ಪುಟ:ಅರಮನೆ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಚವುಗಲೆಯು ಸಂಬಾಳ, ಚವುಡಿಕೆಗಳ ಮ್ಯಾಲ ಬೇಕಾಬಿಟ್ಟಿ ಬಡಿಯೂತ ತನ್ನ ವರಮಾನದ ಸಂಕಟವನ್ನು ತೀರಿಸಿಕೊಳ್ಳುತ್ತಿರುವಾಗ್ಗೆ ಸುಂಕ ತೇಯದ ಹೊರತು ಬಿಡೋದಿಲ್ಲ ಯನ್ನುತಿರುವಾಗ್ಗೆ, ನಾಯಕನ ಹುಕುಂ ಬಂದದ್ದೂ ತಡವಾಗಲಿಲ್ಲ.. ಗವುರವಪೂರುವಕವಾಗಿ ನಡೆಸಿಕೊಂಡೊಯ್ದು ಆಮಾತ್ಯ ಚರಕಲಯ್ಯನೆದುರು ಸಾದರ ಪಡಿಸಿದ್ದೂ ತಡವಾಗಲಿಲ್ಲ.. ಆವಯ್ಯನು ರಾಜಗಾಂಭೀಯ್ಯದಿಂದ ಅರಮನೆಯ ತ್ರಿಕಾಲ ಸತ್ಯವನ್ನು ನಾಕೇ ನಾಕು ಮಾತುಗಳಲ್ಲಿ ಯಿವರಿಸಿ ಯೇನು ಕೊಡಬೇಕು, ಯೇನು ಬಿಡಬೇಕು ಯಂದು ಯಿರೋ ಯಿಷಯಕ್ಕೆ ಬಂದದ್ದೂ ತಡವಾಗಲಿಲ್ಲ. ಅವರು ಯಿಂತಿಷ್ಟು ಯಂದು ನಯ ನಾಜೂಕಿನಿಂದ ಕೇಳಿದ್ದೂ ತಡವಾಗಲಿಲ್ಲ.. ಸಂದಾಯಗೊಳ್ಳೋ ಸಂಭಾವನೇಲಿ ತನಗಿಷ್ಟು ಬಡಕಲಯ್ಯಗಿಷ್ಟು ಕೊಡತಕ್ಕದ್ದೆಂದೂ, ಮಾತು ವಪ್ಪದಿದ್ದಲ್ಲಿ, ವಪ್ಪಿ ತಪ್ಪಿದ್ದಲ್ಲಿ ರಾಜ ಯಿದ್ರೋಹದ ಆಪಾದನೆ ಹೊರಿಸಿ ಸಿಕ್ಷೆಗೆ ಗುರಿಪಡಿಸಲಾಗುವುದೆಂದು ಹೇಳಿದ್ದೂ ತಡವಾಗಲಿಲ್ಲ.. ಆಗಿದ್ದು ತಲೆ ಅಲ್ಲಾಡಿಸೂತ ಸರಸೊತೀಯ ವರಪುತ್ರನಾದ ಚವುಡೋಜಿ ನಿಂತ ನಿಲುವೀಲೆ ಅರಮನೆ ಕಡೀಕೊಮ್ಮೆ ನೋಡಲು ಅದರ ವುಪ್ಪರಿಗೆಯು ತನ್ನ ಸಂಬಾಳ ಗಾತುರದಷ್ಟು ಕಂಡಿತು. ಅದರ ಬುಡವು ತನ್ನ ಚವುಡಿಕೆಯ ಗಾತುರದಷ್ಟು ಗೋಚರ ಮಾಡಿತು. ಮುಪ್ಪಾನು ಮುದೊಂದು ಅರಮನೆಯ ರೂಪದಲ್ಲಿ ತನ್ನತ್ತ ಬಲು ಕಕ್ಕುಲಾತಿಯಿಂದ ನೋಡುತ್ತಿರುವಂತೆ ಭಾಸ ಮಾಡಿತು. ಅದಕ್ಕೆ ಆ ಛಣ ಮರುಗಿದ ಆ ಗೊಂದಲಿಗನು ಅಮಾತ್ಯ ವಯ್ದಿಕರನ್ನು ಕುರಿತು ಯೇನು ಹೇಳಿದ್ದೆಂದರೆ... ನೋಡಿರಪ್ಪಾ...ನಾವು ವುಂಡೊಡನೆ ಸಾಯುವಂಥ ಮಂದಿ ಅದೇವು. ವಪ್ಪತ್ತುವುಪಾಸ ಯಿದ್ದರss ಸಾಯುವಂಥ ನಯ ನಾಜೂಕಿನ ಮಂದಿ ನೀವದೀರಿ.. ಅದಕಃ ನಾವು ವಂದು ದುಗ್ಗಾಣಿ ತಗಳಾಕಿಲ್ಲ.. ಮುಫತ್ತೇ ಬಂದೇವು, ಮುಫತ್ತ ಹೋದೇವು.. ನಮಾಟ ನೋಡಿದೋರ ಕಣ್ಣೂಳಗ ದೀವಿಗೆ ನಾಕ್ಕಾಲ ಬೆಳಗಿದರದೇ ನಮಗ ಸಂಭಾವನೆ, ನಮಾಟ ಪಾಟ ಕೇಳಿದೋರು ತಂಟೆಗೆ ರೋಗ ರುಜಿಣ ಬಾರದಿದ್ದರದೆss ನಮಗ ಗವುರವ ಧನ... ಫಲಾನ ದಿನದಂದು ಫಲಾನ ಸಮಯದಂದು ವಂದೊಂದು ಮನೆಯಿಂದ ಹತ್ತಾರು ಮಂದಿಯು ಹರಕೋತ ಹರಕೋತ ಬಂದು ಅರಮನೆಂತು ಕಟಾಂಜಣಿ ತುಂಬಲೆಡ ಬಲಕ ಹೇಳೆಂಟು ದೀವಟಿಗೆಗಳುರಿಯಲಕ ಹತ್ತಿದವು. ಕುದುರೆಡವ ಸ್ತ್ರೀದೇವಿಮಾತ್ಮ ಯಂಬಾಟವು ಅದಾಗಿದ್ದ ಕಾರಣಕ್ಕೆ ಹೆಚ್ಚಾಕಲ ತೂಕದ ಅಂತಾಡೆಪ್ಪನು ಯಿನಮ್ರವದನನಾಗಿ