ಪುಟ:ಅರಮನೆ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ୦୫୧ ದೊಡ್ಡವನು' ಯಂದು ಕಯ್ಯ ಮುಗುದಳು. ಮಯ್ಲಿಗಿ ಬಟ್ಟೆಗಳನ್ನು ವಯ್ಯಲಕೆಂದು ಅಗಸರ ಅವುರಪ್ಪ ಅದೇ ತಾನೆ ಬಂದು ತನ್ನೆದುರು ಕುಕ್ಕುರುಗಾಲೀಲೆ ಕುಂತುಕೊಂಡ. ಅವನು ಬಟ್ಟೆಬರೆ ಯಣಿಸಿಕೊಳ್ಳುತ್ತಿರುವಾಗ್ಗೆ ತನಗೆ ಅನುಮಾನ ಬಂದು ವಯಸ್ಸು ಕೇಳಿದಳು. ಆತ “ಅಂಯವತ್ತರ ಮ್ಯಾಲಯ್ಕೆ ದೊರೆಸಾನಿ” ಯಂದು ಜವಾಬು ನೀಡಿದೊಡನೆ ಆದ ಸಂತೋಷವನ್ನು ಯಕ್ತಪಡಿಸಲಿಲ್ಲ. ತನ್ನ ಮಗಳ ಬಟ್ಟೆಬರೆ ಯಾರ ಕಣ್ಣಿಗೂ ಬೀಳದಂತೆ ನೋಡಿಕೊಳ್ಳಬೇಕೆಂದು ಯಚ್ಚರಿಸಿದಳು. ನರ ವುಬ್ಬಿ ಯಿಳಿಯುತಲಿದ್ದ ಮುಂಗಯ್ಯಗಳಿಂದ ಬಟ್ಟೆ ಗಂಟನ್ನು ಹೆಗಲ ಮಾಲಿಟ್ಟುಕೊಂಡು ವುಂಬಲಕ, ತಿಂಬಲಕ ನೀಡಿಸಿಕೊಂಡು ತನ್ನ ಕೇರಿ ದಾರಿ ಹಿಡಿದ. ಆಳೆತ್ತರದ ನಾಗರಕಲ್ಲಿನ ಹಿಂದೆ ಕಾಯುತ್ತ ಕೂಕಂಡಿದ್ದ ಸದರಿ ಪಟ್ಟಣದ ವಣಿಕ ವಂಕದಾರಿ ಗೋಯಿಂದಪ್ಪ ಪೋಷಿ«ಯ ಮಗ ಸುಬ್ಬಣ್ಣನು ವಂದೇ ಜಿಗಿತಕ್ಕೆ ಮುಂದೆ ಬಂದ. ವಂದು ಬೆಳ್ಳಿ ರೂಪಾಯಿಯನ್ನು ಯಿಸಿದುಕೊಂಡು ಅಗಸರವನು ಬಟ್ಟೆಗಂಟನ್ನು ಅವನ ಸುಪದ್ದಿಗೆ ವಪ್ಪಸಿದ. ಆ ಹದಿಹರೆಯದ ಶಾಮಲ ಸುಂದರಾಂಗನು ಗಂಟನ್ನು ಬಿಚ್ಚಿ ಮಯ್ಲಿಗೆ ಕಲಾಕ್ರುತಿಗಳಿದ್ದ ಲಂಗ, ಚಡ್ಡಿ ಪನ್ನಗಳನ್ನೇ ಚಿನ್ನಾಸಾನಿಯಂದು ಭ್ರಮಿಸಿ ಮುತ್ತಿಕ್ಕುವುದನ್ನು ಭಾಳಾ ಹೊತ್ತಿನವರೆಗೆ ಮಾಡುತಃ ಮಾಡುತ ಸ್ಟಲಿಸಿ ಸುಖಪಟ್ಟನು. ಸುಬ್ಬಣ್ಣನ ಥರದ ಜಾಯಮಾನದವರು ಯೇನಿಲ್ಲಾಂದರು ಅಯಿದಾರು ಮಂದಿ ಹುಡುಗರಿದ್ದರು... ಅವರೆಲ್ಲ ತಮ್ಮ ತಮ್ಮ ಯೋಗ್ಯತಾನುಸಾರ ಅಗಸರಾತನಿಗೆ ಕಪ್ಪ ತೆತ್ತು ಸುಖಿಸುತಲಿದ್ದರು. ಯಿಂಥ ವಳ ಆದಾಯಗಳಿಂದಾಗಿ ಅವುರಪ್ಪನು ದುಂಡು ದುಂಡಕೆ, ಬೆಳು ಬೆಳ್ಳಗೆ ಆಗಿದ್ದನು. ಅತ್ತ ಹರಪನಹಳ್ಳಿ ವಳಿತದೊಳಗ ಕಳ್ಳಕಾಕರ ವುಪಟಳ ಆಗದೀ ಅಂದರ ಅಗದೀ ಆಗಿ ಬಿಟ್ಟಿತ್ತು. ಜನರು ರಾಜನಾದವನಿಗೆ ದೂರು ಕೊಡುವುದನ್ನೇ ಬಿಟ್ಟುಬಿಟ್ಟಿದ್ದರು. ಅಲಗಿಲವಾಡ, ಕುಂಚೂರು, ಅರಸನಾಳು, ಗುಂಡಗತ್ತಿಗಳಂಥ ಮರುಗಳ ರಾಜರು ಪ್ರಜೆಗಳಾದವರು ರಾಜನಿಗೆ ದೂರು ಸಲ್ಲಿಸುವುದೆಂದರೆ ರಾಜಸತ್ತೆಯನ್ನು ಗವುರಿಸುವುದೆಂದೇ ಅಲ್ಲ, ದೂರು ಕೊಡದವರನ್ನು ರಾಜದ್ರೋಹವೆಂದು ಪರಿಗಣಿಸಿ ಶಿಕ್ಷಿಸಲಾಗುವುದೆಂಬ ಕಾನೂನು ಮಾಡಿದರೂ ಪ್ರಯೋಜನವಾಗಲಿಲ್ಲ. ಅದನ್ನು ಕೇಳಿ ನಗಾಡಿದರು ಪ್ರಜೆಗಳು. ಚಿರಸ್ತಳ್ಳಿ ಗುಂಡಲಳ್ಳಿ ಕಡೇಲಂತೂ ಪ್ರಜೆಗಳೇ ತಮ್ಮ ವುಸ್ತುವಾರಿಯನ್ನು ತಾವೇ ವಹಿಸಿಕೊಂಡಿದ್ದುಂಟು. ವಾಗ್ಗೇರಿ, ತೆಲಿಗಿ ಕಡೇಲಂತೂ ಪ್ರಜೆಗಳೇ