಾಗಿ ಸೊರಗದ ಗಡಿದಾಟಿ ಯಿಂಗಲೆಂಡು ದೇಸದೊಳಗ ವಾಯುಸಂಚಾರ ಕಮ್ಮಿಕೊಂಡಿದ್ದ ಸಂದರದಲ್ಲಿ ಅಲ್ಲೊಂದು ನದಿಯಲ್ಲಿ ಜಲಕ್ರೀಡೆ ಆಡುತ್ತಿದ್ದ ಪರಂಗಿ ಸುಂದರಿಯೋಲ್ವಳನ್ನು ಮೋಹಿಸಿ ಗಾಂಧತ್ವ ಯಿವಾಹವಾದನೆಂದೂ, ಇವರಿಬ್ಬರ ದಾಂಪತ್ಯದ ಫಲವಾಗಿ ಹುಟ್ಟಿದ ಕೂಸೇ ಮುಂದೆ ಥಾಮಸು ಮನೋ ಯಂಬಭಿದಾನ ಧರಿಸಿ ಸದರಿ ದೇಸಕ್ಕೆ ಆಗಮನ ಮಾಡಿರುವುದೆಂಬ ಕಥೆಯೂ, ಸತ್ಯಯುಗದಲ್ಲಿ ರಾಕ್ಷಸರ ಕುಲಗುರು