ಪುಟ:ಅರಮನೆ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೩೭ ಮನುಷ್ಯ ರೂಪ ಧಾರಣ ಮಾಡಿ ತನ್ನ ಮಾಲ ಬಕಾಟಿ ಬಾರಲು ಬಿದ್ದಂಗಾಗತಯ್ಕೆ.. ಬಳೆಗಳು ಮುಂಗಯ್ಯ, ಗೆಜ್ಜೆಗಳು ಮುಂಗಾಲುಗಳನ್ನ ಸರಗಳು ತನ್ನ ಕುತ್ತಿಗೆಯನ್ನ, ಕುಂಕುಮ ಬೊಟ್ಟು ತನ್ನ ನೊಸಲನ್ನ, ತೊಟ್ಟಿರೋ ಪೋಲಕ ತನ್ನ ಯದೆಯನ್ನ, ವುಟ್ಟಿರೋ ವಳ ಲಂಗ ತನ್ನ ತೊಡೆ ಜಘನಗಳನ್ನ ಜಡೆ ತನ್ನ ಬೆನ್ನನ್ನ, ಮೂಗುಬೊಟ್ಟು ತನ್ನ ಮೂಗನ್ನ ಮ್ಯಾಲ್ಲುಟಿ ಕೆಳದುಟಿಯನ್ನ ಕೆಳದುಟಿ ಮ್ಯಾಲ್ಲುಟಿಯನ್ನ, ವಾಲೆ ತನ್ನ ಕಿವಿಗಳನ್ನ, ಪಾದರಕ್ಷೆ ತನ್ನ ಅಂಗಾಲುಗಳನ್ನು ಲೊಚಲೊಚಾಂತ ಮುದ್ದು ಕೊಟ್ಟಂಗಾಗತಯ್ಕೆ. ಯವ್ವಾ.. ಸರೀರದ ಹೊರಭಾಗ ವಳಭಾಗವನ್ನ ಮುದ್ದು ಕೊಟ್ಟಂಗಾಗತಯ್ಕೆ ಯವ್ವಾ.. ಯವ್ವಾ ನನಗ ನನ್ನ ಸರೀರದ ಗೊಡವೆಯೇ ಬ್ಯಾಡs ಯವ್ವಾ ಕೆಳಗ ಹಾಸಿಕೊಳ್ಳುವ ಹಾಸಿಗೆ, ಹೊದ್ದುಕೊಳ್ಳುವ ದುಪ್ಪಟೆಯೊಳಗಿನ ಚಿತ್ರಗಳು ನನ್ನನ್ನು ಬಲು ಜುಲುಮಿ ಮಾಡಲಾಕ ಹತ್ಯಾವ.. ಕತ್ತಲು, ಬೆಳಕು, ಜಾಲಾಂದರ.. ದೀಪ ಯಿವೆಲ್ಲಮನನ್ನ ಯಿರುದ್ದ ಮಲಸತ್ತ ಹೂಡಿರೋ ಹಾಂಗ ಕಾಣತಸ್ತೆ.. ಯಂದು ಚಿನ್ನಾಸಾನಿ ತನ್ನ ತಾಯಿ ತಿಲ್ಲಾನ ತಾಯಕ್ಕಳ ಜೀವ ತಿಂಬತೊಡಗಿದಳು ಸಿವನೇ... ತನ್ನ ಸುವ೦ದರವೇ ತನಗೆ ಮುಳುವಾಗಿದ್ದಂಗಯ್ತಿ.. ಯಷ್ಟಿದ್ದರೂ ತಾನು ಯಿಜಯನಗರ ಸಾಮ್ರಾಟ ಸೀಕ್ರುಷ್ಟ ದೇವರಾಯನ ದ್ವಿತೀಯ ಪಟ್ಟಮಹಿಷಿ ಚಿನ್ನಾಂಬಿಕೆಯ ವಂಶೋದ್ದವಳು. ಸಾವುರ ಸುಂದರಿಯರ ಮಯ್ಯ ವಲವಿನ ಸವುಂದರವನ್ನು ತಾನೋಲ್ವಳೇ ಧರಿಸಿರುವುದೇ ಯಿದಕ್ಕೆ ಕಾರಣ.. ಯಿದರ ಪಯ್ಕೆ ಪಾವಲಿ ಭಾಗವನ್ನಾದರೂ ವುತಾರ ಮಾಡಬೇಕೆಂದು ಕೊಂಡಳು ತಾಯಕ್ಕ... ತನ್ನ ಮಗಳ ಮಯ್ಯ ಮ್ಯಾಲ ಆಭರಣಗಳಿದ್ದರೊಂದು ಚಂದ.. ತೆಗೆದರ ದುಪ್ಪಟ್ಟು ಚಂದ.. ತಾನು ತನ್ನ ಕಯ್ಯಾರ ತನ್ನ ಮಗಳನ್ನು ನಿರಾಭರಣ ಮಾಡಲಕಾದೀತಾ? ತನ್ನ ಮಗಳ ಮುಖದಿಂದ ಕಣ್ಣುಗಳನ್ನಿಳುವಲಕಾದೀತಾ? ಗಲ್ಲಗಳನ್ನಿಳುವಲಕಾದೀತಾ.? ಯದೆಯ ಗಾತ್ರವ ತಗ್ಗಿಸಲಕಾದೀತಾ?.. ಹೆಂಗಪ್ಪಾ ತನ್ನ ಮಗಳನ್ನು ಸಂತಯಿಸುವುದು? ಹೆಂಗಪ್ಪಾ ತನ್ನ ಮಗಳನ್ನು ರೂಪುಲಾವಣ್ಯದಿಂದ ಕಾಪಾಡುವುದು? ನಾಕು ಮಂದಿ ಗಂಡಸರ ಕೆಟ್ಟ ಕಣ್ಣುಗಳು ತನ್ನ ಮಗಳಿಗೆ ತಗುಲದಂತೆ ನೋಡಿಕೊಳ್ಳುವುದು ಹೆಂಗ? ತಾಯಕ್ಕ ಸವುಂದಯ್ಯದುಪಟಳದ ಶಮನಾರವಾಗಿ ಗಳಿಗ್ಗಳಿಗೊಮ್ಮೆ ನೀವಳಿಸಿ ತೆಗೆಯುವ ಯೇರುಪಾಟು ಮಾಡಿದಳು. ತನ್ನ ಮಗಳ ಕಡೇಕ ದಿಟ್ಟಿಸಿ ನೋಡಕೂಡದೆಂದು ಹೆಣ್ಣಾಳುಗಳಿಗೆ ತಾಕೀತು ಮಾಡಿದಳು. ನಿರೀಂದ್ರಿಯರಾದ ಬೊಜ್ಜಾಳುಗಳನ್ನು ಕಣ್ಣಾವಲಿಗೆ, ಮದ್ಗಾವಲಿಗೆ ನೇಮಿಸಿದಳು.. ದೇಸ ದೇಸಗಳಿಂದ, ಪಾಳೆಗಾರ,