ಪುಟ:ಅರಮನೆ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೪೩ ಹತ್ತು ಮಂದಿಯ ಜಗೇವನ್ನು ತಾನೋವ್ವನೇ ಆಕ್ರಮಿಸಿಕೊಂಡಿರುವಾಗ್ಗೆ... ಜಗನ್ನಾಯೀ ಜಯತು ಜಗದಂಬಾ ಆಯಿಮಾ ಕುದುರೆಡುವುವಾಸೇ ದೋಷ ಯಿನಾಶ್ ಯಂಬ ನಾಂದಿ ಪದದೊಂದಿಗೆ ಆರಂಭವಾಯಿತು. ರಾಗಿದಾನ, ಅನ್ನದಾನ, ವಸ್ತ್ರದಾನ, ಗೋಪಿದಾನ, ಚಿನ್ನದಾನ, ಯಿರುವೆಗೂ ಸಕ್ಕರೆದಾನ, ಪಕ್ಷಿಗಳಿಗೆ ಕಾಳುಕಡಿದಾನ ಯವೇ ಮೊದಲಾದ ಅಯಿವತ್ತೆಂಟು ದಾನಗಳಿಂದ ವಂಚಿತ ಗೊಂಡಿದ್ದಂಥ ಕುದುರೆಡವು ಪಟ್ಟಣದ ವರುಣನಮೂನಡೆಯಿತು.. ಕೊಪ್ಪರಿಕೆ ನೀರ ಮುಕ್ಕಳಿಸಿ ವುಗುತ ಬಂಡಿಗಾಲಿಯಗಲದ ಕಣ್ಣುಳ್ಳವಳಾದ, ಗುಂಬಿಗೇರಿಸುವಂಥ ಮೂಗುಳ್ಳವಳಾದ, ಅಗಸೀ ಬಾಗಲಷ್ಟಗಲದ ಬಾಯಿವುಳ್ಳಾಕಿಯಾದ ಸಾಂಬವಿಯು ಗುಡಿಹಿಂದಲ ಮೂಳೆ ಮೋಬಯ್ಯನ ಮಯ್ಯೋಳಗ ನೆಲಗೊಂಡ ಕಥಿಯೂ, ಅದನು ನಗೀ ಚಾಟಕಿ ಮಾಡಿದಕ ಭೂಮಿ-ಕಯ್ಯಾಸ ಜೋಡೂ, ಮರ-ಗಿಡ ಜೋಡೂ, ತಾಯಿಮಗ ಜೋಡೂ, ಸತಿ-ಪತಿ ಜೋಡೂ, ಜೀವಾತುಮ-ಪರಮಾತುಗಳ ಜೋಡೂ ಅಗಲಯೆಂಬ ಕಥಿಯೂ, ಹಂಗss ಮುಂದೊರಿತಾ...... ಜಗಲೂರೆವ್ವಯಂಬ ಪತಿರೊತೆಯು ಕುದುರೆಡವು ಯಂಬು ಘೋರಾರಣ್ಯದೊಳಗss ನಿಟ್ಟುಸುರೆಂಬ ನತ್ತನ್ನು ಮೂಗಿಗೆ ಮುಡಕೊಂಡು ಗಾಳಿ ವು೦ಬೂತss ಗಾಳಿ ತಿಂತ... ಯನುತಲಿದ್ದ ಸಮಯಕ್ಕೆ ಥಳಗೇರಿಯೊಳಗ ಕೋಳಿ ಕೂಗಿದ್ದು... ಬೆಳ್ಳಿ ಚುಮುಚುಮು ಮೂಡಿದ್ದು ತಡಾಗಲಿಲ್ಲ.. ಕೋಳಿ ಕೂಗಿನ ಸರಗುಣಿಕೆಯಲ್ಲಿ ಬಂಧಿತನಾಗಿ ಅಂತಾಡೆಪ್ಪನು ಬೆಳ್ಳಿಯ ರಂಗವಲ್ಲಿ ಗೆರೆಗುಂಟ ಹೊಂಟೇ ಬಿಟ್ಟ ಬ್ಯಾಡಾ.. ಯೀ ಸರುವತ್ತಿನಾಗ ಹೋಗಬ್ಯಾಡss ಯಂದು ತಡೆಯಲು ಬಂದ ಹೆಂಡತಿ ಕಂಬಳೆವ್ವನ್ನ ಕೊಸರಿದ.. ಅಯ್ಯೋ ತನ್ನ ಮಗಳು ಗಂಡನ ಕಳಕೊಂಡಯ್ತಲ್ಲಾ.. ಆನಿಯಂಥಾ ಅದು ವನವಾಸ ಪಡುತಯ್ತಲ್ಲಾ.. ಯಂದನಕಂತ ಕುದುರೆಡವು ಯಿದ್ದ ದಿಕ್ಕಿನತ್ತ ಹಾದಿಯಿಲ್ಲದ ಕಡೇಕ ಹಾದಿ ಮಾಡಿಕೊಂಡು, ಬೀದಿಯಿಲ್ಲದ ಕಡೇಕ ಬೀದಿ ಮಾಡಿಕೊಂಡು ಹೆಜ್ಜೆ ಹಾಕತೊಡಗಿದ. ವಂದು ಕಾಲಕ್ಕೆ ಕುಂತಳ ಪ್ರಾಂತಕ್ಕೆಲ್ಲ ಜಗಜಟ್ಟಿಯನಿಸಿದ್ದ ಅಂತಾಡೆಪ್ಪ. ತಮ್ಮ ಕುಲದಯ್ಯ ಜಗಲೂರಜ್ಞನ ವರಪರಸಾದದಿಂದ ಹುಟ್ಟಿದ್ದ ತನ್ನ ಮಗಳು.. ಸೇನಾಧಿಪತಿ ತಾಂಡೂರಯ್ಯನ್ನ ವಲ್ಲೆಂದಾಕಿ, ಪಿಕದಾನಿ ಮೋಬಯ್ಯನ ಕಯ್ಕ ಹಿಡಿದು ಯಿಪ್ಪತ್ತುತ್ತೂರುಸ ಸಮುಸಾರ ನಡೆಸಿರುವಂಥ ತನ್ನ ಮಗಳು... ಯಂದನಕಂತ ಹೊಂಟಿದ್ದ ಅವಯ್ಯನ ಹಾದೀಲಿ ಕಲ್ಲುಗಳು