ಪುಟ:ಅರಮನೆ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೫೧ ಅರ ಲೀಗಿನ ಕಾಲದ ಮಂದಿಗೆ ಅಗ್ಗವಾದೀತಾ..? ತಮ್ಮ ಮೂಲ ಯಿರುವುದು ಸಾತವಾಹನರಲ್ಲಿ ಯಂಬುದು ಯಿವರಿಗೆ ಅಗ್ಗವಾದೀತಾ.? ಯಡ್ಡವರನ ಕಣ್ಣಿಗೆ ಅರಮನೆ ಯದ್ದು ಕಾಣಬೇಕು.. ರಾಜ ಪರಿವಾರದವರೆದುರು ಅವ ಸೊಂಟ ಬಗ್ಗಿಸುವಂತಾಗಬೇಕು. ಯಿದಕ್ಕೆ ಯಷ್ಟೇ ಖಾದರೂ ತಾವು ಮದೆಗುಂದಬಾರದು.. ಯಿ ಯಿಷದಲ್ಲಿ ಮತ್ತಷ್ಟು ಸಾಲ ಮಾಡಿದರೂ ಚಿಂತೆಯಿಲ್ಲ.. ಹೆಂಗೋ ಕುಬೇರನ ವಾರಸುದಾರ ತಿರುಪಾಲಯ್ಯ ಸ್ನೇಷಿ« ತಮ್ಮ ಅರಮನೆಯ ಕಣ್ಣಳತೆಯಲ್ಲಿಯೇ ಅದಾನ.. ಯಂಬ ಕಾರಣಕ್ಕೆ.. ಹೇಳಿ ಕಳುವಿದೊಡನೆ ಪೋಷಿ«ಯು ದಾರಿದ್ಯ ಯಂಬ ಹಚ್ಚಡವನ್ನು ಮಯ್ತುಂಬ ಹೊದ್ದುಕೊಂಡು ಅರಮನೆಗೆ ಬಾರದೆಯಿರಲಿಲ್ಲ. ಅರಮನೆಯ ದೀನಸ್ಥಿತಿಯನ್ನು ಕಂಡು ಮಮ್ಮಲನ ಮರುಗದೆ ಯಿರಲಿಲ್ಲ.. ಯಾರಿಗೆ ಸಾಲ ಕೊಟ್ಟರೂ ಲಚುಮೀದೇವಿ ಮುನುಸಿಕೊಳ್ಳಲ್ಲ ತಾಯೀ.. ಅರಮನೆಗೆ ಸಾಲ ಕೊಟ್ಟಿದ್ದೇ ಮಾಪರಾಧವಾಗಿ ಹೋಗಿರುವುದು. ವಂದರ ಹಿಂದ ವಂದರಂತೆ ಲುಕ್ಸಾಣ ಬಂದು ಕಯ್ಯಕಾಲು ಆಡದಂಗಾಗಿಬಿಟ್ಟಯ್ತಿ.. ದಾರಿದವು ಕವುಕೊಂಡುಬಿಟ್ಟಯ್ಕೆ.. ಅದೂ ಅಲ್ಲದೆ ಮೊನ್ನೆ ದಿವಸ ನಮಾವ ವಂಕದಾರಿ ಗೋಯಿಂದಯ್ಯ ಕೂಡ್ಲಿಗಿಯಿಂದ ಬಂದು ಮನೇಲಿ ಯಿದ್ದ ಬಿದ್ದುದೆಲ್ಲವನ್ನೂ ಬಳಕೊಂಡು ಹೋಗಿಬಿಟ್ಟ. ನೆಂಟರಲ್ಲಿ ಸಾಲ ಮಾಡಬಾರದೆಂದು ಹಿರೇಕರು ಹೇಳಿರೋದು ಯಿದಕ್ಕೇ ನೋಡು ತಾಯಿ.. ಯಿಷಾ ಕುಡೀಬೇಕೆಂದರೂ ವಂದೇ ಎಂದು ದುಗ್ಗಾಣಿ ನನ್ನತ್ತರ ಯಿಲ್ಲದಂಗಾಗಯ್ತಿ.. ಯಂದು ಅವನು ಕಣ್ಣಲ್ಲಿ ನೀರು ತಂದುಕೊಂಡಿದ್ದೇನು..? ಸತ್ಯದ ತಲೆ ಮ್ಯಾಲ ಹೊಡದಂಗ ಅಭಿನಯ ಮಾಡುತ ಹೇಳಿ ಹೋಗಿದ್ದೇನು? ಎಂದು ಛಣ ಅಸಾಯಕತೆಯಿಂದ ನಖಸಿಖಾಂತ ಕಂಪನಕ್ಕೀಡಾಗಿಬಿಟ್ಟಳು ರಾಜಮಾತೆ.. ಯೇನಾರ ವಾರ ಬೇಕ೦ದರ ಅ೦ಥ ಬೆಲೆ ಬಾಳುವ೦ಥ ಭಾವ ವಸ್ತುವೂಅರಮನೆಯೊಳಗಿಲ್ಲ. ಬೆಳೆಬಾಳುವಂಥ ವಸ್ತುಗಳೆಂದರ.. ಅವು ಕೇವಲ ನೆನಪುಗಳು ಮಾತ್ರ.. ನೆನಪುಗಳನ್ನು ಕೊಳ್ಳುವಂಥವರು ಸದರಿ ಕಲಿಯುಗದಲ್ಲಿ ವುಂಟೇನು? ಯೀಗಲೇ ತಮ್ಮ ಪರಿಸ್ಥಿತಿಯು ಅಧೋಗತಿಗೆ ತಲುಪಿರುವುದೆಂದ ಮ್ಯಾಲ ತಾನು ಸತ್ತಮ್ಯಾಲ ತನ್ನ ಸಮಾಧೀನ ಕಟ್ಟಿಸಲಿಕ್ಕಾದೀತಾ? ತನ್ನ ಪುರಾಣ ಬರೆಯಿಸಲಿಕ್ಕಾದೀತಾ.. ಪ್ರತಿ ಪುಣ್ಯ ತಿಥಿಯಂದು ಭರರಿ ಅನ್ನ ಸಂತರಣೆ ಮಾಡಿಸಲಿಕ್ಕಾದೀತಾ? ತನ್ನ ಸಮಾಧಿ ಮಂದಿರದೊಳಗೆ ಧೂಪ ದೀಪವ ನಯವೇದ್ಯೆ ನಡೆಸಲಿಕ್ಕಾದೀತಾ? ಅಯ್ಯೋ ತನ ಕರುಮವೇ. ತನ್ನನ್ನು ಯಾಕ