ಪುಟ:ಅರಮನೆ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೧೭ ಯಂದು ಕೇಳಿದೊಡನೆ ಮಂದಿಯು 'ದೊರೆಯೇ ನಮಗ ಆಸ್ತಿ ಬ್ಯಾಡ, ಅಡವು ಬ್ಯಾಡ.. ನಮಗ ವಂದು ಬೊಗಸೆ ನೀರು ಕೊಡು” ಯಂದು ಅರಿಕೆ ಮಾಡಿಕೊಂಡೊಡನೆ ತಾನೇ ಎಂದು ಕೊಳಗ ವುದಕವಾಗಿ ದ್ರವಿಸಿದ್ದನು. ಆ ಕೂಡಲೆ ತನ್ನ ಯಡ ಬಲಕಿದ್ದ ಅಧಿಕಾರಿಗಳ ಜೊತೆಗೂಡಿ ಪಾತಾಳ ಗಂಗವ್ವನ ಗುಡಿ ಯಂಬ ಸಿಲಾ ಮಂಟಪದ ಸನೀಕ ಹೋಗಿದ್ದನು. ಹಿಂದಿನ ಕಾಲದ ಫಲಾನ ಸಂವತ್ಸರ, ಫಲಾನ ಮಾಸದಲ್ಲಿ ಸದರಿ ಪಟ್ಟಣವನ್ನಾಳಿದ ನಿಡುಸಲಾ ವೆಂಗಪ್ಪನಾಯುಡು ಕಟ್ಟಿಸಿದ್ದುದು ಅದಾಗಿತ್ತು. ತಾನು ತನ್ನ ಕಣ್ಣುಗಳನ್ನು ಅಂಬರ ಮುಚ್ಚಿ ಪಾತಾಳ ಅಂದರಾವುದು? ಗಂಗೆ ಅಂದರಾವುದು? ಪಾತಾಳದೊಳಗ ಗಂಗೆಯೋ, ಗಂಗೆಯೊಳಗೆ ಪಾತಾಳಮೋ ಯಂದು ತ‌ನ ಭರನ ಮಾಡಿ ಆ ಸಿಲಾ ಮಂಟಪದ ಯದುರಿಗೆ ಮುವ್ವತ್ತು ಗಜ ವುದ್ದಗಲದ ಬಾವಿ ತೋಡಿಸುವ ಯೇರುಪಾಡು ಮಾಡಿ ಹೋಗಿದ್ದನು. ನೂರಾರು ಮಂದಿ ಅಹಲ್ಕಿ ತೋಡಿದಾ ಬಾವಿಯೊಳಗ “ಗಂಗವಾಯಿ ನದಿಯೊಂದನ್ನು ವುಡಿ ತುಂಬಿಕೊಂಡು ವಡಮೂಡಿಬಿಟ್ಟಿದ್ದಳು. ಆ ಜೀವದಾಯಿನಿ ಯನ್ನು ಮಂದಿ ಸಣುಮಾಡಿ ಸ್ವಾಗತಿಸಿದರು. ಕೀರಿಸೇನ ವೆಂಗಪ್ಪನಾಯುಡು ವಮುಸಸ್ಥ ಮಂದಿ ಜರನ್ನುದ್ದೇಸಸಿ ಗಂಗಮ್ಮಾಯಿಯ ನಿಜಕಂದಯ್ಯನಾದ ಕಲೆಟ್ಟರು ಸಾಹೇಬ ಬಂದು ಪೂಜೆ ಮಾಡಲಪ್ಪ, ಆತನ ಮುಖ ನೋಡಲೆಂದು, ಅವಯ್ಯನ ಪ್ರತಿಬಿಂಬ ತನ್ನೊಳಗ ಮೂಡಬೇಕೆಂದು ಬಯಸಿ ದರುಸನ ನೀಡಿರುವ ತಾಯೀನ ನಾವ್ಯಾರು ನಮ್ಮಿಂದೊಮ್ಮಿಗೆ ಮುಟ್ಟಿ ಮಯ್ಲಿಗೆ ಮಾಡೋದು ಥರವಲ್ಲ ಯಂದು ಹೇಳಿದ್ದಕ್ಕೆ ಪ್ರತಿ ಜವಾಬು ಯಿರಲಿಲ್ಲ.. - ಆಸುಪರಿ ಹಾದಿಯಲ್ಲಿ ಸುರುವಾದ ಮೆರವಣಿಗೆಯೊಳಗ ನಡಕೋತ ಬಂದು ಥಾಮಸು ಮನೋ ಸಾಹೇಬ ಬಾವಿಗಿಳಿದು ಉದ್ಯುಕ್ತವಾಗಿ ಪೂಜೆ ಸಲ್ಲಿಸಿದನು.. ಅದರೊಳಗ ತನ್ನನ್ನು ತಾನು ನೋಡಿಕೊಳ್ಳುತ ವಂದು ಬೊಗಸೆ ನೀರೆತ್ತಿಕೊಂಡು ತನ ಮಯ್ಯಗೆ ಸುರುವಿಕೊಂಡನು. ಯಿನ್ನೊಂದು ಬೊಗಸೆ ತಗೊಂಡು ತಾಯಿಯೋಲ್ವಳ ಕಂಕುಳಲ್ಲಿದ್ದ ಕಜ್ಜಿ ಪುಳ್ಳೆ ಕಂದಯ್ಯಗೆ ಕುಡಿಸಿದನು. ಮತ್ತೊಂದು ತಗೊಂಡು ತುಂಬು ಬಸುರಿಯೋಲ್ವಳ ಬೊಗುಸಿಗೆ ನಾವಣೆ ಮಾಡಿದನು.. ತದನಂತರ ಉನ್ನೊಬ್ಬರಿಗೆ.. ಮತ್ತೊಬ್ಬರಿಗೆ.. ಥಾಮಸು ಮನೋನೆದುರು ದುತ್ತೆಂದು ಮೂಡಿದ ಮುದುಕಿ ಯಾರಪಾಂದರ ಪೂರುವಿಕರ ಪಯ್ಕೆ ಪೂರುವಿಕಳಾದ ಮಂಜಲೆಲೆ