ಪುಟ:ಅರಮನೆ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೫೩ ಮಾಡಿದರೆಂಬ ಕಾರಣಕ್ಕೆ ಬೆಕ್ಕುಗಳನ್ನೂ ಕೊಕ್ಕೊಕ್ಕೊ ಯಂದು ಕೂಗಿ ಅಪಸವ್ಯ ಮಾಡಿದರೆಂಬ ಕಾರಣಕ್ಕೆ ಕೋಳಿಗಳನ್ನೂ ಬಚ್ಚಿಡುತ್ತಿದ್ದುದೋ.. ತಮ ತಮ್ಮ ಹುಡುಗರುಪ್ಪಡಿಯ ಸಿಂಬಳ ಗೊಣ್ಣೆಯನ್ನು ತಾಯಂದಿರು ವರೆಸುತ್ತಿದ್ದುದೋ, ತಲೆಗೂದಲನ್ನು ವಪ್ಪಮೋರಣ ಮಾಡುತ್ತಿದ್ದುದೋ.. ಅಳೋಗಬಾರದೆಂದೂ, ಯದೆಯನ್ನು ಕಲ್ಲು ಮಾಡಿಕೊಂಡಿರಬೇಕೆಂದೂ ಧಯ್ರ ತುಂಬುತ್ತಿದ್ದುದೋ.. ತಮ್ಮ ತಮ್ಮ ಮನೆ ಅಂಗಳದಲ್ಲಿ ಕಸ ಗುಡಿಸಿ ಸೆಳೊಡೆದು ರಂಗವಲ್ಲಿ ಹಾಕುತ್ತಿದ್ದುದೋ.. ಮುಪ್ಪಾನು ಮುದುಕರಿಗೆ ಮನೆ ಬಿಟ್ಟು ಹೊಂಡಬ್ಯಾಡಿರೆಂದು ದಯನಾಸ ಪಡುತ್ತಿದ್ದುದೋ.. ಕುಂಪಣಿ ಸಾಹೇಬ ಪತ್ನಿ ಸಮೇತ ಕುದುರೆಡವಿಗೆ ಆಗಮನ ಮಾಡಲಿರುವನೆಂಬ ಸಂಗತಿ ಯಾವ ಮಾದರಿಯಲ್ಲೋ ಅಕ್ಕಪಕ್ಕದ ದೇಸಗಳಾದ ಗುಂಡುಮುಳುಗು, ಕಾನಾಮಡುಗು, ಕುಮತಿ, ವಟ್ಟಮ್ಮಳ್ಳಿಗಳಿಗೆಲ್ಲಾ ಹಬ್ಬಿಬಿಟ್ಟಿತ್ತು.. ಜ್ಞಾ ಪ್ಲಾ.. ಸಮುದ್ರಗಳನ್ನು ಕಂಡುಂಡವರು.. ತಿಂಗಳು ಪಲ್ಯಂತರ ಸಮುದ್ರಗಳೊಳಗ ಯಾನ ಮಾಡಿರೋರು.. ಗಂಧಯ್ಯಲೋಕದ ಆಜುಬಾಜಲ್ಲಿ ರೋರು ಫಲಾನ ಪಟ್ಟಣಕ್ಕೆ ಬರುತ್ತಿರುವರೆಂದ ಮ್ಯಾಲ ತಾವ್ಯಾಕ ಅವರನ್ನು ನೋಡಿ ತಮ್ಮ ತಮ್ಮ ಕಣ್ಣುಗಳನು ಪಾವನಗೊಳಿಸಿಕೊಳ್ಳಬಾರದೆಂಬ ಯಿಚ್ಛೆಯಿಂದ ಗಂಡೂ, ಹೆಣ್ಣೂ ಮಕ್ಕಳು ಮರಿ ಕಟ್ಟಿಕೊಂಡು ಸರನೆ ಯದ್ದು ಬಿರನೆ ಹೊಂಟು ಬಂದ ಪರಿಣಾಮವಾಗಿ... ಸಿವ ಸಿವಾss.... ಆ ತುದಿಯಲ್ಲಿ ಬಡಗಣ ದಿಕ್ಕು ಕೆಂಧೂಳಿನ ಆಭರಣ ಮುಡಕೊಂಡದ್ದು ತಡವಾಗಲಿಲ್ಲ.. ಧೂಳಿನೊಳಗ ಸಾರೋಟು ಪವನೆ ಮೂಡಿದ್ದು ತಡವಾಗಲಿಲ್ಲ... ಕುದುರೆಗಳ ಖುರಪುಟಗಳ ಸದ್ದು ಮ್ರುದಂಗದೋಪಾದಿಯಲ್ಲಿ ನುಡಿಯಲಕ ಹತ್ತಿದ್ದು ತಡ ಆಗಲಿಲ್ಲ.. ಹಾಯ್.. ನಮ್ಮಪ್ಪನೇ.. ಹಾಯ್ ನಮ್ಮವ್ವನೇ.. ಯೇಟು ಕೆಂಪಾನುಕೆಂಪಗದೀರಲ್ಲ... ನಿಮ್ಮ ಮಯ್ಯ ಮ್ಯಾಲ ತೊಗಲಲ್ಲೋ ಯಿಲ್ಲವಾ ೧ರಂದವರಿವರು ವುದ್ದರಿಸ್ತ ಬೊಟ್ಟುಗಳನ್ನು ಮೂಗಿನಮಾಲ ಯಿಟ್ಟುಕೊಂಡಿದ್ದು ತಡವಾಗಲಿಲ್ಲ.. ಅವರಿವರು ಆರತಿ ಬೆಳಗಿದ್ದಾಗಲೀ.. ಕಾಲಿಗೆ ನೀರು ಸುರುವಿದ್ದಾಗಲೀ, ಯಪ್ಪಾ ನೀನು ಬಲಗಾಲಿಟ್ಟು ಪುರ ಪ್ರವೇಶ ಮಾಡು, ಯವ್ವಾ ನೀನು ಹೆಣುಮಗಳದಿ, ಯಡಗಾಲಿಟ್ಟು ಪುರಪ್ರವೇಶ ಮಾಡು ಯಂದದ್ದು ತಡವಾಗಲಿಲ್ಲ... ರರುಬೊಂಬೆಯಂತೆಯೂ ಜೆನ್ನಿಫರುಹೆತ್ತ ತಾಯಿಯಂತೆಯೂ....