ಪುಟ:ಅರಮನೆ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೧೯ ಅತ್ತ ಕೂಡ್ಲಿಗಿ ಪಟ್ಟಣದ ವಳ ಹೊರಗ ಸಂಭವಿಸುತಲಿದ್ದ ಸಣ್ಣದೊಡ್ಡ ಘಟನೆಗಳಿಗೆಲ್ಲಾ ಮಕುಟಪ್ರಾಯವಾದ ಘಟನೆಯೊಂದು ಸಂಭವಿಸಿತು. ಅದು ಯಾವುದೆಂದರೆ ಅದೇ, ಯಾದಾರ ದೂರ ದೇಸಕ್ಕೆ ಹೋಗಿ ಕೂಡ್ಲಿಗಿ ಅಂದರ ತಿಲ್ಲಾನ ತಾಯಕ್ಕ ಅದಾಳಲ್ಲss.. ಅದೆ ಕೂಡ್ಲಿಗಿ ಯೇನು? ಅಂತ ಕೇಳುತಾರ.. ತಿಲ್ಲಾನ ತಾಯಕ್ಕ ಅಂದರ ಕೂಡ್ಲಿಗಿಯೂ, ಕೂಡ್ಲಿಗಿ ಅಂದರ ತಿಲ್ಲಾನ ತಾಯಕ್ಕ ವಂದಕೊಂದು ಬೆಸಗೊಂಡುಬಿಟ್ಟಿವೆ ಅವರೆಡೂ.. ಹೇ ವಯಸ್ಸಿನಲ್ಲೇ ಮೀಟೊಂದು ಚಂದ ಯಿರೋ ಆಕೆ ಹರೇದವಳಾಗಿದ್ದಾಗ ಯನ್ನೇಟೊಂದು ಚಂದಿರಬ್ಯಾಡ.. ಆ ಕಾಲದಲ್ಲಿ ಗುಡೇಕೋಟೆ ಮಾ ಸಮುಸ್ಥಾನವನ್ನು ಆಳುತಲಿದ್ದ ಮೀರ ಬಲ್ಲಾಳವರುಮನ ಅರಮನೆಯೊಳಗ ಆಸ್ಥಾನ ನರಕಿ ಆಗಿದ್ದಂಥಾಕೆಯೂ, ತನ್ನ ಗಾಯನ ಸಿರಿಯಿಂದ ಸಿರಾದ ಸಿರಾಜುದ್ದವುಲನನ್ನೂ ಚಿತ್ರಕಲ್ಲು ದುರುಗದ ಚಿನ್ನ ಮದಕರಿನಾಯಕನನ್ನೂ, ಪೆನುಕೊಂಡೆಯ ಮೇರ ಪ್ರತಾಪ ಜಗದೇವರಾಯನೇ ಮೊದಲಾದೋರ ರುದಯ ಸಾಮ್ರಾಜ್ಯವನ್ನು ಸೂರೆ ಗೊಂಡಂಥಾಕಿಯೂ ಆದ ತಾನು ತನ್ನ ನಡುವಯಸ್ಸಿನಲ್ಲಿ ಬುಗುಡೀ ನೀಲಕಂಠಪ್ಪನನ್ನು ಯಿಟ್ಟುಕೊಂಡು ಯಿದ್ದು ಸದರಿ ಪಟ್ಟಣಕ್ಕೆ ಹೊಸ ಮೆರಗು ನೀಡಿದ್ದಳು.. ಗಾಯನ ಕೋಗಿಲೆಯೂ, ನತ್ಯ ಯಿಶಾರದೆಯೂ ಆದ ಆಕೆಗೋಗ್ಯ ಹೆಣ್ಣು ಕೂಸು ಯಿತ್ತಷ್ಟೆ. ಅದು ದಿನಕ್ಕೊಂದು ಚಂದದಲ್ಲಿ ಬೆಳಿತಾ ಬೆಳಿತಾ ಯಿತ್ತಷ್ಟೆ.. ಯೇಳು ಬೆಂಚಿ ದೊಡ್ಡಾದ್ಯರಿಂದ ಸಂಗೀತ ಪಾಠವನ್ನೂ, ಮಾಲೂರು ಮೂಲದ ಯಿದುಷಿ ಪುಥಳೀ ಬಾಯಿಯಿಂದ ಗ್ರುತ್ಯಶಾಸ್ತ್ರವನ್ನೂ ಅಭ್ಯಾಸ ಮಾಡುತಾಯಿತ್ತಷ್ಟೆ. ತನ್ನ ಯಂಟೊಂಭತ್ತನೇ ವಯಸ್ಸಿನಿಂದ ಚಂದ್ರಾಮನ ಬೆಳದಿಂಗಳನ್ನು ಸರಂತ ಮಯಿ ತುಂಬ ಹೀರಿಕೊಳ್ಳುತ್ತಿದ್ದಳಷ್ಟೆ ಬಗೆಬಗೆಯ ಪುಷ್ಪರಾಜಿಯಿಂದ ವಲಸೆ ಬರುತಲಿದ್ದ ಪರಿಮಳ, ಸವುಂದರಕ್ಕೆ ತಾನು ತನ್ನ ಸರೀರದ ತುಂಬೆಲ್ಲ ಆಶ್ರಯ ನೀಡುತ್ತಿದ್ದಳಷ್ಟೆ.. ನೋಡೋರ ಕಣ್ಣುಗಳೊಳಗ ಗೊಂಬಿಯಾಗಿದ್ದಳಷ್ಟೆ. ಕಾರಿರುಳಿಗೆ ತನ್ನ ಮಾರುದ್ದ ತಲೆಗೂದಲ ಅರಮನೆಯೊಳಗೆ ಆಶ್ರಯ ನೀಡಿದ್ದಳಷ್ಟೆ ಕಾಮನಬಿಲ್ಲುಗಳಿಗೆ ತನ್ನ ಕಣ್ಣುಗಳಲ್ಲಿ ಆಶ್ರಯ ನೀಡಿದ್ದಳಷ್ಟೆ ತಾನೇ ಎಂದು ನಡೆದಾಡುವ ಹೂದೋಟವೆಂಬಂತೆ ದುಂಬಿ ಪತಂಗಗಳಿಗೆ ಭ್ರಮೆಯನ್ನುಂಟು ಮಾಡುತಲಿದ್ದಳಷ್ಟೆ ತಾನು ಹೆಜ್ಜೆಯಿಟ್ಟ ಕಡಲೆಲ್ಲ ಪ್ರತಿ ಸೊಗ್ಗವನ್ನು ಸ್ರುಷಿ« ಮಾಡುತಲಿದ್ದಳಷ್ಟೆ ತನ್ನತ್ತ ದ್ರುಸ್ಸಿ ಹಾಯಿಸಿದೋರ ಹಸಿವು ಬಾಯಾರಿಕೆ ದಣವು ಪರಿಹಾರ ಮಾಡುತಲಿದ್ದಳಷ್ಟೆ ತಾನೋ ಚೂತವನ ಚಯಿತ್ರಳಾಗಿದ್ದಳಷ್ಟೆ, ಹಿಂಗು ಮುಂದುವರಿದರಲ್ಲಿ