ಪುಟ:ಅರಮನೆ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೩೩ ರಾಜಕೀಯದ, ಸಾಮಾಜಿಕವಾದ ಕಾರಣಗಳು ಬಿಟ್ಟುಕೊಡುತಾಯಿರಲಿಲ್ಲ ಯಂಬುದು ಕೂಡ ಅಷ್ಟೇ ಖರೆ.. ರಾಯಲಸೀಮೆ ಎಂದರ ಯೇನು ತಟಗು ರಾಜ್ಯವ.. ಅದು ಹಬ್ಬಿರುವುದು ಅಲ್ಲಿಂದ ಯಿಲ್ಲೀ ಮಟ.. ಯಿಲ್ಲಿಂದ ಅಲ್ಲಿ ಮಟ.. ಮರಿಗೊಬ್ಬೊಬ್ಬ ಸಾಮರಾಟನು? ನೋಡೋಣಿ ಗೊಬ್ಬೊಬ್ಬ ಪಾಳೇಗಾರನು? ಅವರನ್ನು ಹತೋಟಿಯಲ್ಲಿಡುವುದು ಕಪ್ಪೆಗಳನ್ನು ತೂಗಿದ. ತ್ರಾಸಕರವಾಗಿತ್ತು.. ಮನೋ ಆಗಿರುವ ಹೊತ್ತಿಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿರುವನು.. ಯಿನ್ನೋಲ್ಡನಾಗಿದ್ದರೆ ಬೂಟು ಬಿಚ್ಚಿಟ್ಟು ಬರಿ ಅಂಗಾಲೀಲೆ ಮೋಡಿ ಬಿಡದೆಯಿರುತ್ತಿರಲಿಲ್ಲ. ಯೀ ಸದರಿ ಪ್ರದೇಸವನ್ನು ತನ್ನ ಪಂಚೇಂದ್ರಿಯಂಗಳ ಪೂರುವಕವಾಗಿ ನಿಭಾಯಿಸುತಲಿದ್ದ ಕಲೆಟ್ಟರು ಸಾಹೇಬ ಹೊತ್ತು ಹೊತ್ತಿಗೆ ಸರಿಯಾಗಿ ಕೂಳು ತಿನ್ನುತ್ತಿದ್ದುದುಂಟಾ? ರೆಪ್ಪೆಗೆ ರೆಪ್ಪೆ ಅಂಟಿಸಿ ನಾಲಕಯ್ದು ತಾಸು ನಿದ್ದೆ ಮಾಡುತ್ತಿದ್ದುದುಂಟಾ, ತನ್ನ ಅಧೀನ ಅಧಿಕಾರಿಗಳಿಗೂ ನಿದ್ದೆಮಾಡಲು ಬಿಡುತಲಿದ್ದುದುಂಟಾ? ಅವರಿಗೆಲ್ಲ ಸಾಕು ಸಾಕಾಗಿ ಹೋಗಿ ಯಾವಾಗ ಯೇ ಮಾರಾಯ ಯಿಲ್ಲಿಂದ ತೊಲಗಿ ಹೋಗುವನೋ ಯಂದನ್ನಿಸುತಲಿದ್ದುದುಂಟು. ನಾಲಕಾರು ತಿಂಗಳು ರಜೆ ಹಾಕಿ ಯಿಂಗಲೆಂಡು ಕಡೇಕ ಹೋಗುವಂತೆ ಕೆಲವು ಆಪ್ತರು ಮನೆಗೆ ತಾಕೀತು ಮಾಡುತಲಿದ್ದುದುಂಟು. ಅದಕಿದ್ದು ಸಾಹೇಬ ಯೇ ರಾಯಲಸೀಮೆಯನ್ನು ಮಡಚಿ ಕಡತದೊಳಗಿಡಲಕ ಬಂದಿರದಿದ್ದಲ್ಲಿ ತಾನು ನಾಕಾರು ತಿಂಗಳು ಯಾಕ ವರುಷೆರಡು ಹೋಗಲಕ ಸಿದ್ದಯಂದು ನಗು ನಗುತಲೆ ಹೇಳಿಕೊಂಡು ಬಂದಿದ್ದ. ತನಗೂ ತನ್ನ ಹುಟ್ಟೂರಾದ ಗ್ಲಾಸೋವಾ ವಂದಲ್ಲಾ ವಂದು ರೀತಿಯಿಂದ ಕಾಡದೇ ಯಿದ್ದಿರಲಿಲ್ಲ. ಆದರೇನು ಮಾಡುವುದು ಸರ ಸರss ಪತ್ತಿಕೊಂಡದಲ್ಲಿ ಬಿರುದು ಸ್ವೀಕರಿಸುವಾಗ ಕಡಪಾ ಕಡೇಕೋ, ಮದನಪಲ್ಲಿಯ ಆರಿಸ್ತೀಹಿಲ್ಸ್ ಕಡೇಕೊ ಹೋಗಿ ವಂದು ವಾರದ ಮಟ್ಟಿಗಾದರೂ ಯೇಕಾಂಗಿಯಾಗಿ ಬಿದ್ದುಬಿಡಬೇಕೆಂದು ತೀರುಮಾನಿಸಿದ್ದನು.. ಯಿನ್ನೇನು ಅಲ್ಲಿಂದ ಹೊಂಡಬೇಕೆನ್ನುವಷ್ಟರೊಳಗೆ ಬಸಲತ್‌ಜಂಗ್‌ನ ಮಗ ಕುದ್ರತುಲ್ಲಾ ತನ್ನನ್ನು ತಾನು ಸುಬೇದಾರನೆಂದು ಘೋಷಿಸಿಕೊಂಡ ವರಮಾನ ಬಂತು. ಮತ್ತೋ ಅಬಡಾ ದಬಡಾ ಅಲ್ಲಿಗೆ ಹೋಗಿ ಆತನನ್ನು ಸೆರೆಹಿಡಿಯದಿದ್ದಲ್ಲಿ ಗುತ್ತಿ ಸಮುಸ್ಥಾನವು ಕುಂಪಣಿ ಸರಕಾರದಿಂದ ಕಯ್ತಪ್ಪಿ ಹೋಗಿ ದೊಡ್ಡ ಅನಾಹುತವೇ ಸಂಭವಿಸಿಬಿಡುತಲಿತ್ತು, ಆದವಾನಿ ತಲೆನೋವು ಯಿನ್ನೇನು ಬಗೆಹರಿಯಿತೆಂದು ಕಲೆಟ್ಟರು ಸಾಹೇಬ ಭಾವಿಸುವಷ್ಟರೊಳಗೆ ಕಮಲ