ಪುಟ:ಅರಮನೆ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೩೫ ಯಿಸೇಸವಾಗಿ ಅಂದಾಡಿ ಪರವಸಗೊಳಿಸಿದನು. ತದನಂತರ ಆ ಚಾಣಾಕನು ಕಳೇಬರವನ್ನು ಅನಾವರಣ ಮಾಡಿದೊಡನೆ ಯೇನು ಹೇಳಲಿ ಸಿವನೇ... ಕಣ್ಣೀರ ಕೋಡಿ ಹರಿಯಿತು. ದುರದ ಸಮಸ್ತ ದುಕ್ಕವು ತಹಬಂದಿಗೆ ಬಂದ ಮ್ಯಾಲ ಅಲ್ಲೇ ನಾಕು ದಿನ ವುಳಕೊಂಡಿದ್ದು ನಾಯಕನ ವಂಸ ರುಕ್ಷವನ್ನು ತನ್ನ ಕಣ್ಣೆದುರಿಗೆ ತಳಕೊಂಡನು.. ಫಲಾನ ಸಂವತ್ಸರದಲ್ಲಿ ಹಂಡೇ ಹನುಮಪ್ಪನಾಯಕನೊಂದಿಗೆ ಹೋರಾಡಿ ಅಜೇಯವಾಗುಳಿದ ಜಿಲ್ಲೇಲ ರಘುಪತಿ ರಾಜಯ್ಯದೇವ ಮಾರಾಜನಿಂದ ಆರಂಭವಾಗಿದ್ದ ವಂಸರುಕ್ಷದೊಳಗ ಬೀರಲಿಂಗಣ್ಣನಾಯಕ, ಬೊಮ್ಮಲನಾಯಕ, ವೆರಿಬೊಮ್ಮಲನಾಯಕ, ಪದ್ಧಕೋನೇಟಿ ನಾಯಕ, ಯಂಕಟಪತಿ ನಾಯಕ, ಮಾರಾಣಿ ಲಚ್ಚುರಾಮ ಅಮ್ಮ ಪೆದ್ದ ತಿಮ್ಮಪ್ಪನಾಯಕರೇ ಮೊದಲಾದ ಕೊಂಬೆ ರೆಂಬೆಗಳು ಗೋಚರವಾದವು. ಯಿದೆಲ್ಲವನ್ನು ಕೂಲಂಕಷ ಪರಿಸೀಲಿಸಿದ ನಂತರ ಕೀರಿಸೇಸ ರಾಜಗೋಪಾಲನಾಯಕನ ದೊಡ್ಡ ತಮ್ಮನಾಗಿದ್ದ ಜೀವಪ್ಪನಾಯಕನನ್ನು ಮೊದಲ ಪಿಂಚಣಿ ದಾರನನ್ನಾಗಿಯೂ, ವಯಸ್ಸಿಗೆ ಬಂದಿದ್ದ ಆತನ ಮಗ ಕುಷ್ಟಪ್ಪನಾಯುಡನ್ನು ಯರಡನೇ ಪಿಂಚಣಿದಾರನನ್ನಾಗಿಯೂ ಘೋಷಿಸಿದನು. ತನ್ನಾಗೈಗೆ ಯದುರಾಡಲಿಕ್ಕೆ ವಳಿಕೇ ರಾಜಪಾರಿ ವಾರದವರನ್ನು ತನ್ನ ತೀನೋಟ ಮಾತ್ರದಿಂದ ದೂರ ಸರಿಸಿದನು.. ತೆರಿಗೆಗಳನ್ನು ಅರಕ್ಕಲ್ಲಿ ಕಡಿಮೆ ಮಾಡಿ ಪ್ರಜೆಗಳನ್ನು ಸಂತುಷ್ಟರನ್ನಾಗಿ ಮಾಡಿದನು. ನಾಯಕರ ಮತ್ತು ದುರದ ಕುಲದಯವಾದ ಶ್ರೀ ಯಂಕಟೇಶ್ವರ ಸ್ವಾಮಿಯ ದೇವುಳಕ್ಕೆ ಖುದ್ದ ನಡಕೊಂಡು ಹೋಗಿ ದರುಸನ ಪಡೆದನು.. ಅಗೋ ನಿಮ್ಮ ಸ್ವಾಮಿಯು ಸುಂದರ ಬಾಲಕನ ರೂಪಧಾರಣ ಮಾಡಿ ನನಗೆ ಆಸೀರುವಾದ ಮಾಡುತ್ತಿರುವನು ಯಂದುದ್ಧಾರ ತೆಗೆದು ವಯ್ದಿಕ ರುಂದದ ರುದಯ ಸೊರೆಗೊಂಡನು. ಕಲೆಟ್ಟರು ಸಾಹೇಬನಿಗೆ ತಮ್ಮ ಸ್ವಾಮಿಯು ಆಸೀರುವಾದ ಮಾಡಿದನೆಂಬ ಕಾರಣಕ್ಕೆ ಪ್ರಧಾನ ಅಶ್ವಕರಾದ ಗೋಯಿಂದಾಚಾದ್ಯರು 'ಶ್ರೀ ಪ್ರಸನ್ನಂರಂಕಟೇಶ್ವರಸ್ವಾಮಿ' ಯಂದು ಪುನಾಮಕರಣ ಮಾಡಿದರು. ಈ ಪ್ರಕಾರವಾಗಿ ರಾಯದುಗ್ಗದ ರಾಜಕಾರಣ ಸಂಬಂಧೀ ತರಲೆಗಳನ್ನು ತನ್ನ ಚಾಕಚಕ್ಯತೆಯಿಂದ ಬಗೆಹರಿಸಿದ ಥಾಮಸು ಮನೋ ಸಾಹೇಬನು ಅಲ್ಲಿಂದ ಪೊಡಮಟ್ಟು. ಚಾಂಗು ಬಲಾ.. ಚಾಂಗು ಬಲಾ.... ಅತ್ತ ಕೂಡ್ಲಿಗಿ ಪಟ್ಟಣದೊಳಗೆ ರುತು ಪವನದ ತುಂಬೆಲ್ಲ ತಾರುಣ್ಯದ ಪರಿಮಳ ಘಮ್ಮಂತ ಹಬ್ಬುತಲಿತ್ತು. ಹರೇದವರಿಂದ ಹಿಡಿದು ಮುದೇರವರೆಗೂ