ಪುಟ:ಅರಮನೆ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ಅರಮನೆ ಕೆಟ್ಟದ್ದು.. ರಂಬಂಥ ತಿಳುವಳಿಕೆಯುಳ್ಳವಳಾದ ತಾನು, ಸೋಯಂ ಧನುವಂತರಿಯಾಗಿದ್ದ ತಾನು, ವಂದೇ ಗದ್ದರಿಕೆ ಯಿಂದ ಜ್ವಾಲಾಮುಖಿಯ ಸದ್ದಡಗಿಸಬಲ್ಲವಳಾಗಿದ್ದ ತಾನು ನಿಂತಲ್ಲಿ ನಿಲ್ಲುತಲಿದ್ದುದುಂಟಾ..? ಕುಂತಲ್ಲಿ ಕುಂಡರುತ್ತಿದ್ದುದುಂಟಾ..? ಯಿಡೀ ಪಟ್ಟಣವು ಕಣ್ಣೀರೊಳಗೆ ಮುಖ ಪಕ್ಷಾಳನ ಮಾಡಿಕೊಳ್ಳುತ್ತಿರುವುದೆಂಬ ಕಾರಣಕ್ಕೆ ತುರಡು ತುತ್ತು ಬಾಯೊಳಗಿಟ್ಟುಕೊಂಡಿದ್ದುಂಟಾ? ಎಂದು ಬೊಗಸೆ ನೀರು ಕುಡಿದು ತನ್ನ ಜೀವವನ್ನು ತಣ್ಣಗೆ ಮಾಡಿಕೊಂಡಿದ್ದುಂಟಾ? ಮಣ್ಣು ಮುಕ್ಕುವ ವುರಗಪತಾಕೆಯನ್ನೇ ತನ್ನ ಯಕ್ತಿತ್ವದ ಲಾಂಛನವಾಗಿಟ್ಟು ಕೊಂಡಿದ್ದ ಆಕೆಯು ರೆಪ್ಪೆಗೆ ರೆಪ್ಪೆಯ ಅಂಟಿಸಿ, ವಂದು ಜೋಂಪು ನಿದ್ದೆ ಮಾಡಿದ್ದುಂಟಾ..? - ಜಗಲೂರವನ ರೂಪದಲ್ಲಿ ಮೇರು ಪರುವತನೇ ತಮಗೆ ಆಸರೆ ನೀಡಯ್ಕೆ ಯಂಬ ಭಾವನೆಯು ವಬ್ಬರೆದೆಯಿಂದ ಯಿನ್ನೊಬ್ಬರೆಡೆಗೆ ಸರಾಗವಾಗಿ ಬಟವಾಡೆಗೊಂಡು ಯಿಡೀ ಪಟ್ಟಣಕ್ಕಿದ್ದ ಯರಡು ನಾಲಗೆಗಳ ಪಯ್ಕೆ ವಂದರ ಮಾಲ ಜಗಲೂರವ್ವ ಯಂಬ ನಾಮವು, ಯಿನ್ನೊಂದರ ಮಾಲ ಸಾಂಬವಿಯಂಬ ನಾಮವು.. ಯಿವು ಯರಡೂ ಸ್ತ್ರೀ ಸಂವಾದಿ ಪದಗಳೇ.. ಯೀ ಯರಡು ಪದಗಳ ಗುಣ ಧರುಮ ಯಿಭಜನೆ ಮಾಡಿದರ ವಂದರದ್ದು ವುತ್ತರಾದಿ, ಯಿನ್ನೊಂದರದ್ದು ದಕ್ಷಿಣಾದಿ.. ಯೀ ಯರಡರ ಪಯ್ಕೆ ಸಾಂಬವಿ ಯಂಬ ನಾಮವು ಕನಸಿನ ಗಂಟಾಗಿದ್ದರೆ, ಜಗಲೂರೆವ್ವ ಯಂಬ ನಾಮವು ನನಸಿನ ನಗದು ಗಂಟು.. ಸಾಂಬವಿ ಯಂಬ ನಾಮವು ಕಯ್ಯಗೆಟುಕದ, ಮೊಹೆಗೆಟುಕದ ಆಕಾಸವಾಗಿದ್ದರ, ಜಗಲೂರೆವ್ವ ಯಂಬ ನಾಮವು ಭೂಮಿಯು, ಸಾಂಬವಿಯಂಬ ನಾಮವು ತೀರವಾದರ, ಜಗಲೂರೆವ್ವ ಯಂಬ ನಾಮವು ದೇಹಿಯಂದು ಬಂದವರ ದಾಹ ತಣಿಸುವಂಥ ಯರಡು ಬೊಗುಸ ವುದುಕವು.. ಮಂಗಳಾರತಿಯಿಂದ ಅಡುಗೆ ಮಾಡಲಾದೀತಾ.. ಲೋಬಾನದ ಹೊಗೆ ಅಡುಗೆ ಮನೇಯ ವಲೆಯಿಂದೇಳುವ ಹೊಗೆಗೆ ಸರಿಸಮಾನವಾ...? ಈ ಹಿಂಗಾಗಿ ಯಾರ ನಾಲಗೆ ಮ್ಯಾಲ ನೋಡಿದರೂ ಜಗಲೂರೆವ್ವ ಯಂಬ ಪಂಚಾಕ್ಷರಗಳು, ಯಾರ ಕಿವಿಯೊಳಗಿಣುಕಿದರೂ ಜಗಲೂರೆವ್ವ ಯಂಬ ಪ್ರಣವನಾದವು. ಹಿಂಗss ವಂದ ರವ್ವಷ್ಟು ದಿವಸಗಳುರುಳಿದಲ್ಲಿ ಸಾಂಬವಿಯಂಬ ನಾಮವು ನೇಪಥ್ಯಕ್ಕೆ ಸರಿಯುವ ಕಾಲ ದೂರಯಿಲ್ಲ.. ಜಗಲೂರವ್ವನ ಬಗ್ಗೆ ಸಾಂಬವಿಯ ಮನಸ್ಸಿನೊಳಗ ಸಕಾರಾತುಮಕ ಅಭಿಪ್ರಾಯ ಯಿರುವುದೋ? ನಕಾರಾತುಮಕ ಅಭಿಪ್ರಾಯ ಯಿರುವುದೋ? ಯಿದು ದೇವರಿಗೆ