ಪುಟ:ಅರಮನೆ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೮ ಅರಮನೆ ಯಲ್ಲಮ್ಮಾಯಿ, ಅದು ಅವಯ್ಯನ ಕೆಂದುಮುಖವನ್ನು ತನ್ನ ಹಂಚಿಕಡ್ಡಿ ಬೊಗಸೆಗಳೊಳಗೆ ಹಿಡಕಂತು, ಯಂಜಲೆಲೆ ಅಂದರ ನೀನೇ ಕಣಪ್ಪಾ.. ಯೇಟುಂಡರೂ ಸವೆಯಾಕಿಲ್ಲ ನೀನು.. ನಿನ ಸರೀರದ ಕೊನೆ ಅಗುಳನ್ನು ವುಂಡು ಯೀ ಬಾವಿಯೊಳಗ ಯಂಜಲಗಯ್ಯ ತೊಳಕಂತೀನಿ.. ನಿನಗೋಸುಗರ ನಾನಿಲ್ಲೇ ಕಾಯುತ ಕೂಕಂಡಿರುತೀನಿ.. ಯಂದೇನೇನೋ ನುಡಿದೇಟಿಗೆ ಮಂದಿ ತತ್ತರಿಸಿತು. ಯವ್ವಾ.. ನಿನ ಬಾಯಿಂದ ಯಂಥ ಮಾತು ಬರೋದೇನು.. ಯೇನು ತಪ್ಪು ಮಾಡ್ಯಾನೆ ನಮ್ಮ ಕಲೆಟ್ಟರು ಸಾಹೇಬ.. ಬ್ಯಾಡವ್ವಾ ಬ್ಯಾಡss ತಾಯೀ.. ಆಡಿದ ಮಾತನ್ನು ವಾಪಾಸು ತಕ್ಕಾss ಯಂದು ಕಲ್ಕ ಮುಗುದು ಬೇಡಿಕಂತು.. ಅದಕಿದ್ದು ಮುದೇದು ತರಾವರಿ ನಗಾಡಿತು.. ಬೊಗಸೇನ ವಾಪಾಸು ತಕ್ಕಂಡು ಲಟಲಟಾಂತ ಲಟ್ಟಿಗೆ ಮುರಿಯಿತು. ಮುಂದೊಂದಿವಸ ನೀನಿಲ್ಲಿಗೆ ಬಂದೇ ಬರುತಿ, ನನ್ನೆಂಜಲು ಯಲೆಯೇ ಯಂದನಕೋತ ಅನಕೋತ ತಿಪ್ಪೆಗಳ ಕಡೇಕ ಹೋತು ಸಿವಸಂಕರ ಮಾದೇವಾss ಯಂಜಲೆಲೆ ಯಲ್ಲಮ್ಮಾಯಿಯ ಬಾಯಿಯಿಂದ ಹೊಂಟ ಮಾತುಗಳು ಹಾದಿ ನಡುವೆ ನಿಲ್ಲಲಿ.. ಅವು ಮುಂದಕ್ಕೆ ಪಯಣ ಬೆಳೆಸಿ ಸಾಹೇಬನನ್ನು ಮುಟ್ಟದಂಗ ಮಾಡು ಸಿವನೇ, ಯಂಜಲೆಲೆ ಅಂದರ ಯೇನರ? ಕೊನೆ ಅಗುಳು ಅಂದರ ಯೇನ? ಯಿದು ಸಾಪವಾ, ವರವಾ.. ಸಾಸುವೆ ಕಾಳೊಳಗ ಸಮುದ್ರಅಡಗಿರುವಂಗಯಿತಲ್ಲಾ... ಯಲ್ಲಾ ಅಯೋಮಯ.. ವಂಥಟಗಾದ ತಮ ತಮ್ಮ ಮುಖಗಳನ್ನು ಕ್ರುತಕವಾಗಿ ಅರಳಿಸುತ್ತ ಮಂದಿ ಪ್ಲಾ... ಹೂ ಅಂತಿದ್ದರು ಸಿವನೇ.. ವುಫ್ ಅಂತಿದ್ದರು ಸಿವನೇ.. ತಮ್ಮ ತಮ್ಮ ಮಂದೇವರ ಮುಂದ ತುಪ್ಪದ ದೀಪ ಹಚ್ಚಿ ಸಾಹೇಬನಿಗೆ ಆಯುರಾರೋಗ್ಯ ಕೋರಬೇಕಂತ ಅಂದುಕೊಳ್ಳುತ್ತಿದ್ದರು ಸಿವನೇ.. ಅವರ ನಡುವೆ ಥಾವಸು ಮನೆ ಸಾಹೇಬನು ಅವಧೂತನೋಪಾದಿಯಲ್ಲಿ ಹೆಜ್ಜೆ ಹಾಕುತ್ತಿರಲು.. ಮಾಯಾ ಮುಚ್ಚಿಂದ್ರನಂತೆ ನೋಡುತ್ತಿರಲು.. ಸದರಿ ಪಟ್ಟಣದ ಬಿಕೋ ಯಂಬ ಬಯಲೊಳಗೆ ಟೆಮರಿಂಡು ಟೀಗಳನ್ನು ಬೆಳೆಸಿದರ ಹೆಂಗೆ ಯಂದು ಯೋಚಿಸುತ್ತಿರಲು.. ಜಡೆಗಟ್ಟಿದ ತಲೆಗಳ ಮ್ಯಾಲ ಕಯ್ಕ ಆಡಿಸುತ್ತಿರಲು, ಮುಗುಳುನಗೆಯನ್ನು ಸಮ್ಮೋಹನಾಸ್ತರ ದೋಪಾದಿಯಲ್ಲಿ ಬೀರುತ್ತಿರಲು.. ತೆರೆದ ಕಣ್ಣೂಳಗೆ ಸುಖೀ ರಾಜ್ಯದ ಕನಸು ಕಾಣುತ್ತಿರಲು.. ಗವರರು ಮಾಶಂಯ ವೆಲ್ಲೆಸ್ಲಿಯ ಧೀರೋದಾತ್ತ ನಿಲುವನ್ನು ಧೇನಿಸುತ್ತಿರಲು..