ಪುಟ:ಅರಮನೆ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕನರಾ. ಯಂದು ತಾನಲ್ಲಿಂದ.. ಅಗೋ ಅಲ್ಲಿ ಮಗಳು... ಯಗೋ ಯಲ್ಲಿ ಅಪ್ಪನು.. ಪರಸ್ತೂರ ತಮೀಶ್ವರ ನಡುವೆ ದುಸ್ವೀಕಾರವು ಯೇರುಪಡದೆ ಯೇಸು ಕಾಲವಾತು? ಯೇನು ಕತೆಯು? ಮುಂದಕ ನಡಿತಾ ನಡಿತಾ ತಂದೆ ಮಗಳನ್ನು ನೋಡುವುದು, ಮುಂದ ಮುಂದಕ ನಡಿತಾ ನಡಿತಾ ಮಗಳು ತಂದೆಯನ್ನು ನೋಡುವುದು ಎಂದರಗಳಿಗೆ ನಡಿತೂ.. ನಡಿತು. ಯಾರಪ್ಪಾ. ನೀನು ನನ್ನಪ್ಪಯಿದ್ದಂಗದೀಯಲ್ಲಾ”... “ಅವುದಲ್ವಾ. ಖರೇವಂದರ ನಿನಗ ಸೊಂತ ಅಪ್ಪ ಆಗಬೇಕು.. ಅದಿಲ್ಲ... ನೀನು ಯೀ ಅಂತಾಡೆಪ್ಪನ ಮಗಳು ಜಗ್ಗೂರೆವ್ವ ಅವುದಲ್ಲೋ”.. “ಅವುದಪ್ಪಾ.. ಅವುದು.. ಆ ಜಗಲೂರೆವ್ವ ನಾನೇಯಾ.. ಅದಿಲ್ಲಿ.. ನೀನ್ಯಾಕ ಬಂದಿ..” .”ನಿನ್ನೊಡಲಕಂತ ಬಂದೀನಿ ತಾ?”..ನನಗೇನಾಗಂತ ಆಟು ದೂರದಿಂದ ನೋಡಲಕ ಬಂದೀಯಪ್ಪಾ.” .”ತಂದೆ ಆದವು ತನ್ನ ಮಗಳನ್ನು ನೋಡಲಕ ಸುಮಸುಮಕ ಬರಬಾರದಂತೀಯೇನು?”. “ನಿನ್ನೊಡಲಕdsತ ಬಂದೀನಿ ತಾಯಿ “.. “ಅವುದಪ್ಪಾ ಅವುದು.. ಸುಮ ಸಮಕ ಬರಬಾರದು. ತಂದೆ ಆದಾವಃ ಮಗಳು ಹೇಳಿಕಳುವಿದರು ಬರಬೇಕು..”.. “ಬೀಟೆಲ್ಲ ಆದಮ್ಯಾಕೂ ನೀನ್ಯಾಕ ಹೇಳಿ ಕಳುವಲಿಲ್ಲವ್ವಾ”.. “ಯೇನಾಗಯ್ತಂತ ಹೇಳಿಕಳುವಲಪ್ಪ.. ಸತಿ ಆದವಳ ಬಾಳಿನೊಳಗ ಯಿದೆಲ್ಲ ಮಾಮೂಲು.” ಹಿಂಗs ತಂದೆ ಮಗಳ ನಡುವೆ ಮಸ್ತು ಮಾತುಕತೆ ನಡೆದದ್ದನ್ನು ನಾಕು ಮಂದಿ ನಿಂತು ಕುಂತು ನೋಡದೆ ಯಿರಲಿಲ್ಲ.. ಯಂಥ ತಂದೆಯಿದ್ದಿರಬೇಕಿತನು ಯಂದು ಹೆಣ್ಣುಮಕ್ಕಳೂ, ಯಂಥ ಮಗಳಿದ್ದಿರಬೇಕೀಕೆಯು ಯಂದು ತಂದೆಯಂದಿರೂ.. ಅದೆಲ್ಲಿಂದಲೋ ಮೋಡಿ ಬಂದ ಸೂರನು ಅವಯ್ಯನ ಸುತ್ತ ಯಗರಾಡಿದ್ದೇನು? ವಲ್ಕ ವಯ್ಯ ಅಂದದ್ದೇನು? ಅವಯ್ಯನ ಮಖಮಾರಿ ನೆಕ್ಕಾಡಿದ್ದೇನು? ಪೂಜಾಸ್ಥಳವಾಗಿ ಮಾರುಪಟ್ಟಿದ್ದ ತನ್ನ ಗಂಡನ ಮನೆಕಡೇಕ ಬೊಟ್ಟುಮಾಡಿ ತೋರಿಸದೆ ಹಡದಪ್ಪನನ್ನು ಸೀದss ಬೇಯಿನ ಮರದಡೀಕೆ ಕರೆದುಕೊಂಡು ಬಂದಳು. ಅಲ್ಲಿಲ್ಲಿ ನಿಂತ ನಿಲುವೀಲೆ ನೋಡುತಲಿದ್ದವರೆಷ್ಟೋ? ಯಿಲ್ಲಲ್ಲಿ ಕುಂತ ಕನಕೀಲೆ ನೋಡುತಲಿದ್ದವರೆಷ್ಟೋ ?.. ಮಿಂಚೇರಿ ಸಮುಸ್ತಾನದ ಪಯಿಲುವಾನರಿಗೇನು ಕುದುರೆಡವೇನು ೩ನ ಗುರುತ ಯಿರದಿದ್ದ ಸ್ಥಳಯೇನಾಗಿರಲಿಲ್ಲ.. ತಾನು ಹರೇದವನಾಗಿದ್ದಾಗ ಸದರಿಪಟ್ಟಣದ ಕಲ್ಲ, ಮಲ್ಲ ಯಂಬ ಮಲ್ಲರೀಶ್ವರನ್ನು ಯಡಬಲಕ ಯಿಟುಕೊಂಡು ದೂರದ ಯಿಸಿಲ ಪಟ್ಟಣದ ರಾಜಾಶ್ರಯದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ