ಪುಟ:ಅರಮನೆ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಅರಮನೆ ವರಾತವು.. ಹಿಂಗs ಮನಗೊಂದೊಂದು ವರಾತವು.. ಹಿಂಗs ಕರಲುಗಾಯಿಗ ಬಿದ್ದವರಂಗ ಕಪ್ಪಿಸಿ ಅಡ್ಡಾಡುವ, ಅವಿಚಿಟ್ಟುಕೊಳ್ಳುವ ವರಾತವು.. ಅಯ್ಯೋ ವಬ್ಬರಿಗಾದರೂ ತಮ್ಮ ಮಾತ್ರುಭೂಮಿ ಮ್ಯಾಲ ಪ್ರೀತಿ ಕಕ್ಕುಲಾತಿಯಿಲ್ಲವಲ್ಲ... ಆ ಕಾಲದ ಕುದುರೆಡವು ಯಲ್ಲಿ? ಯೀ ಕಾಲದ ಕುದುರೆಡವೆಲ್ಲಿ? ತಾವು ಕಾಲದುದ್ದಕೂ ಬಿದುಕೋತ ಬಂದಿರೋರು. ಪಟ್ಟಣದ ವಳಿತು ಕೆಡುಕುಗಳನು ಅರಗಿಸಿಕೊಂಡು ಬದುಕಿರೋರು.. ಯಿಂಥ ತಮ್ಮ ಕಣ್ಣೆದುರಿಗೆ ತಮ್ಮ ಪಟ್ಟಣದ ಪ್ರಜೆಗಳ ರುದಯಗಳು ಮೊಂಡಾಗಿರುವವಲ್ಲಾ. ಪಟ್ಟಣಕ್ಕಿಂತ ತಮ್ಮ ಮೋಣಿಯೇ ಹೆಚ್ಚಾಗಿರುವುದಲ್ಲಾ... ತಮ್ಮ ಮೋಣಿಗಿಂತ ತಾವು ವಾಸಿಸುತ್ತಿರುವ ಮನೆಯೇ ಹೆಚ್ಚಾಗಿರುವುದಲ್ಲಾ.. ನನ್ನೋರು ತನ್ನೂರು ನಂಬುವ ಮಾತು ಮಮಕಾರಗಳೇ ಹೆಚ್ಚಾಗಿರುವವಲ್ಲಾ.. ಯಿಂಥ ಪ್ರಜೆಗಳು ಯಿರುವ ಹೊತ್ತಿಗೆ ಕುಂಪಣಿ ಸರಕಾರ ಅರಮನೆಯಸವಲತ್ತುಗಳನ ಕಬ್ಬಾ ಮಾಡಿಕೊಂಡಿರುವುದು ಯಂದು ಮುಂತಾಗಿ ಚಿಂತೆಯ ಮಡುವಳಗೆ ಮುಳುಗುತೇಲುತಲಿದ್ದ ಹಿರೀಕರ ಪಯ್ಕೆ ಅಡುವಯ್ಯ ನಾನು ಹೋಗುತೀನೆನ್ನಲು ಜಡೆತಾತ “ಬ್ಯಾಡಕಣ ಮಗಾ.. ನೀನು ದಯವಸ್ಥರಿಗೆ ಬೆನ್ನೆಲು ಬಿದ್ದಂಗದೀ” ಯಂದು ತಕರಾರು ಯತ್ತಿದನು... ಜಡೆತಾತನು ನಾನು ಹೋಗುತೀನೆನ್ನಲು ಅಡುವಯ್ಯನು “ಬ್ಯಾಡ ತಾತss ನೀನು ನಿನ್ನ ತಲೆಗೂದಲನ್ನು ಪರಸ್ಥಳದೊಳಗ ಹೆಂಗ ನಿಭಾಯಿಸುತ್ತೀ...?” ಯಂದು ತಕರಾರು ಯತ್ತಿದನು. ಕಾಡುಪಾಲಯ್ಯನು ನಾನು ಹೋಗುತೀನೆನ್ನಲು ನಾಡಪಾಲಯ್ಯನು “ಬ್ಯಾಡ ಮಾವಾ.. ನಿನ್ನ ನೋಡಿದರ ಯಡ್ಡವರ ಸಾಹೇಬ ಹೆದರಿಕಂಡಾನು” ಯಂದು ತರುಬಿದನು.. ಹಿರೀಕರಾಗಿರೋ ತಾವು ಹುಟ್ಟಿರುವುದು ಯಿಲ್ಲೇಯಾ.. ಬೆಳೆದಿರುವುದು ಯಿಲ್ಲೇಯಾ.. ತಮ್ಮ ಪಯ್ಕೆ ಯಾರೊಬ್ಬರೂ ಹೊರಗಿನ ಪರಪಂಚ ನೋಡಿರೋರಲ್ಲ... ಪರ ದೇಸದವರ ಮುಖಕ್ಕೆ ಮುಖಕೊಟ್ಟು ಮಾತಾಡಿರೋರಲ್ಲ... ತಮಗ್ಯಾರಿಗೂ ಬೊಟ್ಟು ದಮ್ಮಡಿ ಯಣಸಾಕ ಬರಂಗಿಲ್ಲ.. ಯಿಂಥ ತಾವು ದೂರದ ದೇಸವಾದ ಕೂಡ್ಲಿಗೀಗೆ ಹೋಗುವುದೆಂದರೇನು? ಪರಂಗಿ ಮಂದಿಂದುರು ನಿಂತು ಮಾತಾಡುವುದೆಂದರೇನು? ಯಂದು ಮುಂತಾಗಿ ಯಸನ ಮಾಡುತಾss ಮಾಡುತಾ ಹಿರೀಕರು ಕುಗ್ಗುತ ಹೋಗಿಬಿಟ್ಟರು.. ತಮ್ಮನ್ನು ತಾವು ಸಾಪಳಿಸಿಕೊಂಡರು. ಅವರೆಲ್ಲ ಯೀ ಪ್ರಕಾರವಾಗಿ ಮವುನವಾಗಿರುವ ಕಾಲಕ್ಕೆ ದೂರದಿಂದೆಲ್ಲಿಂದಲೋ ಅಲಲಲಾ ಸೂರss ಯಂಬ ನಿರಸ್ತಘನ ತೇಜದ ರವವು ಅಲೆಅಲೆಯಾಗಿ ತೇಲಿ ಬಂದು ಅವರ ಕಿವಿಗಳಿಗಟೆಯಿತು. ಮೊದ