ಪುಟ:ಅರಮನೆ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಅರಮನೆ ಸುಕ್ಕರಾಚಾರನು ನದಿಯೊಂದರೊಳಗ ಜಳಕ ಮಾಡುತ್ತಾ ಮಾಡುತಾ ಮುಷಿ«ಮಯ್ತುನ ಮಾಡಿಕೊಂಡ ಕಾಲಕ್ಕೆ ಜಲದೊಳಗ ವಜ್ರದೋಪಾದಿಯಲ್ಲಿ ಹೊಳೆಯುತಲಿದ್ದ ಮೀರವನ್ನು ಮತ್ಸಕನ್ನೆಯೋಲ್ವಳು ಕುಡಿದು ಬಸುರಾಗಿ ಮುಂದೊಂದಿವಸ ಹಡೆದ ಗಂಡು ಕೂಸೇ ಥಾಮಸು ಮನೋ ಯಂಬಭಿದಾನ ಧರಿಸಿ ಸದರಿ ದೇಸಕ್ಕೆ ಆಗಮನ ಮಾಡಿರುವುದೆಂಬ ಕಥೆಯೂ, ಯೇಳು ಸಮುದ್ರದಾಚೆಯ ಕೀಳು ಸಮುದ್ರದ ನಟ್ಟ ನಡುವೆ ಯಿರುವ ನಡುಗಡ್ಡೆಯ ಗವಿಯೊಳಗ ವಾಸ ಮಾಡುತಲಿದ್ದ ಬೊಮ್ಮ ರಾಕ್ಷಸ ಯಾವುದಪ್ಪಾ ಅಂದರೆ, ಅಟ್ಟಂಬಟ್ಟಾರಣ್ಯ ದೊಳಗ ಯಿರುವ ಅಡುಗೂಲಜ್ಜಿಯ ಗಂಟಲೊಳಗಿಂದ ಪಲಾಯನ ಮಾಡಿದ್ದ ರಾಕ್ಷಸ ಅದಾಗಿತ್ತು. ಅದು ಕಿಂಪುರುಷನ ರೂಪ ಧರಿಸಿ ಪಾತಾಳಲೋಕದ ರಾಜನ ಮಗಳಾದ ಮಾಯಾವತಿಯನ್ನು ಅಪಹರಣ ಮಾಡಿ ಗವಿಯೊಳಗಿಟ್ಟುಕೊಂಡು ವರುಷಗಟ್ಟಲೆ ಸಂಸಾರ ನಡೆಸಿತು. ಅವರೀಶ್ವರ ಸಂಸಾರದ ಫಲವೇ ಥಾಮಸು ಮನೋ ಯಂಬಭಿದಾನ ಧರಿಸಿ, ಸದರಿ ದೇಸಕ್ಕೆ ಆಗಮನ ಮಾಡಿರುವುದೆಂಬ ಕಥೆಯು... ಯಿಂಥ ಕಥೆಗಳು ಕಾಸಿಗೊಂದು ಕಣಪ್ಪಾ.. ಕೊಸರಿಗೊಂದು ಕಣಪ್ಪಾ.. ಲೆಕ್ಕ ಹಾಕಿದರೆ ಸಾಯಿರದೆಂಟಾತವೆ. ಯಿಂಥ ವದಂತಿ ದಂತ ಕಥೆ ಕಥಾಕಥಿತಗಳೊಳಗೆ ಮುಳುಮುಳುಗೇಳುತಲಿದ್ದ, ಖಾಸಗೀ ಕ್ಷಣಗಳೊಂದೂ ಯಿರದಿದ್ದ ತನ್ನ ಸರೀರದೊಳಗೆ ರಕುತಕ್ಕೆ ಬದಲಾಗಿ ಪಾದರಸ ತುಂಬಿಕೊಂಡಿದ್ದ, ಕೂಗುವ ಕೊರಡುಗಳ ತುಂಬ ಚಿಗುರು ಮುಡಿಸುತಲಿದ್ದ, ಅಯ್ಯಾ ಯಂದವರಿಗೆ ಕರಗುತಲಿದ್ದ, ಯಲಮೋ ಯಂದವರ ಯದೆಯೊಳಗೆ ದುಸೊಪುನವಾಗಿ ಮೂಡುತಲಿದ್ದ ಥಾಮಸು ಮನೋ ಸಾಹೇಬನು ಯದಕ ಪತ್ತಿಕೊಂಡಕ್ಕೆ ಬಂದು ತನ್ನ ಸರೀರವನ್ನು ಯಿಳುವಿದ್ದ ಯಂದರೆ.. ಸುತ್ತಮುತ್ತ ನಿಡುಗಲ್ಲು ಗುಡ್ಡಗಳ ನಡುವೆ ಬಿರುಬೇಸಗೆಯನ್ನು ಮುಚ್ಚುವಾಸ, ನಿಚ್ಚುವಾಸ ತಗಂತಲಿದ್ದ ಸದರಿ ಪಟ್ಟಣದ ವಾಸಸ್ಥರು ತಮ್ಮ ತಮ್ಮ ಸರೀರಗಳಿಂದ ಬೆವರು ಬಸಕೊಂಡು ಕುಡಿತಾ ತಮ್ಮ ಸತ ಸತಮಾನದ ಬಾಯಾರಿಕೆಯನ್ನು ತೀರಿಸಿಕೋತಿದ್ದರು. ಹೋದ ಸಲ ತಾನು ಬಂದಿದ್ದಾಗ ಮಂದಿ ಮಮ್ಮೊಳಗ ವಂಚೂರು ರಸಯಿಲ್ಲದುದನು ಮುಟಮುಟ್ಟಿ ನೋಡಿದ್ದನು. ಆಸಲು ಪಾಸಲೆಯಲ್ಲಿ ವಂದಾದರು ನೀರಿನ ವರತೆಯಿಲ್ಲದುದನ್ನು ಹುಡುಕಾಡಿ ಮನಗಂಡಿದ್ದನು, ದಾಹ ಯಂಬ ರಕ್ಕಸಿಗೆ ದಿನಕ್ಕೊಬ್ಬರಾದರೂ ಬಲಿಯಾಗುತ್ತಿದ್ದುದನ್ನು ಕೇಳಿ ತಿಳಕೊಂಡಿದ್ದನು. ತಾನು ಯೇನು ಬೇಕರಪ್ಪಾ