ಪುಟ:ಅರಮನೆ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

XV

“ವಾರದ ಹಿಂದೆಯಷ್ಟೇ... ಥಾಮಸು ಮನೋ ಸಾಹೇಬನು...”

ಸರ್ ಥಾಮಸ್ ಮನ್ರೋ (೧೭೬೧-೧೮೨೭) ಐತಿಹಾಸಿಕ ವ್ಯಕ್ತಿ ಮತ್ತು ಅವನು ಮಂಗಳೂರು ಸೇರಿದಂತೆ ಕರ್ನಾಟಕದ ಮತ್ತು ಆಂಧ್ರಪ್ರದೇಶದ ಗಡಿಭಾಗಗಳಲ್ಲಿ ಕಲೆಕ್ಟರ್‌ನಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಬ್ರಿಟಿಷ್ ಅಧಿಕಾರಿ. ಈ ಮನ್ರೋನ ಅಧಿಕಾರಾವಧಿ ಕೃತಿಗೆ ಒಂದು ಬಗೆಯ ಸ್ಥೂಲ ಚೌಕಟ್ಟನ್ನು ಒದಗಿಸುತ್ತದೆ: ಅವನು ಕಲೆಕ್ಷರ್ ಆಗಿ ನೇಮಕವಾದಾಗಿನಿಂದ ಪ್ರಾರಂಭವಾಗುವ ಈ ಕೃತಿ (ಭಾರತದಲ್ಲಿಯೇ ಆಗುವ) ಅವನ ಮರಣದೊಂದಿಗೆ ಮುಗಿಯುತ್ತದೆ. ಈ ಸ್ಥೂಲ ಚೌಕಟ್ಟಿನೊಳಗೆ ಇತರ ಚಾರಿತ್ರಿಕ ವ್ಯಕ್ತಿ-ಘಟನೆಗಳು, ಐತಿಹ್ಯಗಳು, ಸ್ಥಳಪುರಾಣಗಳು, ಸಾಮೂಹಿಕ ಆಚರಣೆಗಳು, ರೋಚಕ ಉಪ ಕಥೆಗಳು, ಅವಾಸ್ತವ ಹಾಗೂ ವಾಸ್ತವಾತೀತ ಸಂಗತಿಗಳು-ಇವೆಲ್ಲವನ್ನೂ ಬಳಸಿಕೊಂಡು, ವಸಾಹತುಶಾಹಿಯ ಪ್ರಾರಂಭಿಕ ಘಟ್ಟದ ಗ್ರಾಮೀಣ ಭಾರತದ ಬದುಕಿನ ಒಂದು ಸಮಗ್ರಚಿತ್ರವನ್ನು ಕೃತಿ ಕಟ್ಟಿಕೊಡುತ್ತದೆ. ನಿರೂಪಣಾ ಕ್ರಮ ಮಂಟೇಸ್ವಾಮಿ, ಎಲ್ಲಮ್ಮ ಕಥಾ, ಇತ್ಯಾದಿ ಕಥನಗಳನ್ನು ಪ್ರಸ್ತುತಪಡಿಸುವ ನೀಲಗಾರರು, ಗೊಂದಲಿಗರು, ಮುಂತಾದ ಧಾರ್ಮಿಕ ವೃತ್ತಿಗಾಯಕರನ್ನು ಧಾಟಿ ಮತ್ತು ಶೈಲಿಗಳಲ್ಲಿ ಅನುಸರಿಸುತ್ತದೆ.

ಈಗ ಈ ಕೃತಿ ಅನಾವರಣಗೊಳಿಸುವ ವಸಾಹತುಶಾಹಿ ಯುಗದ ಆರಂಭಿಕ ಕಾಲದಲ್ಲಿದ್ದ ಗ್ರಾಮೀಣ ಭಾರತದ ವಿವಿಧ ಮುಖಗಳನ್ನು ಸ್ವಲ್ಪ ವಿವರವಾಗಿ ನೋಡಬಹುದು.

೧. ಚಾರಿತ್ರಿಕ ಆಯಾಮ: ಇತಿಹಾಸಕಾರರು ದಾಖಲಿಸುವಂತೆ, ಸರ್ ಥಾಮಸ್ ಮನ್ರೋ ಒಬ್ಬ ಅಪರೂಪದ ಅಸಾಧಾರಣ ವ್ಯಕ್ತಿ. ಕಾರನ್‌ವಾಲಿಸ್‌ನ ಸಮಕಾಲೀನನಾಗಿದ್ದ ಮತ್ತು ಟಿಪ್ಪುವಿನ ವಿರುದ್ಧ ಕೊನೆಯ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ ಮನ್ರೋ ಭಾರತೀಯ ಸಂಸ್ಕೃತಿಯನ್ನು, ಭಾರತೀಯ ಭಾಷೆಗಳನ್ನು, ಭಾರತದ ಜನಸಾಮಾನ್ಯರನ್ನು ಪ್ರೀತಿಸಿದಷ್ಟು ಅಂದಿನ ಕಾಲದ ಮತ್ತಾವ ಬ್ರಿಟಿಷ್/ಭಾರತೀಯ ಅಧಿಕಾರಿಯೂ ಇರಲಿಲ್ಲ. ಅರಮನೆ ಈ ಅಧಿಕಾರಿಯ ವ್ಯಕ್ತಿತ್ವಸಾಧನೆ-ಸಂಘರ್ಷಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ.

ಈ ಕೃತಿಯಲ್ಲಿ ಕೇಂದ್ರಪಾತ್ರವೆಂದು ಕರೆಯಬಹುದಾದದ್ದು ಯಾವುದಾದರೂ ಇದ್ದರೆ ಅದು ಮನ್ರೋ ಪಾತ್ರ. ಮನ್ರೋ ಬ್ರಿಟಿಷ್ ವಸಾಹತುಶಾಹಿಯ 'ಪ್ಯಟರ್ನಲಿಸ್ಟಿಕ್' ಅಥವಾ 'ಪಿತೃಸಮಾನ' ಮುಖವನ್ನು ಪ್ರತಿನಿಧಿಸುತ್ತಾನೆ; ಮತ್ತು ಈ ಮುಖವನ್ನು ಕೃತಿ ಆಪ್ತವಾಗಿ, ವಿವರವಾಗಿ, ದರ್ಶಿಸುತ್ತದೆ. ಬಿಡುವಿಲ್ಲದೆ