ಪುಟ:ಅರಮನೆ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೨ ಅರಮನೆ ಬೀದಿಲಿ.. ಗಲ್ಲಿ ಗಲ್ಲಿಗಳಲ್ಲಿ ತೂಗುಬಿಟ್ಟಿದ್ದರು, ಕೆತ್ತಿಡಿಸಿದ್ದರು ಸಿವನೇ... ಅಂಥ ರಾಜ್ಯಗಳಿಂದ ಕೊಸರಿಕೊಂಡು ಕೂಡ್ಲಿಗಿಯಂಥ ಪಟ್ಟಣಗಳಿಗೆ ವಲಸೆ ಹೋಗಿದ್ದ ಪ್ರಜೆಗಳ ಸ್ಥಿತಿಗತಿಯಂತೂ ಅಯೋಮಯವಾಗಿತ್ತು. ಯಿಂಥ ಸಂತರಸ್ತರಿಗೆ ಗುರುತಿನ ಚೀಟಿ ಕೊಡುವುದರ ಬಗ್ಗೆ, ಮರುವಸತೀನ ಕಲ್ಪಿಸುವ ಬಗ್ಗೆ, ವಮೃತ ಆಳುವ ವರಗಳಲ್ಲಿ ಮೂಡಿರಲಿಲ್ಲ.. ಯವರು ಆಯೋಗಗಳನ್ನು ಅವರಲ್ಲಿಗೆ ಕಳಿಸುವುದು, ಅವರು ಯಿವರಲ್ಲಿಗೆ ಕಳಿಸುವುದು.. ಯಾದೇ ಎಂದು ನಿದ್ದಯಕ್ಕೆ ತಗಲದಿರುವುದು, ಹಿಂಗs ಕಾಲಕ್ಷೇಪ ಮುಂದೊರೆದಿತ್ತು ಸಿವನೇ... ಹಿಂಗಾಗಿ ಸಂತರಸ್ತರು ಮೂರುಗಳೊಳಗ ಯಿರಲಿಕ್ಕಾಗದೆ, ಅಡವಿ ಪಾಲಾಗಲಿಕ್ಕಾಗದೆ.. ಯಿಲಯಿಲನೆ ವದ್ದಾಡುತ್ತಿದ್ದರೆಂಬಲ್ಲಿಗೆ.. ಯಂಥ ಪರಿಸ್ಥಿತಿಗಳಿಂದ ತಲ್ಲಣಕ್ಕೀಡಾಗಿದ್ದ ಪ್ರದೇಶ ಗಳ ಬೆನ್ನ ಮ್ಯಾಲ ಬರೆಯಳದಂತೆ ಮೂಲೆಮುರುಕಟ್ಟಿನಲ್ಲಿದ್ದ ಕುದುರೆಡವಿನಿಂದ... ಆಕಾಸದೆ ತರ ನಿಲುವಿನ ಹೆಣುಮಗಳ ಆ ಪಟ್ಟಣವನ್ನು ಸೇರಿಕೊಂಡವಳಂತೆ.. ಅದಾದೋ ಪಿಕದಾನಿಲಯವನ ಜಾಲಿಮರದಂಥ ಸರೀರದೊಳಗ ವಸಾಹತು ಸ್ಥಾಪನೆ ಮಾಡಿರುವಳಂತೆ.. ಕೆಂಗಣ್ಣುಗಳ ಮ್ಯಾಲಿನ ಹುಬ್ಬುಗಳನು ಮಾಯಮಾಡಿರುವಳಂತೆ.. ತಾಯಂದಿರ ಯದೆಯೊಳಗ ವುಷ್ಟು ನೀರು ತುಂಬಿರುವಳಂತೆ.. ಪಟ್ಟಣದಿಂದ ನಗೆಯನ್ನು ವುಪಸಮಾರ ಮಾಡಿರುವಳಂತೆ.. ಯಂಥ ನಾನಾ ನಮೂನಿ ವರಮಾನದ ಝಳ ಹೊಂಟು ಬರುತ್ತಲೇಯಿತ್ತು. ಆಮಾತ್ಯ, ಸೇನಾಧಿಪತಿ, ಭಂಡಾರಿ ರಾಜಪರಿವಾರ ದಂಥವರನ್ನು ಆ ಅಗೋಚರ ಸಗುತಿ ಬಿಟ್ಟಿಲ್ಲವಂತಲ್ಲಾ.ಅಯ್ಯೋ.. ಅಲ್ಲಿಗೆ ತಮ್ಮ ಮಗಳನ್ನು ಕೊಟ್ಟಿದ್ದೀವಿ.. ಅಯ್ಯೋ ಅಲ್ಲಿಂದ ಫಲಾನ ಯಿಂಥವರ ಮಗಳನ್ನು ತಂದುಕೊ೦ಡಿದೀವಿ.. ಅಂ ಅವರ ಪರಿಸ್ಥಿತಿ ಯೇನಾಗಿರುವುದೋ.. ಹೋಗಿ ನೋಡಬೇಕಂದರ, ನೋಡಿ ಕರೆತರಬೇಕಂದರ ತಮ್ಮ ಹುಬ್ಬುಗಳು ನಿರಾಮವಾದರ ಹೆಂಗs ತಮ್ಮ ಮುಖದ ಮ್ಯಾಲಿಂದ ನಗೆ ವುತಾರಗೊಂಡರ ಹೆಂಗss ಹಿಂಗs ಯಸನ ಮಾಡುತ ಮಂದಿ ಕುದುರೆಡವಿದ್ದ ದಿಕ್ಕಿನತ್ತ ತಾಸುಗಟ್ಟಲೆ ನೋಡುವುದು... ಗಳಿಗ್ಗಳಿಗೊಮ್ಮೆ ನಿಟ್ಟುಸಿರು ಬಿಡುವುದು ಯಂಬಲ್ಲಿಗೆ... ಹಗಲು ರೂಪದ ರಾತ್ರಿಯಿದ್ದ, ಮನಾರ ಹುಣ್ಣುಮಿಯಂದೂ ಮೂಡಲು ಚಂದ್ರಾಮ ನಿರಾಕರಣೆ ಮಾಡಿದ್ದ... ನೀರು ಸುರುದೂ ಸುರುದೂ ಬತ್ತಿದ ಕಣ್ಣುಗಳಿದ್ದ ಬರದೆಡೆಗಳ ತುಂಬೆಲ್ಲ ದುಹ್ಸೊಪುನಗಳ ತುಡುಗಿಗೆ ಬಿದ್ದಿದ್ದ,