ಪುಟ:ಅರಮನೆ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೪ ಅರಮನೆ ಕರಗಿ ಹುಡಿಯಾದವು, ಮುಳ್ಳುಗಳು ಮರುಗಿ ಹುವಾದವು. ಹಾವುಗಳು ಅಚ್ಚೇಕಡೇಕ, ಚೇಳುಗಳು ಯಿಚ್ಚೇಕಡೇಕ ಜರುಗಿ ಹಾದೀನ ಸೀದಾ ಸಾದಾ ಮಾಡಿದವು.. ಮಿಣುಕು ಹುಳುಗಳು ಮಿರಮಿರನೆ ಮಿರುಗುತ ಹಾದಿಗುಂಟ ಕಂದೀಲು ಹಿಡಿದವು.. ನೆಲವು ಅಗತ್ಯಕ್ಕೂ ಮೀರಿ ಹಿಂದಕ ಜರುಗುತಾ ಜರುಗುತಾ ಯಿರಲು ಕುದುರಡವು ಅಷ್ಟು ದೂರಕ ವುಳಕೊಂಡು ಬಿಡಲು.. - ಕರವ್ವನ ಬಾವಿಯೊಳಗಿಳಿದು ತನ್ನಂಗಾಲುಗಳನು ತಂಗಲು ಮಾಡಿಕೊಳ್ಳದೆ ಅವಯ್ಯ ನೆಂದೂ ಅಗಸೆ ಬಾಕಲು ದಾಟಿದಾತನಲ್ಲ.. ವಂದು ಕಾಲದಲ್ಲಿ ಪಟ್ಟಣದ ಬಾಯಾರಿಕೆ ತಣಿಸ ಲೋಸುಗ ಭಾವಿಗಾರಗೊಂಡು ಸರಣೆಪದವಿಗೇರಿದಂಥಾಕೆಯಾದ ಕರವ ಜಲರೂಪಧಾರಣ ಮಾಡಿ ಯೇಸು ವರುಸಂಗಳು ವುರುಳಿರುವವೆಂದರ ಆಸು ವರುಸಂಗಳು ವುರಳಯ್ತಾವು... ಅದಕ ಅವಯ್ಯಗ ಆಕೆ ಅಂದರ ಬಲು ಭಕುತಿಯು.. ಸರಸರ ಯಿಳಿದವಯ್ಯ ಮೊಣಕಾಲಮಟ.. ಯಾಕೋ ಸುಳ್ಳಂದವು ತನ್ನ ಸರೀರದೊಳಗಿನ ನರಗಳು.. ಮಾರೀಗಿಸು ವುದಕ, ಗಂಟಲೊಳ ಗೊಂದೆರಡು ಬೊಗಸೆ ವುದಕು ಸುರುವಿಕೊಂಡ. ಅಂತರಾಳ ದುಕ್ಕದ ಬಗ್ಗಡವಾತು.. “ಯವ್ವಾ.. ನಿನ್ನಾಸೀರುವಾದ ನನ ಮಗಳ ಮ್ಯಾಲ ಇರಲಿ ತಾಯಿ” ಯಂದನಕಂತ ಜಲದವೊಂದು ದೊಡ್ಡ ಮನಸೆಂದು ಬಗದು ಎಂದು ಸಲ ಯಾಕ.. ನೂರೊಂದು ಸಲ ಸಣುಮಾಡಿ ಮುವ್ವತ್ತೇಳು ಪಾವಟಿಗಳ ಮ್ಯಾಲ ಅಮರಿಕೀಲೆ ಹೆಜ್ಜೆಯನಿಕ್ಕುತ ಮ್ಯಾಲಕೇರಿದ. ನಡಿತಾ ನಡೀತಾss ದಳವಾಯಿ ಭೀಮಣ್ಣನಾಯಕನ ಹೆಸರನ್ನುಳಿದಿದ್ದ ಅಗಸೆ ಬಾಕಲ ಸನೀಕ ಬಂದ. ಪೂರುವ ಕಾಲದಲ್ಲಿ ಯಲ್ಲವ್ವ ಮಲ್ಲವ್ವ ಯಂಬ ಘನ ಸೊಸೇರು ಬಾಕಲ ನಿಲುವಿಗೆ ಆತುಮಾಹುತಿಗೊಂಡು ಹೊಗ್ರಹ ರೂಪಧಾರಣ ಮಾಡಿ ಯಡ ತೋಳಲ್ಲೊಬ್ಬಾಕಿ, ಬಲತೋಳಲ್ಲೊಬ್ಬಾಕಿ ಅಭಯ ಪ್ರದಾನ ಮಾಡುತ ನಿಂತುಕೊಂಡು ಬಿಂದಿಗೆ ಯೇಸು ವರುಸಂಗಳು ಆಗಿರುವಮೊದರ ಆಸು ವರುಸಂಗಳು ಆಗಿರುವವು. ಅವರ ದಯೆಯಿಂದಾಗಿಯೇ ಅಗಸೆ ಬಾಕಲವ್ವಲ್ಲಾಡಿಸುವ ತಾಕತ್ತು ಗುಡುಗು ಮಿಂಚು ಸಿಡಿಲು ಫಿರಂಗಿಗಳಿಗೆ ಹಿಂದ್ಯಾವತ್ತೂ ದಕ್ಕಿಲ್ಲ... ಯಿವಯ್ಯಗ ಅವರೀಶ್ವರೆಂದರ ಬಲು ಭಕುತಿ... ನಮ್ಮವ್ವಂದಿರಾ ನಿಮ್ಮ ದಯ ಜಗ್ಗರವ್ವನ ಮ್ಯಾಲ ಅಯಿತೆಂಬುದಕ ಗುರುತು ಮಾಡಿರೆಂದೀವಯ್ಯನು ಸಣುಮಾಡುತ ಬೇಡಿಕೊಳ್ಳುವಾಗ್ಗೆ ತಲಬಾಕಲ ಹಣೆಮ್ಯಾಲಿಂದ ಹುನ್ನೊಂದು ವುದುರಿ ಹಿಂದಲೆ ಮ್ಯಾಲ ಬಿತ್ತು.. ಅದನು ತಕ್ಕೊಂಡು ಭಯ ಭಕುತಿಯಿಂದ ಸಣುಮಾಡಿ ನಿಮ್ಮದು ದೊಡ್ ಮನಸು