ಪುಟ:ಅರಮನೆ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರಾಜಮಾತೆ ಭಮ್ರಮಾಂಬೆಯು ಆ ದಂಪತಿಗಳೀಶ್ವರನ್ನು ಪರಾಧೀನ ಅರಮನೆಗೆ ಕರೆದೊಯ್ದು ಸತ್ಕರಿಸುತ್ತ ತನಗ ವಾರಸತ್ವರೀತ್ಯಾ ಸಲ್ಲಬೇಕಾದ ಚರಾಸ್ತಿ ಕೊಡಬೇಕೆಂದೂ.. ತನಗ ಪಿಂಚಣಿ ಗೊತ್ತುಮಾಡಿದ್ದಲ್ಲಿ ಯಿಹಲೋಕವನ್ನು ತ್ರಿಕರಣಪೂರೈಕವಾಗಿ ತ್ಯಜಿಸುವುದಾಗಿಯೂ ಅರಕೆ ಮಾಡಿಕೊಳ್ಳುತ್ತಿರುವಾಗ್ಗೆ, ಜೆನ್ನಿಫರು ಆ ಅರಮನೆಯೊಳಗೆ ಅಡ್ಡಾಡುತ ಯಿಂಗಲೆಂಡಿನ ಬಂಕಿಂಗ್ ಹ್ಯಾಮ್ ಅರಮನೆಯನ್ನು ತುಲನೆ ಮಾಡುತ ಯಿದ್ದಳು. ಅದು ಯತ್ತ? ಯಿದು ಯತ್ತ? ರೋಮ ರಹಿತ ಕಾಟಯ್ಯನಾಯಕನು ಆಕೆಯನ್ನು ಜಾಲಂದರದ ಕಿಂಡಿಯೊಳಗ ನೋಡುತ್ತಿರದೆ ಯಿರಲಿಲ್ಲ... ಅತ್ತ ಬಳ್ಳಾರಿಯೊಳಗ ವಸ್ತಿ ಮಾಡಿದ್ದ ಮನೋ ಸಾಹೇಬನು ಮುಂದ ಮುಂದ, ವಾಕ ಸಾಹೇಬನು ಹಿಂದ ಹಿಂದ.. ವಾಸ್ತು ರೀತ್ಯಾ ಯೇಶಾನ್ಯಭಿಮುಖ ಬಾಗಿಲನ್ನು ಹೊಂದಿದ್ದ ಆ ಕಾರಾಗ್ರುಹವು ಕಲೆಟ್ಟರ ಸಾಹೇಬನ ಕನಸಿನ ಕೂಸು, ಕುಂಪಣಿ ಸರಕಾರದ ಪ್ರತಿಷ«ಯ ಲಾಂಛನ. ನೋಡಿದೊಡನೆ ಯಂಥವರೂ ಕುಂಪಣಿ ಸರಕಾರದ ಸ್ವಾಮಿತ್ವವನ್ನು ನೋಟ ಮಾತ್ರದಿಂದ ವಪ್ಪಿಕೊಂಡುಬಿಡಬೇಕು. ಅಂಥ ಕಟ್ಟಡವು.. ಮುಂದೆ ಬಂಧನಕ್ಕೊಳಗಾಗಲಿರುವ ಗಡೇಕಲ್ಲು ಭೀಮಲಿಂಗೇಶ್ವರನ ನಿಜಭಕುತನಾದ ಬೊಬ್ಬಿಲಿ ನಾಗಿರೆಡ್ಡಿಯ ವಝಿಯನ್ನು ಸದರಿ ಕಟ್ಟಡವು ತಡಕಂಠದಾ ಯಂಬ ಪ್ರಶ್ನೆಯು.. ಹಲ್ಲಿ ಮೊಸರುವಳ್ಳಿ ಜಾಯಮಾನದ ಯಲ್ಲಾಪ್ರಕೊರಚರಟ್ಟಿಯ ಚೋರರನ್ನು ಸದರಿ ಕಟ್ಟಡವು ತಡಕಂಠದಾ ಯಂಬ ಯಿನ್ನೊಂದು ಪ್ರಶ್ನೆಯು... ಹಾಲಿ ಕಟ್ಟಡದೊಳಗ ಶಿಕ್ಷೆಯು ಅನುಭವ ವೇದ್ಯವಾಗುತ್ತಿರುವುದೋ ಯಿಲ್ಲವೋ ಯಂಬ ಮಗುದೊಂದು ಪ್ರಶ್ನೆಯು, ಯಿಂಥತ್ತಿಪ್ಪತ್ತು ಪ್ರಶ್ನೆ, ಅನುಮಾನಗಳನ್ನು ಹೆಜ್ಜೆಗೊಂದೊಂದರಂತೆ ಧರಿಸುತ್ತ ಅಷ್ಟು ದೂರದಲ್ಲಿದ್ದ ಕಾರಾಗ್ರಹವನ್ನು ಅಲುಪ ಸೋಲುಪ ಆತಂಕದಿಂದಲೇ ಪ್ರವೇಶ ಮಾಡಿದನು. ಯಿಯಿದ್ದ ಅಪರಾಧಗಳಂಗಯ್ತು ಶಿಕ್ಷೆ ಅನುಭವ ಮಾಡುತಲಿದ್ದ ಖಯ್ಕೆಗಳ ಯೋಗ ಕ್ಷೇಮವನ್ನು ಯಿಚಾರಿಸಿದನು. ಹಂಗೆ ಹೋಗುತ್ತಾ ಹೋಗುತಾ ಬೊಬೈಲನಾಗಿರೆಡ್ಡಿಯ ಬಲಗಯ್ಯ ಬಂಟನಾದ ವಲಸಾರೆಡ್ಡಿಯನ್ನು ತಲುಪಿ ಹೋಗಲಾದರೂ ಪ್ರಾಣವುಳುಸಿಕೋ ಯಂದು ಕೇಳಲಾಗಿ ಆ ಗಿಡ್ಡಾಕ್ರುತಿಯು 'ಪ್ರಾಣ ಕೊಡುವೆನೇ ವಿನಾ.. ನಮ್ಮ ದೇವರ ಗುಟ್ಟು ಬಿಟ್ಟುಕೊಡುವುದಿಲ್ಲ' ಯಂದು ಖಡಾಖಂಡಿತವಾಗಿ ಹೇಳಿದನು. ಅದಕ್ಕಿದ್ದು ಕಲೆಟ್ಟರು ಸಾಹೇಬನು