ಪುಟ:ಅರಮನೆ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಅರಮನೆ ತಮ್ಮೊಳಗಿನ ಸವುಂದರ ಆಕೆಯತ್ತ ವಲಸೆ ಹೊಂಟು ತಾವು ಪುಟ್ಟಂ ಪೂರ ಬೋಳಾಗುವೆಮೋ ಯಂಬ ತಕರಾರು ಪ್ರಾಕ್ರುತಿಕವಾಗಿ ಕೇಳಿ ಬರುವ ಕಾಲಕ್ಕಾಗಲೇ ಚಿನ್ನಾಸಾನಿಯ ಸರೀರ ಸಂಪತ್ತು ಹನ್ನೆರಡು ಪೂರಯಿಸಿ ಯಂಟು ತಿಂಗಳಾಗಿತ್ತು. ಪ್ರತಿ ದಿನ, ಪ್ರತಿ ಕ್ಷಣ ಯಂಥದೋ ಎಂದು ನಮೂನಿ ಭಾವನಾ ಮೂಡುತಾ ಆಗುತ್ತಾ.. ಆಗುತಾ... ಮೂಡುತಾSS ಚಿನ್ನಸಾನಿಯು ವ್ರುತ್ಯಾಭ್ಯಾಸ ಮಾಡುತ ಯಿದ್ದಾಗ ದೋರೆಗಾಯಿಯಿದ್ದದ್ದು ಹಣ್ಣಾದದ್ದು ತಡ ಆಗಲಿಲ್ಲ. ಹಣ್ಣಾಗಿದ್ದದ್ದು ಬಿರಿತು ಬಾಯಿ ಬಿಟ್ಟದ್ದು ತಡ ಆಗಲಿಲ್ಲ, ಬಿರಿತ ಬಾಯಿ ದ್ವಾರಾ ರಸವು ಚಿಲ್ಲೆಂದು ಸೋರಿದ್ದು ತಡ ಆಗಲಿಲ್ಲ.. ಹಂಗೇ ಲಂಗ ದಾಣಿಯನ್ನು ಹಿಡಕೊಂಡು ತನ್ನ ಖಾಸಾ ಕೋಣೆ ಸೇರಿಕೊಂಡಳು.. ನಿಲುಗನ್ನಡಿಯೊಳಗೆ ತನ್ನ ಸರೀರವನ್ನು ತಾನು ನೋಡಿಕೊಂಡಳು. ತನ್ನ ಲಂಗದೊಳಗ ಅರುಣೋದಯ ಸಂಧ್ಯಾ ಸಮಯವು ಯಾಕ ಆಗಿರುವುದು..? ಯಾವುದಾರ ಅಗೋಚರ ಸಗುತಿಯು ಚೂರಿಯಿಂದ ಯಿರಿದು ಗಾಯ ಮಾಡಿರುವುದಾ ಅಂದರೆ ಅಂಥ ಗಾಯ ಕಾಣುತಾಯಿಲ್ಲ.. ಯೇನಾಗಿದ್ದಿರಬೌದಿದು? ಯಾಕಾಗಿದ್ದಿರಬೌದಿದು..? ತನ ತೊಡೆ ಸಂಧಿಯೊಳಗ ಮಂದ ಮಾರುತ.. ರಾಗ ಸಂಚಾರ.. ತಿಲ್ಲಾನ ತಂನನನ.. ಗಾಯನ ಕಛೇರಿ ಸ್ತುತಿ ಸರಿಪಡಿಸಿಕೊಳ್ಳುತ್ತಿರುವಂಥ.. ಜಯದೇವ ಕವಿಯು ಲಲಿತಲವಂಗ ಲತಾ ಪರಿಸೀಲನ ಮಾಡುತ್ತಿರುವಂಥ... ಇತ್ಯಗಾತಿಯರು ಗೆಜ್ಜೆ ಕಟ್ಟಿಕೊಳ್ಳುತ್ತಿರು ವಂಥ... ಕೋಗಿಲೆಗಳು ವುಯಿಲಿಡುತ್ತಿರುವಂಥ, ನವುಲುಗಳು ಕುಣಿದಾಡುತ್ತಿರುವಂಥ, ವಸಂತಮಾಸವು ಅಂಬೆಗಾಲಿಡುತ್ತಿರುವಂಥ.... ಕಾಳಿದಾಸನ ರುತು ಸಮಾರದ ಪುಟಗಳು ಪಟಪಟನೆ ತೆರೆಯುತ್ತಿರುವಂಥ. ತನ್ನ ಸಮಸ್ತ ಸರೀರವು ಝಗಝಗಿಸುವ ರಂಗಸಜ್ಜಿಕೆಯಾಗುತ್ತಿರುವಂಥ.. ಹಾ... ಹಾ... ಯಷ್ಟೊಂದು ಅಗೋಚರ ಪುರುಷ ಕಣ್ಣುಗಳು.. ಹೋ..ಹೋ.. ಯಷ್ಟೊಂದು ಅಗೋಚರ ಕಿವಿಗಳು.. ಹಾ... ಹಾ... ಯಷ್ಟೊಂದು ಅಗೋಚರ ರೋಮಭರಿತ ಹಸ್ತಗಳು.. ಅವ್ವಾ... ಯಂದು ಚೀರಿಕೊಂಡಳು ಚಿನ್ನಸಾನಿ.. ಆ ಕುಕಿಲ್ವ ಕೂಗಿನ ನೂಲೇಣಿಯೇರಿ ನಡಕೊಂಡೇ ಬಂದ ತಾಯಕ್ಕ... ಗೋಯಿಂದಗಿರಿ ಕಡೇಲಿಂದ ಬೆಳ್ಳಿ ಗುಂಡಾಚಾದ್ಯರು, ಮುದ್ದನಗಿರಿಯಿಂದ ಬಂದ ಮುದ್ದು ಕುಷ್ಣಮಾಚಾರರು ತಮ್ಮ ತಮ್ಮ ಕಂಕುಳುಗಳಿಂದ ತಿಥಿವಾರಕರಣ ಸಂಬಂಧೀ ಹೊತ್ತಿಗೆ ಗಳಯಿಳುವಿದರು.. ಸಂಕಲನ, ಯವಕಲನ, ಗುಣಾಕಾರ ಭಾಗಾಕಾರ ಮಾಡಿ ಮಾಡಿ ಚಿನ್ನಾಸಾನಮ್ಮ ನವರು ರುತುಮತಿ