ಪುಟ:ಅರಮನೆ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹುಡುಕಾಡುತ್ತಿದ್ದೆವಲ್ಲಾ.. ಯಂದು ಮುಂತಾಗಿ ವುದ್ದಾರ ವುದುರಿಸಿದ್ದಾಗಲೀ, ನೀನು ಬಾ.. ನೀನು ಬಾ ಯಂದು ಅವರಿವರನ್ನು ಕೂಗಿ ಕೂಗಿ ಕರೆದದ್ದಾಗಲೀ, ತಮ್ಮ ಹಿಂದೆ ಎಂದು ಅಗಾಧ ಪರಿಶ್ನ ತುರುಬಿನೋಪಾದಿಯಲ್ಲಿ ಮುಡುಕೊಂಡಿದ್ದಾಗಲೀ.. ಚಮಲೆ ಹೆಜ್ಜೆ ಹಾಕತೊಡಗಿ ದ್ದಾಗಲೀ.. ತಡ ಆಗಲಿಲ್ಲ.... ಯೇನು ಮಾಡುತಲೋ, ಯೇನು ಬಿಡುತಲೋ ಬೇಯಿನಮರದವ್ವನ ನೆಳ್ಳರಮನೆಯೊಳಗೆ ಮಣ್ಣಿನ ಸಿವಾಸನದ ಮ್ಯಾಲ ನಿಟ್ಟುಸಿರು, ಬಿಸಿ ವುಸುರುಗಳೆಂಬ ವಾಯುರೂಪೀ ಆಯುಧಾಭರಣಗಳನ್ನು ಮೂಗೊಳಗ ಮುಡಕೊಂಡು ಗಳಿಗಳಿಗೊಂದೊಂದು ಸಲಕ ತನ ಗಂಡನ ವಯಿಭವೋಪೇತ ಸರೀರವನ್ನು ನೆನೆಯೂತ, ಮರೆಯೂತ.. ಮರೆತ. ನೆನೆಯೂತ.. ನೆರಳೇ ತಾನೆ? ತಾನೇ ನೆರಳೆ ? ತು೦ಬ೦ತೆ ಬೆಳಕಿನ ಕಡಲನೆ ವಡಲೊಳಗಿಟ್ಟುಕೊಂಡು ಕತ್ತಲ ತತ್ತಿಯಂತೆ ಕೂಕಂಡಿದ್ದ ಜಗಲೂರೆವ್ವ ತನ್ನ ಕಣ್ಣಳತೆ ಯೊಳಗಾಗಮನಗಯ್ಯ ಹಿರೀಕರನ್ನು ಬಿಪ್ಪಾ.. ಬಿಣ್ಣಾ ಯಂದು ಸ್ವಾಗತಿಸಿ ಕುಡಿಯಲಕ ಮನಾರ ನೆರಳು, ತಿಂಬಲಕ ಮನಾರ ನೆರಳು ನೀಡಿ ಸತ್ಕರಿಸಿದಳೆಂಬಲ್ಲಿಗೆ ಸಿವಸಂಕರ ಮಾದೇವಃs ಅವತ್ತು ಪತ್ತಿಕೊಂಡದೊಳಗ ಅಪಾರ ಜನಸ್ತೋಮದಿಂದ ದಾಹ ತಣಿಸಿದ ಕಾರಣಕ್ಕೆ ಭಗೀರಥ ಯಂಬ ಬಿರುದನ್ನು ಪಡಕೊಂಡಂಥವನಾದ ಥಾಮಸು ಮನೋ ಸಾಹೇಬನು, ಯಂಜಲೆಲೆ ಯಲ್ಲಮ್ಮಾಯಿ ಯಂಬ ಹಲವು ಮನುವಂತರಗಳಿಂದ ಮಜ್ಜಣ ಮಾಡದೆ ಯಿರುವ ಸರಣೆ ಬಾಯಿಂದ 'ಯಂಜಲೆಲೆ' ಯಂಬ ಪಾಪವನ್ನು ಮುಡಕೊಂಡಂಥವನಾದ ಕಲೆಟ್ಟರ ಸಾಹೇಬನು, ತುಂಬಿದ ಕೊಡದಂಥ ಜಾಯಮಾನವಂದಿಗನಾದ ಕುಂಪಣಿ ಸರಕಾರದ ಕಣುಮಣಿಯು, ದಂತ ಕಥಾ ದಿಗಂತ ಭಾನುವೆಂದೆನಿಸಿದ ಅಲೆಗ್ಲಾಂಡರ ಮನೋನ ಯೇಕಮಾತ್ತಪುತ್ರರತ್ನನು.. ಬಿರುಗಾಳಿ ಯಲ್ಲಲ್ಲಿದ್ದಿತೋ ಅಲ್ಲೆಲ್ಲ ತಂಗಾಳಿಯೋಪಾದಿಯಲ್ಲಿ ಸುಳುದಾಡುತ ರಾಯಲಸೀಮದ ಜನತೆಯನ್ನು ನೆರಳು ನೀರುಗಳೆಂಬುವ ಸಮ್ಮೋಹನಾಸ್ತರಗಳನ್ನು ಬೀರಿ ಪರವಸ ಮಾಡುತಲಿದ್ದನು. ತನಗ ತನ್ನದೇ ಆದ ಖಾಸಗಿ ಬದುಕಿನ ಕಡೇಕ ನಾಳೆ ಲಕ್ಷ್ಯ ಕೊಟ್ಟರಾತು, ನಾಡದ ಲಕ್ಷ್ಯ ಕೊಟ್ಟರಾತು ಯಂದು ತಾನು ಯಂದಿನಿಂದಲೋ ಅಂದುಕೊಳ್ಳು ತಲಿದ್ದುದು ಖರೆ. ಆದರ ರಾಯಲಸೀಮದ