ಪುಟ:ಅರಮನೆ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ಅರಮನೆ ವಾಗಿದ್ದು ಬಂದಿದ್ದಂಥಾ ಸೂಕ್ಷ್ಮಾತಿ ಸೂಕ್ಷುಮ ಗೆರೆಯನ್ನು ಅಳಿಸಿ ಹಾಕಿ ತಮ್ಮಂಥ ಹುಲುನರಮಾನವರಿಗೆ ಬುದ್ದಿ ಕಲಿಸಿರುವ ತಾಯಿ, ಸದರಿ ಪಟ್ಟಣವನ್ನು ತಾಯ್ತನದಿಂದ ವಂಚಿಸಿರುವ ತಾಯಿಯು ತನ್ನ ವಸ್ತಿ ಸಮೇತ ಯಲ್ಲೋಗಿರುವಳೋ? ಯಲ್ಲಡಗಿ ಕೊಂಡಿರುವಳೊ? ಯೇನು ಕಥಿಯೋ ಸಿವನೆ..? ಯಲ್ಲಾ ಅಯೋಮಯ, ಯೀ ರವಷ್ಟು ದಿವಸಕ್ಕೇನೆ ತಲೆಯ ಹಕ್ಕನ್ನು ಮೊಣಕಾಲು ಕಸಕೊಂಡಯ್ಕೆ.. ಯಿನ್ನು ಮುಂದೆ ಯೇನು ಕಾದಿರುವುದೋ? ಕುರುಗುಡ್ಡ, ಬೂದಿಗುಡ್ಡ, ಕೋಳಿ ಗುಡ್ಡಗಳಿಗೆ ಪವುರಾಣಿಕವಾಗಿ ಪ್ರಾಪ್ತ ವಾಗಿರುವಂಥ ಘನಘೋರ ಪಟ್ಟಣವು ಸದರೀ ಪಟ್ಟಣಕ್ಕೆ ಲಭ್ಯವಾಗದಂತೆ ಮಾಡಲು ಹಿರೀಕರಾದ ತಾವೇನು ಮಾಡಬೇಕು? ನಿಸ್ತೇಜಗೊಂಡಿರುವ ಅರಮನೆಗೆ ಯೇನು ಮಾಡಬೇಕು? ಹಿಂಗ ಮಾಡಿದರ ಹಂಗಾದೀತಾ? ಹಂಗ ಮಾಡಿದರ ಹಿಂಗಾದೀತಾ? ಸರುವಾಂತ ಲ್ಯಾಮಿಯಾದ ಜಗದಂಬೇ ಅಲ್ಲಿರುವಳಾ, ಯಲ್ಲಿರುವಳಾ ಯಂದು ಹುಡುಕಾಡುತ್ತಿರುವಿರಲ್ಲ ಮೂಢರಿರಾ ಯಂದು ಜಡೆತಾತನು ಬ್ಯಾರೆ ನಿಷು«ರವಾಗಿ ಅಂದಾಡುತ್ತಿರುವನು.. ಯೇನು ಮಾಡುವುದಪ್ಪಾ.. ಯಂದು ಹಿರೀಕರು ಅರಳಿ ಮುದುಡುವ ಕಾರ ಮಾಡುತಲಿದ್ದರೆಂಬಲ್ಲಿಗೆ... ಯಿಂಥ ಹರಕತ್ತಿನ ಸಮಯದೊಳಗ ಕುಂಪಣಿ ಸರಕಾರ ಯಂಬ ಮಂತ್ರವು ಯಾರಿಗೆ ಹೊಳಿತೋ? ಯಾವಾಗ ಹೊಳಿತೋ? ಹೆಂಗ ಹೊಳಿತೋ? ಯದಕಂತ ಹೊಳಿತೋ? ಫಲಾನ ದಿವಸ ಫಲಾನ ಬ್ರಾಮ್ಮಿ ಮೂರದಂದು ಅರಮನೆಯ ವುಷ್ಟರಿಗೆ ಮ್ಯಾಲ ತೂಕಡಿಸು ತಲಿದ್ದ ರಾಜಮಾತೆ ಭಮ್ರಮಾಂಬೆಯ ಯದೆಯೊಳಗೆ ಪುಪ್ಪುಲ ರಾಜವಮುಸ ರುಕ್ಷವು ಅಗಾಧವಾಗಿ ಬೆಳೆಯಿತಂತೆ.. ಅದರ ಕೊಂಬೆ ಕೊಂಬೆಗುಂಟ ಜೋತಾಡುತಲಿದ್ದ ಕೀರಿನೇಸರು ಆಕೆಗೆ ಅನಬಾರದ್ದನ್ನು ಅಂದಾಡಿದರಂತೆ. ಅದಕಿದ್ದು ಮುದುಕಿಯು ಯಲವೋ ಥಾಮಸು ಮನೋss ಅನ್ಯಾಯವನ್ನು ಯೀ ಯಲ್ಲಾ ಅನಾಹುತಕ್ಕೆ ಕಾರಣ ಆದಿಯಲ್ಲಾ.. ಯೀ ಅರಮನೇನ ಪ್ರಜೆಗಳ ಕಾಲಡಿ ಕಸ ಮಾಡಿಬಿಟ್ಟೆಯಲ್ಲಾ.. ನೀನು ಹೇರಿದ ಅಡ್ಡಾಂತದಿಂದಲ್ಲಾ ಸಾಂಬವಿ ಪುರ ಪ್ರವೇಸ ಮಾಡುವಂತಾಗಿದ್ದು ss ಪಿಕದಾನಿ ಮೋಬಯ್ಯನ ಸರೀರದೊಳಗ ವಸ್ತಿ ಮಾಡಿದ್ದುss ನಾನಾ ನಮೂನಿ ಸಂಕಟಗಳಿಗೀಡುಮಾಡಿದ್ದುss ಯಿದಕೆಲ್ಲಾ ನೀನು ಕಾರಣ.. ನಿನ್ನ ಕುಂಪಣಿ ಸರಕಾರ ಕಾರಣ.. ಯಾವತ್ತಾಸ್ತಿ ಅಧಿಕಾರ ನನ ಕಯೊಳಗಿದ್ದಿದ್ದಲ್ಲಿ ನಾನು ಸುಮ್ಮಕ ಯಿರುತ್ತಿದ್ದೆನಾ?... ನಿನ್ನ ಕುಂಪಣಿ